
ತಾರೆ ತೇಲಿ ಬರುವ ರೀತಿ ತೀರ ಇರದ ಬಾನಿಗೆ ತೇಲಿ ಬಂದೆ ನೀನು ನನ್ನ ಮೇರೆ ಇರದ ಪ್ರೀತಿಗೆ ನಲ್ಲೆ ನಿನ್ನ ಬೆಳಕಿನಲ್ಲಿ ಬಿಚ್ಚಿ ತನ್ನ ದಳಗಳ ನಲಿಯಿತಲ್ಲೆ ಜೀವ ಹೇಗೆ ಸುತ್ತ ಚೆಲ್ಲಿ ಪರಿಮಳ! ಒಲಿದರೇನು ಜೀವ ಎರಡು ಮುನಿಯಿತಲ್ಲೆ ಲೋಕವೇ! ಕುಲುಮೆಯಾಯ್...
ಮರೆಯಲಾರೆ ನಿನ್ನ ನೀರೆ ಮರೆಯಲಾರೆ ಜನ್ಮಕೆ ಮರೆತು ಹೇಗೆ ಬಾಳಬಹುದೆ ಆತ್ಮ ಮರೆತು ಅನ್ನಕೆ? ದೊರವಾದರೇನು ನೀನು ದೂರ ತಾನೆ ಸೂರ್ಯನು? ಭಾವನೆಯಲಿ ಕೂಡುವೆ ನೀ ಕಿರಣದಂತೆ ನನ್ನನು ಯಾರು ಜರಿದರೇನು ನೀನೆ ಸಾರ ನನ್ನ ಜೀವಕೆ ಕನಸಿನಲೆಯ ಏರಿ ಬಂದು ಉಣಿಸ...
ಎಂಥ ಚೆಲುವೆ ನನ್ನ ಹುಡುಗಿ ಹೇಗೆ ಅದನು ಹೇಳಲಿ? ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? ಕಾಲಿಗೊಂದು ಗಜ್ಜೆ ಕಟ್ಟಿ ಹೊರಟಂತೆ ಪ್ರೀತಿ, ಝಲ್ಲೆನಿಸಿ ಎದೆಯನು ಬೆರಗಲ್ಲಿ ಕಣ್ಣನು ಸೆರೆಹಿಡಿವ ರೀತಿ. ಬೆಳಕೊಂದು ಸೀರೆಯುಟ್ಟು ತೇಲಿನಡೆವ ರೂಪ, ಗ...
ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ ನಿನ್ನೆದುರು ಏನಿಲ್ಲ ಮಾನಾವಮಾನ! ನಿಗಿ ನಿಗೀ ಉರಿಯುವ ಕೆಂಡ ಈ ಮನಸು ಘಮ ಘಮದ ಹುಡಿಧೂಪ ನೀನಿತ್ತ ಕನಸು ಬಿದ್ದಂತೆ ಹುಡಿ ಧೂಪ ಉರಿ ಕಾರಿ ಬಣ್ಣ ಏಳುವುವು ಗೀತೆಗಳು ಪರಿಮಳಿಸಿ ನನ್ನ! ಕಾದು ಎದೆ ಬಿರಿದಿರುವ ಬೇಸ...
ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ? ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು ದಿನದ ದುಃಖ ದುಡಿತ ಇದ್ದಂತೇ ಇರುತ ಹೊಸದಾಯಿತೆ ಇಡಿಯ ಲೊಕ ನೀ ಹಜ್ಜ...
ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ ಕೆನ್ನೆಯ ಬೆಳಗು ಕೊಳದಲ್ಲಿದು ಕೊಯ್ಯಲು ಬಾರದು ...
ಯಾರಿವಳೀ ದೀಪಿಕಾ? ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ! ಬಿಸಿಯೂಡಿಸಿ ಹಸಿರಾಡಿಸಿ ಕನವರಿಕೆಯ ನಾಡಿಗೆ ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ ಚಿತ್ರವ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂದು ಬೇಲಿಸಾಲ ಪ್ರೀತಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ… ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ...
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು, ಬಾಳು ಕೊನೆಯೇರುತಿದೆ ಬೆಳಕಿನ...
ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ, ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಬುವಿಗೆ? ತಾವರೆದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು, ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ, ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು! ...








