ನಿನ್ನ ಹಸಿವ ಹಿಂಗಿಸಲಿಲ್ಲವೆಂದು ಬಯ್ಯಬೇಡ. ಈ ಪುಣ್ಯ ಭೂಮಿಯಲಿ, ಪವಿತ್ರ ನದಿಗಳ ಸಂಗಮವಿದೆ ನಿನ್ನ ಹೊಟ್ಟೆ ತಣ್ಣಗಿಡಲು. ಪದಕಗಳಿಸುವ ವಿದ್ಯೆ ಕಲಿಸಲಿಲ್ಲವೆಂದು ಜರಿಯ ಬೇಡ. ಋಷಿ ಮುನಿಗಳ ವೇದ ಗ್ರಂಥಗಳಿವೆ ನೀನು ಸಂಸ್ಕಾರ ಹೊಂದಲು. ನಡುರಾತ್ರಿಯ ...

ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ ಮಲಗಿದ ರೈತನ ಕಣ್ಣೀರು ನೋಡಿರುವೆ. ಧರ್ಮ ಭ...

ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು ಕ...

ಕಾಲವೇ, ನನಗೆ ನನ್ನ ಕಳೆದು ಹೋದ ಬಾಲ್ಯ ಕೊಡು. ಕುಣಿಯಲು ಅಂಗಳ ಕೊಡು, ಆಡಲು ಆಟಿಕೆ ಕೊಡು. ನನ್ನ ಯೌವನವನ್ನು ಮತ್ತೆ ಬರುವ ಮುದಿತನವನ್ನು ನೀನೇ ಇಟ್ಟುಕೋ. ನಾನು ಮಗುವಾಗಿ ಬೀಳುತ್ತಾ, ಏಳುತ್ತಾ, ಕುಣಿಯುತ್ತಾ ನಡೆಯ ಬೇಕಾಗಿದೆ ಆಡಬೇಕಾಗಿದೆ, ಓಡ ಬ...

ಕರಿಮೋಡ ಕರಗಿ ಹರಿದು ಹರುಷದ ಧಾರೆ ಭೂದೇವಿ ಮೈತುಂಬಿ ಬರಲಿ. ಬಾಳ ದೀಪಗಳು ಬೆಳಗುತ್ತಾ ಇರಲಿ ಮನ-ಮನೆಗಳು ನಗುತಲಿರಲಿ. ಜಾತಿ ವಿಜಾತಿಯ ತೊರೆದು ಭಾತೃತ್ವವ ಮೆರೆದು ಒಂದಾಗಿ ದೀಪ ಹಚ್ಚೋಣ. ಭಾರತಾಂಬೆಯೆ ನಮ್ಮ ಜನ್ಮ ನೀಡಿದ ತಾಯಿ ಒಂದಾಗಿ ರಕ್ಷೆ ನೀಡ...

ಪಟ್ಟಣದ ರಾಜರಸ್ತೆಗೆ ತಾಗಿದ ಸಮತಟ್ಟಾದ ಆ ಸ್ಥಳದ ಮೂಲೆಯಲ್ಲಿ ನಿಂತುಕೊಂಡು ಆ ಕಪ್ಪು ಹುಡುಗ ರಸ್ತೆಯನ್ನು ದಿಟ್ಟಿಸುತ್ತಿದ್ದ. ಅವನ ಕಣ್ಣೆಲ್ಲಾ ಸಾಮಿಲ್ಲಿನಿಂದ ಖರೀದಿಸಿ ತಲೆಹೂರೆಯಾಗಿ ರೀಪು ಕಟ್ಟಿಗೆಗಳನ್ನು ಒಯ್ಯುತ್ತಿರುವ ಆ ಹೆಂಗಸಿನ ಮೇಲೆಯೇ ...

ಹೊದ್ದುಕೊಂಡ ಹರಿದ ಕಂಬಳಿಯನ್ನೇ ಮೈಗೆ ಸುತ್ತಿ ಕೊಂಡು ವಾಚರ್ ಮಾದ ಎದ್ದು ಬಾಗಿಲು ತೆರೆದು ಹೊರಗೆ ಬಂದ. ಏನೋ ನೆನಪಾಗಿ ಪಕ್ಕದ ಕೋಣೆಯ ಕಡೆ ಇಣುಕಿ ನೋಡಿದ. ಪಾರೆಸ್ಟರ್ ಕಂಬಳಿ ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದುದನ್ನು ನೋಡಿ ಸಮಾಧಾನ ಪಟ್ಟುಕೊ...

ಕ್ಯಾರಿಯರ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಅವಳು ಕಾರಿನಿಂದ ಕೆಳಗಿಳಿದಳು. ತಲೆ‍ಎತ್ತಿ ಕೊಂಡು ತನ್ನ ಪರಿಚಿತ ಸ್ಥಳವನ್ನೊಮ್ಮೆ ವೀಕ್ಷಿಸಿ ನಿಧಾನವಾಗಿ ನಡೆಯತೊಡಗಿದಳು. ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮುಳುಗುವ ತಯಾರಿಯಲ್ಲಿದ್ದ. ಆಗ ತಾ...

ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕೆಲವೇ ಕಿಲೊ ಮೀಟರ್ ದೂರದಲ್ಲಿದ್ದ ಆ ಸಣ್ಣ ರೈಲ್ವೇ ಸ್ಟೇಶನ್‌ಗೆ ಯಾವುದೇ ಮಹತ್ವವಿರಲಿಲ್ಲ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರ ಅನುಕೂಲತೆಗಾಗಿ ಅಲ್ಲೊಂದು ರೈಲ್ವೇ ಸ್ಟೇಶನ್ ನಿರ್ಮಾಣ ಹೊಂದಿದ್ದರೂ ಮುಂದೆ ಸ್ವಾ...

ಮಾರ್ಕೆಟ್ ಬದಿಯ ಪರಿಚಯದ ಸೆಲೂನ್ ಅಂಗಡಿ ಪಕ್ಕ ಬೈಕ್ ನಿಲ್ಲಿಸಿ ಮಧು ಹೆಂಡತಿ ಕೊಟ್ಟ ಚೀಟಿಯನ್ನು ಕಿಸೆಯಿಂದ ಹೊರ ತೆಗೆದ. ಹಾಲು, ಸ್ವೀಟ್ಸ್, ಬಾಳೆಹಣ್ಣು, ಮೂರು ಬಗೆಯ ತರಕಾರಿ, ಟೊಮೆಟೋ, ಬ್ರೆಡ್ ಹಾಗೂ ಕೊನೆಯ ಐಟಂ ಎರಡು ಕೆ.ಜಿ. ಕೋಳಿ ಮಾಂಸ. ಕಡ...