ಡಾ|| ಕಾ ವೆಂ ಶ್ರೀನಿವಾಸಮೂರ್‍ತಿ

ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.

ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ

ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ ತಾಪವ ಹೀರಿ ತಂಪನು ಕೊಡುವೆವು ಕಡಿಯ ಬೇಡಿಯಣ್ಣ ನಮ್ಮನು ಕಡಿಯ ಬೇಡಿರಣ್ಣ || ನಡೆಯುವ ದಾರಿಯಲಿ ನಿಮಗೆ ನೆರಳನು ನೀಡುವೆವು […]

ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ || ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ […]

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ […]

ಎತ್ತ ಸಾಗಿದೆಯೊ ಕನ್ನಡ ರಥವು!

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ! ಕನ್ನಡಕ್ಕೆಂಟು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲಾ! ಕವಿಗಳು ದಾಸರು […]

ಕನ್ನಡವೇ ನನ್ನುಸಿರು

ಏನೇ ಇರಲಿ ಏನೇ ಬರಲಿ ಕನ್ನಡ ನನ್ನುಸಿರಾಗಿರಲಿ ವಿಶ್ವದ ಯಾವುದೆ ನೆಲದಲ್ಲಿರಲಿ ಎದೆಯಲಿ ಕನ್ನಡ ಬೆಳಗಿರಲಿ ಕಣ್‌ಕುರುಡಾಗಲಿ ಬೆಳಕಿರುಳಾಗಲಿ ಕನ್ನಡ ಕಣ್ಣಲಿ ತುಂಬಿರುವ ಕಂಬನಿ ಸುರಿಯಲಿ ರಕುತವೆ […]

ಸಿರಿಗನ್ನಡ ತಾಣ

ಕುಣಿಯುವ ನವಿಲಿನ ಸುಂದರ ತಾಣ ಕರುನಾಡಲ್ಲದೆ ಇನ್ನೇನು ಹಾಡುವ ಕೋಗಿಲೆ ಕೊರಳಿನ ಗಾನ ಕನ್ನಡವಲ್ಲದೆ ಮತ್ತೇನು? ಹರಿಯುವ ಹೊಳೆಗಳ ಜುಳುಜುಳು ರವದಲಿ ಸಿರಿಗನ್ನಡದ ಮಾರ್ದನಿಯು ತುಳುಕುವ ಕಡಲಿನ […]

ಬೆಳಕಾದ ಬೀಡು

ಯಾವ ಜನ್ಮದ ಪುಣ್ಯವೊ ಏನೊ ನಾನಾಗಿಹೆನು ಕನ್ನಡಿಗ ಕವಿ ಕಲ್ಪನೆಯ ಚೆಲುವಿಗು-ಮೀರಿದ ಕಾಣುತಲಿಹೆನೀ ಸಿರಿಸಗ್ಗ ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ ಅಮೃತ ಸಲೆಯಾಗಿ ಹರಿಯುತಲಿದೆಯೊ ಸಾಹಿತ್ಯದ ಹೊಳೆ […]