ಹನಿಗವನ ಸೌಂದರ್ಯ ಸ್ಪರ್ಧೆ ಪಟ್ಟಾಭಿ ಎ ಕೆ May 25, 2017March 29, 2017 ಗುಪ್ತಾಂಗಗಳ ಮುಚ್ಚಿ ಮಿಕ್ಕೆಲ್ಲ ಬಿಚ್ಚಿ ಹರಯಕ್ಕೆ ಹುಚ್ಚು ಹಚ್ಚಿ ಮುದಿತನಕ್ಕೆ ಪೆಚ್ಚು ತಂದಿದ್ದು! ***** Read More
ಹನಿಗವನ ಸತ್ಯ ಪಟ್ಟಾಭಿ ಎ ಕೆ May 18, 2017March 29, 2017 ಸತ್ಯಕ್ಕೆ ಸಾವಿಲ್ಲ ಅದು ಸಿಗುವ ಹೊತ್ತಿಗೆ ನಾವಿಲ್ಲ! ***** Read More
ಹನಿಗವನ ಚಿಂತೆ ಪಟ್ಟಾಭಿ ಎ ಕೆ May 11, 2017July 18, 2018 ಹೆಂಡತಿಗೆ ಆಭರಣದ ಚಿಂತೆ; ಗಂಡನಿಗೋ ಉದರಂಭರಣದ ಚಿಂತೆ! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆ May 4, 2017July 18, 2018 ಹೆಣ್ಣು ಒಲಿದರೆ ಹಣ್ಣು! ತಿರುಗಿ ಬಿದ್ದರೆ ಹುಣ್ಣು! ***** Read More
ಹನಿಗವನ ಚುಂಬನ ಪಟ್ಟಾಭಿ ಎ ಕೆ April 27, 2017March 29, 2017 ಇನಿಯಳ ತನುವೆಲ್ಲವೂ ಇನಿಯನಿಗೆ ಚುಂಬನದ ಬನ! ***** Read More
ಹನಿಗವನ ರಜ ಪಟ್ಟಾಭಿ ಎ ಕೆ April 20, 2017March 29, 2017 ಕೆಲವೊಮ್ಮೆ ರಜೆಗಳು ಒಂಟೊಂಟಿಯಾಗಿ ಅಲ್ಲ; ಹಿಂಡು ಹಿಂಡಾಗಿ ಬರುತ್ತವೆ ಕಷ್ಟ ಪರಂಪರೆಗಳಂತೆ! ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ April 13, 2017March 29, 2017 ಗಂಡನಿಗೆ ತೆರಿಗೆ ಭಾರ ಹೆಂಡತಿಗೆ ಹೆರಿಗೆ ಭಾರ ಮಕ್ಕಳಿಗೆ ಪುಸ್ತಕ ಭಾರ ಇದೇ ಸಂಸಾರ! ***** Read More
ಹನಿಗವನ ಅತಿ ಸಂತಾನ ಪಟ್ಟಾಭಿ ಎ ಕೆ April 6, 2017March 29, 2017 ‘ಅತಿ ಸಂತಾನ’ ಎಂದರೆ ಬೆಂಕಿಯೊಡನೆ ಸರಸ; ಅದಕ್ಕಾಗಿಯೇ ಬೇಕು ವಂಕಿಯ ಸಹವಾಸ! ***** Read More
ಹನಿಗವನ ಅಧರ ಪಟ್ಟಾಭಿ ಎ ಕೆ March 30, 2017March 29, 2017 ಅಧರ ಮಧುರ; ಉದರಕ್ಕಲ್ಲ ಮತ್ತೊಂದು ಅಧರಕ್ಕೆ! ***** Read More
ಹನಿಗವನ ಖಾಲಿ ಶೀಷೆ ಪಟ್ಟಾಭಿ ಎ ಕೆ March 23, 2017March 29, 2017 ಹಳೆ ಪೇಪರ್ ಖಾಲಿ ಶೀಷೆಯವ ಬೀದಿಯಲ್ಲಾ ಅಲೆದು ಸುಸ್ತಾಗಿ ಸೇಂದಿ ಅಂಗಡಿ ಸೇರಿದ; ಸೇಂದಿ ಶೀಷೆ ಖಾಲಿ ಮಾಡಿ ‘ಕೊನೆಗೂ ಖಾಲಿ ಶೀಷೆ ಒಂದಾದರೂ ದಕ್ಕಿತಲ್ಲಾ’ ಎಂದು ಸಾಂತ್ವನಗೊಂಡ! ***** Read More