
ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ? || ಪ || ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು ಯಾಕೆ ಯಾರಿಗೆ ಶೋಭೆ? ಕಾಣದೆ...
ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ; ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ: ಅವನೆಲ್ಲ ಕಾಣಲಿಲ್ಲ ನಾನು. ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ, ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ: ಅವನೆಲ್ಲ ಪಡೆಯಲಿಲ್ಲ ನಾನು. ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲ...
ಎಲ್ಲಿ ಬಡತನ ಉಂಟು ಹಸಿದ ಕ೦ಬನಿಯುಂಟು ಅಲ್ಲಿ ಇರುವನು ನೋಡು ಗುರುರೇಣುಕಾ ಮುರುಕು ಗುಡಿಸಲ ಬಳಿಗೆ ಹರಕು ಬಟ್ಟೆಯ ಒಳಗೆ ಮಾರುವೇಷದಿ ಬರುವ ವರರೇಣುಕಾ ॥ ಎಲ್ಲಿ ದಲಿತರ ನೋವು ಬಿದ್ದ ಬಡವರ ಕೂಗು ಓಯೆಂದು ಬಂದಾನು ಗುರು ರೇಣುಕಾ ಮಲ್ಲಯುದ್ಧವು ಬೇಡ ಘ...
ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...
ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...
ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನ...
ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು ನಮ್ಮ ನಾಡಿನವರಲ್ಲ ಬಿಡು ಭಂಟನೆ ಇಂದು ಜುಲೈ ಐದು, ಎರಡುಸಾವಿರದ ಹದಿನೈದು ಬದುಕಿದ್ದರೆ ಕಾಸರ್ಬಾನು, ಅವಳ ಮಗುವಿಗೆ ಈಗ ಹದಿಮೂರರ ಹರೆಯ ಮೂಡುತ್ತಿತ್ತು. ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದ...
ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...













