ಹೊಡೆ- ಹೊಡೆ – ಹೊಡೆ ಪಡುಗಡಲಿನ ತೆರೆ ತಡಿಯೊಡೆಯುವವರೆಗೂ, ತಡೆ – ತಡೆ – ತಡೆ ಕಡಲಲೆಗಳ ಹೆಡೆ ದಡ ಮುಟ್ಟುವವರೆಗೂ. ನಡೆ – ನಡೆ – ನಡೆ ಕಡೆದೆಬ್ಬಿಸುತಲೆ ಮುಗಿಲಪ್ಪುವವರೆಗೂ, ಕಡೆ – ಕಡೆ – ಕಡೆ...

ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ!...

ಮೊದಲ ಮಳೆ ಬಂದಿಹುದು ಬೇಸಿಗೆಯೊಳಿಂದು ಭುವಿ ಕಾದು ನಿಂದಿಹುದು ಬರುವುದೇ ಎಂದು – ಕಾತರದಿ ಬೆಂದು ಸಪ್ತ ರಾಗದ ದನಿಯ ಕೇಳಿದಂತೆ ಸುಪ್ತ ಸ್ವರಗಳ ಮುತ್ತು ಚೆಲ್ಲಿದಂತೆ ತಪ್ತ ಬಾಳುವೆಯೊಳಗ ಬೇಗೆಯನು ಅರಿತಂತೆ ಸುತ್ತೆಲ್ಲ ಸೇರುತಿವೆ ಮೋಡ ಸಂತೆ...

ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ ಬೆಳ್ಳಿಯಲೆಗಳ ಭ್ರಾಂತಿ ಹೊಳೆಯುತಿಹುದು. ತೀಡುತಿ...

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ...

ಕೋಗಿಲೆಯೊಲವನು ಉಲಿದಾಗ, ಪೂರ್ವದ ಗಾಳಿಯು ಸುಳಿದಾಗ, ಪುಲಕದಿ ಮನ ಮೈ ಮರೆತಾಗ, ಗೆಳತಿ, ನೆನಪೇತಕೆ ಬರುವುದೊ ನಾನರಿಯೆ! ಗುಲಾಬಿ ಹೂವುಗಳರಳಿ, ತಿರೆ ಮಲಾಮೆಯಿಂದಲಿ ಮೆರೆಯುತಿರೆ, ಬಾಳಿನ ಕಂಬನಿ ಮರೆಯುತಿರೆ, ಗೆಳತಿ, ನೆನಪೇತಕೆ ಬರುವುದೊ ನಾನರಿಯೆ!...

ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ. ಬೇರಾವುದೋ ಹೊಸತು ಭಾವನಾವರಿಸಿರಲು ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು. ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು! ಹೃದಯ ಹರಿಯುತಲಿರಲು ಒಲವ ಹೊನಲಾಗುತಲಿ ...

ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ, ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ ಮಾಲೆಯಾಗಿದೆ ನಿಶೆಯ ಒಲವಿನ ರವಿಯ ನೀರವ ಸೆಜ್ಜೆಗೆ! ಹೊನ್ನ ಹೊರಗನು ತೊರೆದು ಭೂಮಿಯು ಬಣ್ಣ ಬ...

ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ ಹೊರಳಿಸಿದೆ! ಈಗಿನ್ನು – ಕಳೆದಿಲ್ಲ ಅರೆಗಳಿಗೆ!- ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ, ತಡಿಯೆಲ್ಲ ತನಗೆಂದು, ಮುನ್ಮುಂದೆ ಒತ್ತೊತ್ತಿ, ಮೇಲೇರಿ, ಗರ್...

ನಾವೀರ್ವರು ಜತೆಗೂಡುತ ಕಳೆದಾ ಸುಖದ ಹೂವ ಹೊಂಬಾಳನು ನೆನೆವೆನೆ, ಕಣ್ಣು ಮಿಡಿಯುವುದು ದುಃಖದ ಹನಿಯಳಿದಾ ಬಾಳಿಂದಿಲ್ಲವೆ, ಸೇರಿರೆ, ಅಳಿಮನೆ ! ಗೆಳತಿ, ಯಾವುದ ನೆನೆಯಲಿ, ಯಾವುದ ಬಿಡಲಿ? ಅಂದು ಒಲವಿನ ಮೊದಲಿನ ಮುತ್ತಲಿ ಲಜ್ಜೆ ಸಂತಸದ ಕಮಲದ ಮುಖವನು...

1234...10