ಅಬ್ಬಾ ನಗರದ ಕೊಳಚೆಯ ಸಂದಿ! ಉದುರಿತು ಮೂಗಿನ ಎಲ್ಲಾ ರೋಮ ಹೇಗೆ ಇರುವರೋ ಇಲ್ಲಿಯ ಮಂದಿ! ಇವರಿಗೆ ಬೇಡವೆಬೇಡ ಹಜಾಮ!! *****...
ಬಂಡನೋರ್ವ ತಾ ರಂಡಿಯ ಮನೆಯೊಳು, ಹೆಂಡಕುಡಿದು ನಿಶೆಯಾಗುತಲವನೂ | ಹೆಂಡಿರು ಮಕ್ಕಳ ಪರಿವೆಯು ಯಿಲ್ಲದೆ, ಕಂಡಹಾಗೆ ತಾ ಜೋಲಿಯ ಹೊಡೆಯುತೇ | ಕಂಡಕಡೆಗೆ ತಾನೂರೊಳು ತಿರುಗುತೆ, ಬಂಡಬಂಡತಾ ಬೈಗಳ ಬೈಯ್ಯುತೆ ಅಂಡಜೋದ್ಭವನ ಸೃಷ್ಠಿಯೊಳುತಾ, ಚಂಡವಿಲಕ್ಷಣ ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾ...
(ಕಥಾ ಕವನ) ೧ ಏಳಲಿಕಾರದೆ, ಮರಣದ ಶಯ್ಯೆಯೊ- ಳೊರಗಿಹನೋರ್ವನು ಹಳೆ ಮುದುಕ ಕಳೆದಿದೆ ಪ್ರಾಯದೊಳೆಪ್ಪತ್ತರ ಗಡಿ ಸಾಯುವ ಸಮಯವು ಸನಿಯಕಿದೆ. ಬಳಿಕಾ ಮುದುಕನು ಒಂದು ದಿನ ಅಳಿಯಲು, ಬರಡಾಯಿತು ಪ್ರಾಣ ೨ ಒಂದರ ಮೇಲೊಂದಾಗುತ ನಾಲುಕು ಸ೦ದಿವೆ ಮುದುಕಗೆ ಮದ...
ಪ್ರೀತಿಯ ಕಿಟಿ, ಬಹಳ ಕಾಲದ ಮೇಲೆ ಈಗ ತಾನೆ ನಾನು ಮಮ್ಮಿಯಿಂದ ಒದೆ ತಿಂದೆ. ಇತ್ತೀಚೆಗೆ ನಾವು ಒಬ್ಬರಿಗೊಬ್ಬರು ಹೆಚ್ಚಾಗಿ ಬೆರೆಯುವುದಿಲ್ಲ. ಮಾರ್‍ಗೊಟ್ ಮತ್ತು ನನ್ನ ಸಂಬಂಧವೂ ಸರಿಯಾಗಿಲ್ಲ. ನಮ್ಮ ಮನೆಯ ನಿಯಮದಂತೆ ನಾವು ಈ ರೀತಿಯಲ್ಲಿ ಸಿಟ್ಟು ಸ...
ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು! ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು? ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ, ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ: ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ! ಇಂತಿದೆ ಇಲ...
ಕಡಗವಿಲ್ಲದ ಕೈಯು, ದಿಡಗವಿಲ್ಲದ ಹೊಳೆಯು ಹಡದವ್ವ ಇಲ್ಲದ ತವರಿಽಗೆ | ಹೋದಽರ ನಡುದಾರ್ಯಾಗ ವಸ್ತಿ ಹೋದ್ಹಾಂಗ || ಮಳೆಯು ಬಂದರು ಬರಲಿ, ಮರದಽ ಮೇಲಿರುವೆ ಮಳೆ ನಿಂತ್ರು ಮರದ ಹನಿ ಬಿಡದ | ಹಡದವ್ವ ನೀಬಿಟ್ರ ನಿನ್ನ ಮನ ಬಿಡದ || ಕಾಸಿಗೆ ಹೋಗುದಕ, ಏ...
(ಕೇಳಿದ ಕತೆ) ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು. ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬ...
೧ ಹೊತ್ತು ಮುಳುಗಿತು ಕತ್ತಲಾಯಿತು ಚಿತ್ತ ಬಾಗಿಲಿಗೋಡಿತು; ಒಂದೆ ದಿನದಲಿ ಬರುವೆನೆಂದರು ಮೂರು ದಿನ ಕಳೆದಾಯಿತು. ಎದೆಯ ಹಂಬಲ ತುಂಬಿ ನಿಂತಿದೆ ನಿಮಿಷ ನಿಮಿಷವನೆಣಿಸಿದೆ ಕರುಳು ಕರುಳಿಗು ಶಾಂತಿ ಹೇಳಿದೆ ಜೀವ ಕಳವಳಗೊಂಡಿದೆ ಅವರ ಪ್ರೀತಿಯ ಹೂವು ಹೆ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







