Home / ಲೇಖನ / ಪುಸ್ತಕ / Tennessee Williams ನ ಬಯಕೆ ಎಂಬ ಭೂತ `The streetcar named Desire’

Tennessee Williams ನ ಬಯಕೆ ಎಂಬ ಭೂತ `The streetcar named Desire’

ಆಕೆ Blanche Dubois ತನ್ನ ಬಂಧುಗಳ ರೋಗ ರುಜಿನ, ಮರಣವೆಂದು ಇದ್ದ ಬಿದ್ದ ಸಂಪತ್ತು ಪಿತ್ರಾರ್ಜಿತ ಮನೆ, ಆಸ್ತಿಯನ್ನೆಲ್ಲಾ ಕಳೆದುಕೊಂಡು, ವೈವಾಹಿಕ ಬದುಕು ಜರ್ಜರಿತಗೊಂಡು ಬೇರೆ ಗತಿ ಕಾಣದೆ ಇದ್ದ ಒಬ್ಬ ತಂಗಿಯ ಆಶ್ರಯಿಸಿ Stellaಳ ಮನೆಗೆ ಬರುತ್ತಾಳೆ. ಅದು New Orleans ನ ಪ್ರೆಂಚ ಕ್ವಾರ್ಟರ್‍ಸ. ಅಲ್ಲಿಗೆ ಬರುತ್ತಲೇ ಬರಿಯ ಎರಡು ಕೊಠಡಿಗಳ ಆ ಅಪಾರ್ಟಮೆಂಟಿನಲ್ಲಿ ಅವರೊಂದಿಗೆ ವಾಸಿಸುವುದು ಅವರಿಗೆ ಕಿರಿಕಿರಿಯಾಗಬಹುದೆಂದು ಯೋಚಿಸುತ್ತಾಳೆ. ಅಲ್ಲಿರುವುದು ಅಸಾಧ್ಯವೆನಿಸುತ್ತದೆ ಆಕೆಗೆ. ಆದರೂ ಆಕೆಗದು ಅನಿವಾರ್ಯ. ಆಕೆಯ ಎಲ್ಲ ಕಷ್ಟ ಕಾರ್ಪಣ್ಯಗಳ ಬದುಕು ಸಹೋದರಿಯಲ್ಲಿ ನೋವಿನ ಕಣ್ಣೀರನ್ನು ಸೃಜಿಸಿದರೆ, ಆಕೆಯ ಪತಿ ಒರಟು ಗುಣದ ದುಷ್ಟ ಪ್ರವೃತ್ತಿಯ Stanley Kowalski ಆಕೆಯ ಬಗ್ಗೆ ಅನಾದರ ಉಂಟಾಗುತ್ತದೆ. ಉದೇಶಪೂರ್ವಕವೆಂಬಂತೆ ಆತ ಆಕೆಯ ಪೂರ್ವಾಶ್ರಮದ ವಿವಾಹವನ್ನು ನೆನಪಿಸಿ ಆಕೆಯ ಮಾನಸಿಕ ಕ್ಷೋಭೆಯನ್ನು ಉಲ್ಭಣಗೊಳಿಸಲು ಪ್ರಯತ್ನಿಸುತ್ತಾನೆ. ವೈಯಕ್ತಿಕ ಆನಂದವನ್ನು ಅನುಭವಿಸುತ್ತಾನೆ.

ಆ ರಾತ್ರಿ ಆನಂದದಿಂದ ಕಳೆಯಲು ಅಕ್ಕ ತಂಗಿ ಹೊರಹೋಗಿ ಊಟಮಾಡಿ ಸಿನೇಮಾ ನೋಡಿ ಬರುತ್ತಾರೆ. ಸ್ಟ್ಯಾನ್ಲಿ ತನ್ನ ಗೆಳೆಯ Herold Mitchell (Mitch) ಹಾಗೂ ಇತರ ಗೆಳೆಯರೊಂದಿಗೆ ಪೋಕರ ಆಡುತ್ತಿರುತ್ತಾನೆ. Mitchನ ಸ್ವಭಾವ Blanche ಆಕರ್ಷಿಸುತ್ತದೆ. ಅವರಿಬ್ಬರೂ ಪರಸ್ಪರ ಮಾತಿನಲ್ಲಿ ತಲ್ಲೀನರಾದಾಗ ಅದನ್ನು ಸಹಿಸದ ಸ್ಟ್ಯಾನ್ಲಿ ಪತ್ನಿ ಸ್ಟೆಲ್ಲಾಳಿಗೆ ಹೊಡೆದು ರೋಷ ವ್ಯಕ್ತಪಡಿಸುತ್ತಾನೆ.

ಇದು Tennessee Williamsನ ನಾಟಕ The streetcar named Desireನ ಮೊದಲ ದೃಶ್ಯ. ಸ್ಟ್ಯಾನ್ಲಿ ಅಮೇರಿಕಾದ ವರ್ಕಿಂಗ್ ಕ್ಲಾಸ್ ಮೆಂಟಾಲಿಟಿಯ ವ್ಯಕ್ತಿ ಎಂಬುದು ಆತನ ಕೀಳು ಅಭಿರುಚಿಗಳೇ ಹೇಳುತ್ತವೆ. ಆತ ಸುಸಂಸ್ಕೃತನಲ್ಲ. ಮೃದುವಲ್ಲದ ಧ್ವನಿ, ಕಠೋರ ವರ್ತನೆಗಳೆಲ್ಲ ಪುರುಷ ಪ್ರಧಾನ ಸ್ವಭಾವದ ಚಿತ್ರಗಳು. ಆದರೆ ಸ್ಟೆಲ್ಲಾ ಮತ್ತಾಕೆಯ ಅಕ್ಕ ಬ್ಲೆಂಚಿ ಸಭ್ಯ ಸಂಸ್ಕೃತಿಯ ಬಿಂಬಗಳು.

ಕ್ರಮೇಣ Mitch ಮತ್ತು ಬ್ಲೇಂಚಿಯ ನಡುವಿನ ಬಾಂಧವ್ಯ ಬೆಳೆಯತೊಡಗುತ್ತದೆ. ಆತನಲ್ಲಿ ಆಕೆ ಸ್ಟ್ಯಾನ್ಲಿಯ ವಿಚಿತ್ರ ವರ್ತನೆಯನ್ನು ಆತ ತನ್ನನ್ನು ನಾಶಮಾಡಬಹುದೆಂಬ ಭೀತಿಯನ್ನು ವ್ಯಕ್ತಪಡಿಸುತ್ತಾಳೆ. ತನ್ನ ಹಳೆಯ ಬದುಕಿನ ಹಾಳೆಗಳ ಪುಟ ತಿರುವಿ ಹಾಕುತ್ತಾಳೆ. ಸಲಿಂಗಕಾಮಿಯಾದ ತನ್ನ ಪತಿ ಆ ಸಂಗತಿ ಹೊರಬೀಳುತ್ತಲೆ ಆತ್ಮಹತ್ಯೆಗೈದುಕೊಂಡ ವಿಚಾರಗಳನ್ನೆಲ್ಲಾ ತಿಳಿಸಿ ಒಡಲ ನೋವನ್ನು ನಿವೇದಿಸಿಕೊಳ್ಳುತ್ತಲೂ ಆತ ಆಕೆಯ ಬಗ್ಗೆ ಕನಿಕರಗೊಳ್ಳುತ್ತಾನೆ. ಕ್ರಮೇಣ ಆ ಸಂಬಂಧ ಅವರ ಬೆಸೆಯುತ್ತದೆ. ತನ್ನ ದುರಂತ ಬದುಕಿನ ಸತ್ಯವನ್ನು ಆತನಲ್ಲಿ ಬಿಚ್ಚಿಡುವ ಆಕೆ ಸಹಜವಾದ ಸಾಂತ್ವನದ ಬಯಕೆಯುಳ್ಳವಳು. ಆದರೆ ಈ ಹುಡುಕಾಟದಲ್ಲಿ ಆಕೆ ಅಪರಿಚಿತರೊಂದಿಗೆ ಬೆಸೆದುಕೊಂಡ ಅಸಹಜ ದೈಹಿಕ ಬೆಸುಗೆ, ಮಾನಸಿಕ ಬೆಂಬಲ ಆಕೆಯ ಪೂರ್ವಾಶ್ರಮದಲ್ಲಿ ಹೇರಳವಾಗಿದ್ದು ಅದನ್ನಾಕೆ ಬಚ್ಚಿಡುತ್ತಾಳೆ.

ಸಪ್ಟೆಂಬರ ತಿಂಗಳ ಅದೊಂದು ದಿನ ಬ್ಲೆಂಚೆಯ ಹುಟ್ಟುಹಬ್ಬ. ಅದಕ್ಕಾಗಿ ಗರ್ಭಿಣಿ ಸ್ಟೆಲ್ಲಾ ತನ್ನಕ್ಕನ ಹುಟ್ಟು ಹಬ್ಬದ ಸಲುವಾಗಿ ಕೇಕ ತಯಾರಿಸುತ್ತಿದ್ದಾಳೆ. ಅಷ್ಟರಲ್ಲಾಗಲೇ ಅಲ್ಲಿಗೆ ಕೂಗಾಡುತ್ತ ಬರುವ ಸ್ಟ್ಯಾನ್ಲಿ ಬ್ಲೇಂಚೆಯ ಪೂರ್ವ ಇತಿಹಾಸ ಬೆದಕಿ ಆಕೆಯ ಭಂಡ ಬದುಕು, ನಡೆಸಿದ ಹೊಲಸು ಭ್ರಷ್ಟ ಸಂಬಂಧಗಳ ಉದಾಹರಿಸುತ್ತಾ ಆಕೆ ವೈಭಿಚಾರಣಿಯೆಂದು ಆಪಾದಿಸಿ ಆಕೆಗೆ ಅಲ್ಲಿಂದ ಹೊರಟು ಹೋಗುವಂತೆ ಹೇಳುತ್ತಾನೆ. ತನ್ನ ಹುಟ್ಟುಹಬ್ಬಕ್ಕೆ ಬರುವನೆಂದು ತಿಳಿದ Mitch ಕೂಡ ಬರದಾದಾಗ ಆಕೆ ನಿರಾಶಳಾಗುತ್ತಾಳೆ. ಅದೇ ಹೊತ್ತಿಗೆ ಸ್ಟಾನ್ಲಿ ಮನೆಯಿಂದ ಹೊರದಬ್ಬುವ ಉದ್ದೇಶದಿಂದ ಆಕೆಯ ಹುಟ್ಟುಹಬ್ಬದ ಉಡುಗೊರೆಯಾಗಿ ಆಕೆ ವಾಪಸ್ಸು ಹೋಗಲು ಟಿಕೇಟ ಹಿಡಿದು ಬರುತ್ತಾನೆ. ಇದನ್ನು ಸಹಿಸದೇ ಆತನ ವಿರುದ್ಧ ನುಡಿಯಲು ಆಗದೆ ಗರ್ಭಿಣಿ ಸ್ಟೆಲ್ಲಾಗೆ, ಮಾನಸಿಕ ಆಘಾತಗೊಂಡಂತೆ ಹೆರಿಗೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಅಸ್ಪತ್ರೆಗೆ ದಾಖಲಾಗುತ್ತಾಳೆ.

ಅದೇ ರಾತ್ರಿ ಬದುಕಿನ ಈ ಎಲ್ಲಾ ದುರ್ಘಟನೆಗಳಿಂದ ಸ್ಥಿಮಿತ ಕಳೆದುಕೊಂಡ ವಿಪರೀತ ಕುಡಿದು ಅಸ್ತವ್ಯಸ್ತಳಾದ ಆಕೆಗೆ ಇನ್ನೊಂದು ಆಘಾತ ಎದುರಾಗುತ್ತದೆ. ಅದೇ ಆಕೆಯಲ್ಲಿ ಪ್ರೇಮ ಮಾಧುರ್ಯದ ಆಲೆಯನ್ನು ಎಬ್ಬಿಸಿದ Mitch ಕೂಡ ಆಕೆಯ ಗತಬದುಕಿನ ಘಟನೆಗಳ ಕೆದಕಿ ಇರಿಸುಮುರಿಸುಗೊಳಿಸುತ್ತಾನೆ. ಮೊದಲಿಗೆ ಅದನ್ನೆಲ್ಲಾ ಅಲ್ಲಗಳೆಯುವ ಪ್ರಯತ್ನ ಮಾಡುವ ಆಕೆ ಕೊನೆಯಲ್ಲಿ ಒಪ್ಪಿ ಸಲಿಂಗ ಕಾಮಿಯಾದ ತನ್ನ ಹಳೆಯ ತರುಣ ಗಂಡನ ಸಾವಿಗೆ ಕಾರಣವಾದ ಸಂಗತಿಯನ್ನು ಬಿಚ್ಚಿಡುತ್ತಾಳೆ. ಹಾಗಾಗಿ ತಾನು ಅಪರಿಚಿತರೊಂದಿಗೆ ದೈಹಿಕ ಬಯಕೆಗಳ ತೃಪ್ತಿಗೆ ಮೊರೆ ಹೋಗಬೇಕಾದ ಅನಿವಾರ್ಯತೆಯನ್ನು ತಿಳಿಸಿದರೂ ಈಗ ಆತ ಅದೇ ಆಗಿ ಉಳಿಯದೇ ತದ್ವಿರುದ್ಧ Mitch ಪ್ರಕಟಗೊಳ್ಳುತ್ತಾನೆ. ಆಕೆಯನ್ನು ತನ್ನೊಂದಿಗೆ ಮಲಗಲು ಬರುವಂತೆ ಆಕೆಯೊಂದು ಕರೆವೆಣ್ಣು ಎಂಬಂತೆ ಬಲವಂತ ಪಡಿಸುತ್ತಾನೆ. ಪ್ರಯತ್ನಪಟ್ಟು ಆತನಿಂದ ಬಿಡಿಸಿಕೊಂಡ ಆಕೆ ತನ್ನ ಬದುಕು ತಂಗಿಯ ದೈಹಿಕ ಸ್ಥಿತಿಯ ಕುರಿತಾಗಿ ಚಿಂತಿಸುತ್ತಾ ಇರುವಾಗಲೇ ಆಸ್ಪತ್ರೆಯಿಂದ ಮನೆಗೆ ಬರುವ ಸ್ಟ್ಯಾನ್ಲಿ ಪುನಃ ಹಳೆಯ ವಿಚಾರಗಳ ತೆಗೆದು ಆಕೆಯ ಹೀಯಾಳಿಸುತ್ತಾ ತಪ್ಪಿಸಿಕೊಳ್ಳಬಯಸುವ ಆವಳ ಮೇಲೆ ಲೈಂಗಿಕ ಧಾಳಿ ನಡೆಸಿ ಅತ್ಯಾಚಾರಗೈಯುತ್ತಾನೆ.

ಈ ಘಟನೆ ನಿಜಕ್ಕೂ ಆಕೆಯ ಬದುಕನ್ನೇ ಬಲಿ ತೆಗೆದುಕೊಳ್ಳುತ್ತದೆ. ನಾಟಕದ ಕೊನೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಆಕೆ ತನ್ನನ್ನು ಪ್ರೀತಿಯಿಂದ ನೋಡಿಕೊಂಡ ಮನೋವೈದ್ಯರಲ್ಲಿ ಆಕೆ ಹೇಳುವ “always depended on the kindness of strangers” ಮಾತು ಮನಕಲಕುತ್ತದೆ.

ಬ್ಲೇಂಚಿಯ ಬದುಕು ಆಕೆಗೆ ಕಟ್ಟಿಕೊಟ್ಟ ಬುತ್ತಿ ಮಾತ್ರ ವಿಷಾದ. ತೃಪ್ತಗೊಂಡಿರದ ವೈವಾಹಿಕ ಬದುಕು ಅತಿಯಾದ ಬಯಕೆಗೆ ಆಕೆಯ ಜೀವನ ವಿಚಿತ್ರ ತಿರುವುಗಳ ಪಡೆದುಕೊಳ್ಳುತ್ತ ಹೋಗುತ್ತದೆ. ಕೊನೆಗೂ ಆಕೆ ಮಾನಸಿಕ ವಿಚಲತೆಗೆ ಗುರಿಯಾಗಿ ಸ್ತ್ರೀ ವೇದನೆಗೆ ಸಾಂಕೇತಿಕ ಸಾಕ್ಷಿಯಾಗಿ ಸಹೃದಯ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತಾಳೆ.

ವಿಲಿಯಮ್ಸನ ಹಲವಾರು ನಾಟಕಗಳ ಪಾತ್ರಗಳು ಕಥಾ ಹಂದರ ಆತನ ಬದುಕಿನ ವಾತಾವರಣ ಸುತ್ತಮುತ್ತಲ ಪಾತ್ರಗಳ ಪ್ರತಿರೂಪಣದಂತೆ ಕಂಡುಬರುತ್ತವೆ. ಸ್ತ್ರೀ ಪಾತ್ರಗಳ ಕಟ್ಟಿಕೊಡುವಲ್ಲಿ ಆತ ನಿಸ್ಸೀಮ. ಹೆಣ್ಣಿನ ಅಂತರಂಗ ಅಧ್ಯಯನಗೈದಂತಹ ಸಹಜ ಪಾತ್ರಗಳು ಆತನ ಕೈಯಲ್ಲಿ ಒಡಮೂಡುತ್ತವೆ. ಹಲವಾರು ಸಂಗತಿಗಳು ಸಂಕೇತಗಳ ಮೂಲಕವೇ ಹೇಳುವ ಪರಿ ಕೂಡ ಅನನ್ಯ. ಮೊದಲ ಆಗಮನದಲ್ಲಿಯೇ ಸ್ಟೆನ್ಲಿ ಮನೆಗೆ ಬರುತ್ತಲೂ ರಕ್ತ ತೊಟ್ಟಿಕ್ಕುವ ಮಾಂಸವನ್ನು ಹಿಡಿದು ಬರುತ್ತಾನೆ. ಕೊನೆಯಲ್ಲಿ ಆತ ಬ್ಲೆಂಚಿಯ ಮೇಲೆ ಅತ್ಯಾಚಾರ ಮಾಡಿ ಆ ಸಂಕೇತಕ್ಕೆ ಸಾಕ್ಷಿಯಾಗುತ್ತಾನೆ.

ನಾಟಕದಲ್ಲಿ ನಾಗರಿಕತೆಯ ಮಹಾಪೂರಕ್ಕೆ ಬಲಿಯಾದ ಅಮೇರಿಕಾದಲ್ಲಿ ನಶಿಸುತ್ತಿರುವ ನೈತಿಕತೆ ಹಾಗೂ ವಾಸ್ತವಿಕ ಬದುಕಿನ ಪರಿಕಲ್ಪನೆಗಳು ಅಭೂತಪೂರ್ವವಾಗಿ ಮಿಳಿತಗೊಂಡಿವೆ.

ಸ್ತ್ರೀ ಪುರುಷರ ಮಾನಸಿಕ ವಿಭಿನ್ನತೆ, ವರ್ತನೆಗಳು, ಬಯಕೆಗಳು, ಸವಿಸ್ತಾರ ವರ್ಣನೆಯ ಜೊತೆಗೆ ಮನೋವೈಜ್ಞಾನಿಕ ಸಂಗತಿಯನ್ನು ನಾಟಕ ಪ್ರಸ್ತುತ ಪಡಿಸುತ್ತದೆ.

ಅಮೇರಿಕಾದ ಕೋಲಂಬಸ್‌ನ ಮಿಸ್ಸೋರಿಯಲ್ಲಿ ಜನಿಸಿದ ವಿಲಿಯಮ್ಸ್ ಒಬ್ಬ ಸೇಲ್ಸಮ್ಯಾನ್‌ನ ಮಗ. ತನ್ನ ಬಾಲ್ಯದ ಜೀವನವನ್ನು ತಾತನ ಮನೆಯಲ್ಲಿ ಮುಕ್ತವಾಗಿ ಆನಂದವಾಗಿ ಕಳೆದ ಆತನಿಗೆ ಕುಡುಕ ತಂದೆಯೆಂದರೆ ಕಾಡುವ ದುಃಸ್ವಪ್ನವಾಗಿದ್ದ. ಅಪರೂಪಕ್ಕೆ ತಂದೆ ಬಂದಾಗಲೂ ಕುಡಿದು ಮನೆಯನ್ನು ರಣರಂಗವಾಗಿಸುತ್ತಿದ್ದುದ್ದು ಪುಟ್ಟ ಮನಸ್ಸಿನಲ್ಲಿ ಭಯದ ಬಾವಿಯನ್ನು ತೋಡಿತ್ತು. ತಂದೆ ಮಗನ ಬಾಂಧವ್ಯದ ಆನಂದವನ್ನು ಆತ ಮಗನಿಗೆ ನೀಡದೇ ಇರುವುದು ಆತ ತಂದೆಯಿಂದ ವಿಮುಖನಾಗುತ್ತ ಹೋದ. ಒಡಹುಟ್ಟಿದ ಸಹೋದರಿ ಮಾನಸಿಕ ಸಮಸ್ಯೆಗೆ ಬಲಿಯಾದದ್ದು, ಚಿಕ್ಕ ವಯಸ್ಸಿನಲ್ಲೆ ಅತಿಯಾದ ಶ್ರಮದ ಬದುಕು ನಡೆಸಿದ ವಿಲಿಯಮ್ಸ್ ಕ್ರಮೇಣ ಬರವಣಿಗೆಯಲ್ಲಿ ನೆಮ್ಮದಿಯ ಕಂಡುಕೊಂಡ. ಮನಸ್ಸಿಗೆ ನೋವು ಆಘಾತವನ್ನುಂಟುಮಾಡುವ ಆತನ ನಾಟಕಗಳ ಮೇಲೆ ಆತನ ಬದುಕಿನ ನೆರಳಿರುವುದು ಸ್ಪಷ್ಟ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....