ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.

ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು?

ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು […]

ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು […]

ನಿನ್ನ ಚೆಲುವನ್ನೆಲ್ಲ ಹಿಂಗೆ ಹಂಚುವುದೇನೆ?

ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ ಕಂಡವರಿಗೆ? ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ ಕೊಂಡವರಿಗೆ? ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ ಪರಿಮಳವನು, ಹೂ ಗುಲಾಬಿಗೆ ಕೊಟ್ಟೆ ನಿನ್ನ […]

ನೀ ಸಿಗದೆ ನಾನೆಂತು ತಿಳಿವೆನೇ ನನ್ನ?

ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು […]

ಹೊಂಬಿಸಿಲು ನಾಚೀತು

ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ- ಯಲ್ಲಿ ಮಿರುಗುವ ಕಾಂತಿಗೆ, ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು ಸುತ್ತ ಹರಡುವ ಶಾಂತಿಗೆ ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ […]

ನೀ ಯಾರೋ ನಾ ಯಾರೋ!

ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? […]