ಓ ನಲ್ಲೆ-ಬಾ ಇಲ್ಲೆ

(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ...

ಬಡ ಸೂಳೆಗೆ ಅವಳ ಗೆಳತಿ

(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ್ಲೆಯ ಬೇಲಿಮರೆಗೆ. ಸೆಟ್ಟರ...

ಸಿರಿವಂತ ಸೂಳೆಯರ ಹಾಡು

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು...

ನರ್ತಕಿಯೊಬ್ಬಳ ನಾಟ್ಯವನ್ನು ನೆನೆದು

ಬಾ ಬಾ ಮೋಹನೆ-ಬೇಗ ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ ಹೆಜ್ಜೆಹೆಜ್ಜೆಗೂ ಹೃದಯವ ತುಳಿವ ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ ಬೇಗ ಬಾ . . . ನಮ್ಮಿರಮಿಂದಾವಮೃತವ ಪಡೆಯೆ, ಆರಾಡಿಪರೀ ಮಂತನು ಅರಿಯೆ....

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದುಂಬಿಯೇಳೆ,...

ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬರೆ-ಆರೋ...

ಪ್ರತೀಕ್ಷೆ

ಇಂದು ಏನಾಗಿಹುದೆ, ಗೆಳತಿ ಏಕೆ ಸಡಗರಗೊಳ್ವೆನೇ? ಕಡಲಿನಗಲದ ಕೇರಿ ಹರಹನು ಹಾರಿಬರುವೆಲರಾರ ದೂತನೆ, ಸುದ್ದಿ ಯಾವುದ ಪೇಳ್ವನೇ? ಕತ್ತಲಿದು ಮುನ್ನೀರಿನಂದದಿ ತಿರೆಯ ಮುಳುಗಿಸಿ ಹಬ್ಬಿದೆ; ಒಡೆದ ಹಡಗುಗಳಂತೆ ಮನೆ ಮಠ ಅದರ ತಲದೊಳು ಬಿದ್ದಿದೆ-ಮನ...

ತಾಯಿಯ ಮುದ್ದು

ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪರಾರು! ಒಲಿದನುಪೇಕ್ಷೆಯೊ...

ನನ್ನ ನಾಯಿ

ಹೆರರ ನೋವಿಗೆ ಅಯ್ಯೊ ಎಂದು ಮರುಗಿ ಸುಯ್ಯಲನಿಡಲು ಒಲವೆ? ಹಿರಿಯ ಸುಖದಿರವೆನ್ನ ದೆನ್ನುವ ಅರಿವು ಒಲಿದವಗಿರುವುದೆ? ಜನುಮದೊಂದಿಗೆ ಜೊತೆಯ ಕೂಡಿ ಕೊನೆಯವರೆಗೂ ಬೆನ್ನ ಬಿಡದ ಜನುಮದುನ್ನತಿ ಕುಲದ ಹೆಮ್ಮೆಯ. ಕಟ್ಟ ಕಳೆವುದೆ ಕರುಣೆಯು? ಕೊಳದ...

ಕವಿ ಬೇಂದ್ರೆಯವರನ್ನು ಕುರಿತು

ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ...