ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ ಅಲ್ರಿ ನಾನು ಹೇಳ್ತಿರೋದು...

ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...

ಅವನು ನನಗೆ ಬೆವರಿಳಿಸ್ಬೇಕೂಂತ ಏನ್ಮಾಡಿದರೂ ನಾನು ಜಪ್ಪೈಯಾ ಅನ್ನದಿರೋದು ನನ್ನಗತ್ತು. ಅವನು ನನ್ಮೇಲೆ ಸುರಿಸಿದ ಬೆಂಕಿನೆಲ್ಲಾ ಬೆಳದಿಂಗಳು ಮಾಡೋದ್ಹೇಗೇಂತ ನನಗೆ ಚೆನ್ನಾಗಿ ಗೊತ್ತು. *****...

ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ ಆಕಾಶ ಬಿಟ್ಟುಕೊಡ್ತೇನೆ.  ಆದರೆ ಆ ಸ್ವಾರ್ಥಿ ಸೂರ್ಯ ಬಂದಾ ಅಂದರೆ ಆಯ್ತು ಇಡೀ ಆಕಾಶ ಅವನಿಗೇ ಬೇಕು.  ಅವನು ಇಟ್ಟಾ ಕಾಲ...

ಚಂದಮಾಮ ಚಕ್ಕುಲಿಮಾಮ ಅಮವಾಸ್ಯೆಯ ಕತ್ತಲಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ, ಯಾಕೆ ಹೋಗಿದ್ದೆ? ಕೇಳೋ ಕಳ್ಳ ಮುದ್ದಿನ ಮಳ್ಳಾ, ಸೂರ್ಯಾನೂರಿಗೆ ಹೋಗಿದ್ದೆ ಬೆಳದಿಂಗಳು ಹೊತ್ಕೊಂಡು ಬರ್‍ಲಿಕ್ಕೆ. *****...

ನಮ್ಮ ಮನೆಯ ಮುಂದಿನ ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು ಚಪ್ಪನ್ ಚೂರಾಯಿತು.  ಪಾಪ ಅದು ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು ಬೀದಿಯಲ್ಲಿ ಚಲ್ಲಾಪಿ...