ಹನಿಗವನಅನುಕರಣೆಮಕ್ಕಳು ಟಾಟಾ ಎನ್ನುವುದ ಕೇಳಿ ಕಾಗೆಗಳು ಕಾಕಾ ಎನ್ನುತ್ತವೆ ಕೆಲವರು ಬೈ ಬೈ ಎನ್ನುವದ ಕೇಳಿ ನಾಯಿಗಳು ಬೌ ಬೌ ಎನ್ನುತ್ತವೆ ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ. *****...ಪರಿಮಳ ರಾವ್ ಜಿ ಆರ್November 30, 2016 Read More
ಹನಿಗವನದಾರ : ಭಾರಹೋರಿಗೆ ಮೂಗುದಾರ ಪೋರಿಗೆ ಅರಶಿನ ದಾರ ಲಾರಿಗೆ ಮಣಭಾರ ಗೋರಿಗೆ ಹೆಣಭಾರ. *****...ಪರಿಮಳ ರಾವ್ ಜಿ ಆರ್November 23, 2016 Read More
ಹನಿಗವನನಿನ್ನ ನೀ ನಂಬುಸಂಬಂಧಿಕರನ್ನು ನಂಬಿದರೆ ಆದೀತು ದಿಗ್ಬಂಧ ಸ್ನೇಹಿತರನ್ನು ನಂಬಿದರೆ ಆದೀತು ಅನಾಹುತ ನಿನ್ನನೇ ನೀ ನಂಬು ಜಡಭರತ ಎದ್ದೇಳು ಅನವರತ. *****...ಪರಿಮಳ ರಾವ್ ಜಿ ಆರ್November 16, 2016 Read More
ಹನಿಗವನಸುವ್ವಾಲೆಏರಿದರೆ ಜಾರಬೇಕು ಜಾರಿದರೆ ಏರಬೇಕು ಕೂದಲೆಳೆಯಲಿ ಉಯ್ಯಾಲೆ ಸುಖ ದುಃಖದ ಸುವ್ವಾಲೆ *****...ಪರಿಮಳ ರಾವ್ ಜಿ ಆರ್November 9, 2016 Read More
ಹನಿಗವನಉತ್ಸವಸಂಬಳ ಬರುವುದು ಮಾಸೋತ್ಸವ, ಬಡತನ ಸವೆಯುವುದು ನಿತ್ಯೋತ್ಸವ! *****...ಪರಿಮಳ ರಾವ್ ಜಿ ಆರ್November 2, 2016 Read More
ಹನಿಗವನಅನಿಶ್ಚಯತೆಇವತ್ತು ಇದ್ದು ನಾಳೆ ಇಲ್ಲ ಮಳೆ, ಬೆಳೆ, ಕಳೆ ಇವತ್ತು ಇದ್ದು ನಾಳೆ ಇಲ್ಲ ಸ್ಥಾನ, ಮಾನ, ಪ್ರಾಣ! *****...ಪರಿಮಳ ರಾವ್ ಜಿ ಆರ್October 26, 2016 Read More
ಹನಿಗವನಬೇಡಿಕೆಕಲಿಯುಗದ ಕಸದ ಬುಟ್ಟಿ ಬರಿದು ಮಾಡೋ ಬಕಾಸುರ! ಧೂಮಪರಿಸರ ಮಾಲಿನ್ಯ ದೂರಮಾಡೋ ಭಸ್ಮಾಸುರ! *****...ಪರಿಮಳ ರಾವ್ ಜಿ ಆರ್October 19, 2016 Read More
ಹನಿಗವನಎಳೆತಹೆಣ್ಣೆಂಬ ಪ್ರಶ್ನೆಯಲಿ ಗಂಡಿನ ಕೊರಳೆಳತ ಗಂಡೆಂಬ ಗೂಟಕ್ಕೆ ಹೆಣ್ಣೆತ್ತಿನ ಗಾಣದೆಳೆತ! *****...ಪರಿಮಳ ರಾವ್ ಜಿ ಆರ್October 12, 2016 Read More
ಹನಿಗವನಪಂಚಾಮೃತಮಗುವು ಅಮ್ಮನ ಕೇಳಿತು – ಹಾಲು, ಬೆಲ್ಲ, ಜೇನು, ತುಪ್ಪ, ಮೊಸರು ನೆಕ್ಕಿ ಚಪ್ಪರಿಸದೆ ನಿಂತನೇಕೆ? ದೇವ ಬೆಪ್ಪ, ನಮ್ಮ ತಿರುಪತಿ ತಿಮ್ಮಪ್ಪ! *****...ಪರಿಮಳ ರಾವ್ ಜಿ ಆರ್October 5, 2016 Read More
ಹನಿಗವನಕರೆಕೈ – ಬಿಸಿ ಮಾಡಿದರೆ ಕೈ ಬೀಸಿ ಕರೆಯುವರು ಜೇಬು ತುಂಬಿಸಿದರೆ ಜವಾಬು ಹೇಳಿ ಕೆಲಸ ಮುಗಿಸಿ ಕರೆಯುವರು ಇವರು ನಮ್ಮ ಸರ್ಕಾರಿ ನೌಕರರು! *****...ಪರಿಮಳ ರಾವ್ ಜಿ ಆರ್September 28, 2016 Read More