
ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ- ನಿರುವಿಕೆಯು, ದಿವ್ಯಹರ್ಮ್ಯವನೊಮ್ಮೆ ಬೇಡುವುದು ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು. ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ. ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,- ಅವರ ಚಂಚಲ ...
ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆ...
ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು ‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು, ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ ಮಾನವಗೆ; ಮತ್ತೆ ಮಂಜು ಮುಸ...
ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆ...
ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ ಕಂ...







