ಬರೆದವರು: Thomas Hardy / Tess of the d’Urbervilles
ದಿವಾನ್ರು ಬರುವರೆಂಬ ಸುದ್ದಿ ಮಜ್ಜಿಗೇಹೆಳ್ಳಿಗೆ ಹೊಸಜೀವ ತಂದಿದೆ. ಸುತ್ತಮುತ್ತಿನವರೆಲ್ಲ ರೆೀಶಿಮೆ ಕಸುಬಿನವರು. ಅವರೆಲ್ಲ ಉತ್ತಮವಾದ ರೇಶಿಮೆ ಮಾಡುವುದರಿಂದೆ ಹಿಡಿದು ರೇಶಿಮೆ ತೆಗೆದು ತೋಡಿ ಲಡಿ ಮಾಡುವವರೆಗೂ ಎಲ್ಲ ಕೆಲಸಗಳನ್ನೂ ಅವರಿಗೆ ತೋರಿ ಸಲು ಸಿದ್ದರಾಗಿದ್ದಾರೆ. ಅವರಿಗೆ ತೋರಿಸಬೇಕೆಂದಿರುವ ತೋಟತುಡಿಕೆ ಗಳೆಲ್ಲ ಝಳ ಝಳ ಇರಬೇಕೆಂದು ಆಗಿದೆ. ಆ ಊರಿನಲ್ಲಿ ಕುಲಿಮೆಯ ಸುಬ್ಬಾಚಾರಿ ಕೂಡ ಶುಭ್ರಾಚಾರಿ ಆಗಿ ತಿದಿಗೆ ಎಣ್ಣೆ ಸವರಿ, ಕೋಲಿಗೆ ಬಣ್ಣ ಬೊಳೆದು, ಕುಲಿಮೆಯ ಬೂದಿ ತೆಗೆದು ವಿಧೂತಿಕಟ್ಟು ಗಂಧ ಹಾಕಿಕೊಂಡು ಬರುತ್ತಿದ್ದಾನೆ. ಮರಗೆಲಸದ ಮೂಗೂರಪ್ಪ ಒಂದು ಸೊಗಸಾದ ಮಂದಾಸನ, ಒಂದು ಮಣೆ ಮಾಡಿದ್ದಾನೆ. ಅವನಾಶೆ “ಅವೆರಡೂ ದಿವಾನರಿಗೆ ಒಪ್ಪಿಸಿದರೆ, ಅವರಿಗೆ ದಿನಾ ದೇವರಪೂಜೆ ಮಾಡಬೇಕು ಅನ್ನಿಸಬೇಕು ” ಎಂದು.
ಅಷ್ಟೇ ಅಲ್ಲ. ಹೊಲಗೇರಿ ಕೂಡ ಉತ್ತಮರ ಕೇರಿಯ ಹಾಗಿದೆ. ತುರುಕರ ಕೇರಿಯಿಂದ ಹತ್ತುಭಂಡಿ ಗೊಬ್ಬರ ಹೋಗಿ ಗೊಬ್ಬರದ ಗುಂಡಿಗೆ ಬಿದ್ದಿದೆ.
ತೋಟಗಳಿಗೆ ದಿನದಿನ ಮೈ ಬೆವರು ಸುರಿಯುತ್ತಿದೆ. ಅಂತೂ ಊರು ಹೊಸ ಉಡೆ ಉಡಬೇಕೆಂದು ಎಣ್ಣೆ ಮಜ್ಜನಮಾಡಿದ ಹೆಣ್ಣಿ ನಂತಾಗಿದೆ.
ಊರಿನಲ್ಲಿ ಎಲ್ಲರಿಗೂ ಉತ್ಸಾಹ. ಎಲ್ಲರಿಗೂ ಸಂಭ್ರಮ.
ಆದಿನಕ್ಕೆಂದು ಹೊಸಬಟ್ಟಯಿಲ್ಲದವರು ಇದ್ದದ್ದೇ ಒಂದು ಜೊತೆ ಬಟ್ಟೆ, ಉಡೋಕೆ ತೊಡೋಕೆ, ಚೆನ್ನಾಗಿ ಗರಿಮರಿ ಮಾಡಿಟ್ಟಿದ್ದಾರೆ. ಅಗಸರ ವೀರಣ್ಣಗೆ ರಟ್ಟೆನೋವು : ಅವನ ಕತ್ತಿಗೆ ಬೆನ್ನುನೋವು.
ನಾಯಕ ಇದೇ ಸಮಯ ನಡೆದುಹೋಗಲು ಎಂದು ಒಂದು ಸಾವಿರರೂಪಾಯಿ ಖರ್ಚುಮಾಡಿ, ಊರನಡುವಿನ ರಾಜಮಾರ್ಗಗಳಿಗೆಲ್ಲ ಮತ್ತೆ ಜಲ್ಲಿ ಕಾಮಗಾರಿ ಮಾಡಿಸಿ, ಮಗ್ಗುಲಿನ ಚರಂಡಿ ತೆಗೆಸಿ, ಸೊಗಸು ಮಾಡಿಟ್ಟಿದ್ದಾನೆ.
ಹೆಣ್ಣು ಗಂಡಾದಿಯಾಗಿ ಊರಿಗೆ ಊರೇ ಸಂಭ್ರಮ ಪಡುತ್ತಿದೆ. ಆದರೆ ಒಬ್ಬನಿಗೆ ಮಾತ್ರ ಮಹಾಸಂಕಟ. ಉದರವ್ಯಾಧಿ ಮೂಲವ್ಯಾಧಿ ಯವರು ಬೇನೆಪಟ್ಟಂತೆ ಮುಲಕುತ್ತಾ ಇದ್ದಾನೆ. ಅವನು ಪಟೇಲ ಮಾದೇಗೌಡ.
ಮಾದೇಗೌಡನು ನಾಯಕನಿಗೆ ಬಾದರಾಯಣ ಸಂಬಂಧದಲ್ಲಿ ಇದ್ದವನು. ಹಿರಿಯನಾಯಕನ ದಯೆಯಿಂದ ಹತ್ತಿರದ ಬಂಧು ವಾಗಿದ್ದ. ಈ ನಾಯಕನ ಸೋದರತ್ತೆ ಒಂದು ಹೆಣ್ಣುಮಗು ಹೆತ್ತು ತೀರಿಕೊಂಡಿದ್ದಳು. ಆಮಗು ನಾಯಕನ ಮನೆಯಲ್ಲಿಯೇ ಬೆಳೆಯಿತು. ಅದನ್ನು ಹಿರಿಯನಾಯಕರು ಮಾಡೇಗೌಡನಿಗೆ ಕೊಡಬೇಕೆಂದರು. ಈ ನಾಯಕನಿಗೆ ಅದು ಇಷ್ಟವಿಲ್ಲ. “ಮಾದೇಗೌಡನ ಬುದ್ಧಿ ಕಳ್ಳನ ಕಡ್ಡಿಯಹಾಗೆ ಹರಿಯೋ ನೀರಿಗೆ ಎದುರು ಹೋಗೋ ಜಾತಿ ಮನೆಗೆ ಸೇರಿಸಿಕೊಂಡು ಒದ್ದಾಡೋಕಿಂತ ದೂರಇಟ್ಟು ಸುಖವಾಗಿರೋದು ಒಳ್ಳೇದು” ಎಂದಿದ್ದ. ಆದರೆ ಹಿರಿಯನಾಯಕನ ಮನಸ್ಸು ತನ್ನ ಔದಾರ್ಯದಲ್ಲಿ ಬಡವ ಬದುಕಲಿ ಎಂಬ ಭಾವನೆಯಿಂದ ಮಗನ ಮಾತನ್ನೂ ಗಮನಿಸದೆ ಮುಂದೆ ಹೋಗಿತ್ತು.
ನಾಯಕನು ರಾವ್ ಬಹದ್ದೂರು ಆದಮೇಲೆ ಡಿ. ಸಿ. ಯವರು “ಏನ್ರಿ, ನೀನ್ ಪಟೇಲರಾಗಿರೋದೇನ್ರೀ? ಒಬ್ಬ ಶೇಕದಾರ, ತಾಲ್ಲೋಕು ಗುಮಾಸ್ತೆ, ಕೊನೆಗೆ ಅಮಲ್ದಾರ್ರ ಆಳು, ಇನ್ನೂ ಕೊನೆಗೆ ಹೋದರೆ ಅಮಲಾರ್ರ ಕುದುರೆಕೂಡ” ನಿಮ್ಮನ್ನು ಕಂಡು ಹುಲ್ಲು ಹುರುಳಿ ಬಂತೋ ಅಂತ ಹು ಹು ಹು ಹು ಅನ್ನೋತರಾದಲ್ಲಿರೋದೆ? ದೇವರು ಕೊಟ್ಟಿದ್ದಾನೆ. ಸಾಕು. ಅದನ್ನು ಯಾರಿಗಾದರೂ ಕೊಟ್ಟು ಬಿಡಿ” ಎಂದರು. ಪಟೇಲಿ ವಂಶಪಾರಂಪರ್ಯವಾಗಿ ಬಂದಿರುವ ಹಕ್ಕು. ಅದನ್ನು ಬಿಡುವುದೇ ಎಂದು ನಾಯಕ ಯೋಚಿಸಿ, ಇರಲಿ, ಎಂದು, ಇಪ್ಪತ್ತೈದು ವರುಷ ಮಾದೇಗೌಡರು ನೋಡಿಕೊಳ್ಳಲಿ ಎಂದು ಡಿ. ಸಿ. ಯವರ ಅಪ್ಪಣೆ ಪಡೆದು ಅವನಿಗೆ ವಹಿಸಿಕೊಟ್ಟಿದ್ದ. ಅವನಿಗೂ ಒಂದು ಒಳಆಸೆ ಇತ್ತು; ಅದರಿಂದ ಮಾಜೀಗೌಡ ತೃಪ್ತ ನಾಗಿ ತನ್ನ ಮೇಲಿನ ದ್ವೇಷವನ್ನು ಬಿಟ್ಟು ಹಿತನಾದಾನೇನೋ ಎಂದು. ಆದರೆ ಮುಳ್ಳು ಮುಳ್ಳೇ, ಹೊವು ಹೂವೇ ಎಂಬಂತಿತ್ತು ಗೌಡನ ಮನಸ್ಸು.
ಅವನು ಯೋಚಿಸಿ ನೋಡಿದ : “ಎರಡು ಎಕರೆ ತೋಟ ಈಗ ಹೊಡೆದು ಬಿಡಬೇಕು. ಇದೇಸಮಯ ” ಎನ್ನಿಸಿತು. ಅವನೂ ತನಗೆ ಬೇಕಾದ ಒಂದು ಪಟಾಲಂ ಕಟ್ಟದ್ದ. ನಾಯಕನಿಗಿಂತ ತಾನು ಹತ್ತು ವರುಷ ಚಿಕ್ಕವ. ಎಂದಿದ್ದರೂ ನಾಯಕ ಸಾಯಬೇಕು. ಅವನಿಗೆ ಮಕ್ಕಳಿಲ್ಲ. ತನ್ನ ಮಕ್ಕಳಲ್ಲಿ ಒಬನನ್ನು ದತ್ತು ಮಾಡಿಕೊಳ್ಳಲೇಬೇಕು. ಆಗ ಅವನ ಅಸ್ತಿಯೆಲ್ಲ ತನಗೇ ಬರಬೇಕು ಎಷ್ಟೇ ಆಗಲಿ ಹೆಣ್ಣು ಸಂತತಿ ಎಂದು ಏನೇನೋ ಕನಸು ಕಾಣುತ್ತಿದ್ದವನಿಗೆ ಮಲ್ಲಿ ಬಂದಿ ಹಾಕಿಸಿಕೊಂಡು ಜನಾನಾ ಸೇರಿದಾಗ ಹೊಟ್ಟೆಯಲ್ಲಿ ಸುಣ್ಣ ಸುರಿದಂತಾ ಗಿತ್ತು. ಅಂದಿನಿಂದ ನಾಯಕನ ಮೇಲೆ ಅವನಿಗೆ ಉರಿಯಲ್ಲ: ವಿಷ ಕಾರುವಂತಾಗಿತ್ತು. “ಹಾಗೆ ಸಣ್ಣ ಹುಡುಗಿ ಬೇಕಾಗಿದ್ದರೆ ನನ್ನ ಮಗಳು ಮಾದೀನೆ ಕೊಡುವೆ” ಎಂದು ತನ್ನ ಪಟಾಲಂನಲ್ಲಿ” ಆಗಾಗ ನುಡಿದೂಇದ್ದ. ಅಂತೂ ಇರಲಿ ಎಂದು ಮೀಸೆ ಹುರಿಮಾಡುತ್ತಿದ್ದವ ನಿಗೆ ದಿವಾನರು ಬರುವ ಸಂದರ್ಭ ನಾಯಕನಿಗೆ ಅವಮಾನ ಮಾಡುವ ಅವಕಾಶವನ್ನು ಕೊಟ್ಟದೆ ಎಂಬ ದುರ್ಭಾವನೆಯನ್ನು ತಂದಿತ್ತು.
ಕೆಂಪಿ ಮಲ್ಲಣ್ಣ ಇಬ್ಬರೂ ಮೈಸೂರಿನಿಂದ ಬಂದಿದ್ದರು. ಅವರ ಜೊತೆಯಲ್ಲಿ ಅವರ ಬಲವಂತದಿಂದ ಆನಂದಮ್ಮ ಶಂಭುರಾಮಯ್ಯನೂ ಬಂದಿದ್ದರು ಸುತ್ತಮುತ್ತಲಿಂದ ಜನ ಜಾತ್ರೆಗೆ ಬಂದ ಹಾಗೆ ಬಂದಿದ್ದಾರೆ.
ನಾಯಕನು ಮೈಸೂರಿನಿಂದ ದಿವಾನರನ್ನು ಕರೆತಂದಿದ್ದಾನೆ. ಊರಬಾಗಿಲಲ್ಲಿ ಬಾಜಾಬಜಂತ್ರಿ ಪೂರ್ಣಕಲಶ ಎಲ್ಲ ಮರ್ಯಾದೆಗೆ ಳನ್ನೂ ತೆಗೆದುಕೊಂಡು ಬಂದು ಊರಿನವರೆಲ್ಲ ಕಾಣಿಸಿಕೊಂಡರು. ನಾಯಕನು ಅಲ್ಲಿ ಇದು ಅರಮನೆಯ ಮರ್ಯಾದೆಯೆಂದು ಒಂದು ದಿಂಡಿನ ಹಾರಹಾಕಿ ಪಟೇಲರಿಂದ ಒಂದು, ಶಾನುಭೋಗರಿಂದ ಒಂದು, ಊರಿನ ಒಗ್ಗಟ್ಟುಪರವಾಗಿ ಪುರೋಹಿತರಿಂದ ಒಂದು, ಮಿಕ್ಕ ವರ ಪರವಾಗಿ ಹಕೀಂಸಾಬಿಯಿಂದ ಒಂದು, ಹಾರಗಳನ್ನು ಹಾಕಿಸಿದನು. ದಿವಾನರ ಸವಾರಿಯು ಸೂರೋಟನಲ್ಲಿ ಕುಳಿತು ಊರ ಮೆರವಣಿಗೆ ಮಾಡಿಕೊಂಡು ಅರಮನೆಗೆ ಚಿತ್ತೈಸಿತು. ನಾಯಕನು ಸಾರೋಟನ ಮಗ್ಗುಲಲ್ಲಿ ಕುದುರೆಯಮೇಲೆ ಕುಳಿತು ಬಂದನು.
ಅರಮನೆಯ ಬಾಗಿಲಲ್ಲಿ ಒಂದು ಸೊಗಸಾದ ಹಸಿರುವಾಣಿ ಮಂಟಪ, ಆ ವೈಭವ ನೋಡುವುದಕ್ಕೆ ಎರಡು ಕಣ್ಣು ಸಾಲದು. ವೈಸ್ರಾಯರು ಬಂದಾಗ ಮಾರ್ಕೆಟ್ಟಿನ ಮುಂದಿ ಹಾಕುತ್ತಿದ್ದಂತಹ ಸೊಗಸಾದ ಮಂಟಪ. ದಿವಾನರಿಗೆ ಮತ್ತೆ ಹಾರಾ ತುರಾಯಿ ಅತ್ತರು ಪನ್ನೀರು ಫಲತಾಂಬೂಲ ನಜರಾಣಿ ಎಲ್ಲವನ್ನೂ ಒಪ್ಬಿಸಿದೆ. ನಜ ರಾಣಿ ಸೊಗಸಾದ ರೇಶಿಮೆ ವಲ್ಲಿ: ರೇಶಿಮೆಯ ಬೂಟಾ ಮಗುಟ: ಎಂಟೆಂಟು ಗಜದ ಮೂರು ಗುಲಾಬಿ, ನೀಲಿ, ಬಿಳಿಯ ಬಣ್ಣದ ರೇಶಿಮೆ ಥಾನ್ಗಳು: ಒಂದು ಉತ್ತಮವಾದ ದಪ್ಪ ಅವರೆಕಾಳಿನ ಗಾತ್ರದ ವಜ್ರದ ಅಂತರಾಳದ ಕಟ್ಟಡದ ಉಂಗುರ.
ದಿವಾನರು ಪರಮಸಂತುಷ್ಟರಾಗಿ ನಾಯಕರ ಕೈಹಿಡಿದು ಕುಲುಕಿ ತಮ್ಮ ಸಂತೋಷವನ್ನು ಸೂಚಿಸಿದರು. ಅಲ್ಲಿ ನೆರೆದಿದ್ದ ಜನ ಅದನ್ನು ಕಂಡು ಸಂತೋಷದಲ್ಲಿ ಬೆರೆತು ಹೋಯಿತು: “ಬುಡೋ! ನಮ್ಮ ನಾಯಕನ ಭಾಗ್ಯ ಅಂದರೆ ಇದಲ್ಲವಾ? ದೇಶಾನಾಳೋ ದಿವಾನರೇ ಇವನ ಮನೆ ಬಾಗಿಲಿಗೆ ಬಂದು ಕೈ ಹಿಡಿದು ಕುಲುಕಿಬಿಟ್ಟರು ಅಂದ್ರೆ ಇನ್ನು ಏನೇಳೋದು! ಆ ಅಪ್ಪನ ಪುಣ್ಯ ಇಂಥಾ ಮಗ ಹುಟ್ಟಿದ. ಸಾರ್ಥಕ ಆಯಿತು” ಎಂದು. ಮುಕ್ತಕಂಠರಾಗಿ ಹೊಗ ಳಿದರು.
ಮಾದೇಗೌಡನಿಗೆ ಮಾತ್ರ “ಬೇಕಾದ್ದಾಗಲಿ : ಇವನಿಗೆ ಒಂದು ಕರೀಗೆರೆ ಎಳೀಲೇಬೇಕು” ಎನ್ನಿಸಿತು.
ದಿವಾನರು ಪಾದರಸ. ಬಂದು ಇನ್ನೂ ಅರ್ಧ ಗಂಟೆಯಿಲ್ಲ. ” ನಾಯಕರೆ, ತಮ್ಮ ಅರಮನೆ ಇಂಗ್ಲೆಂಡಿನ ಕ್ಯಾಸಲ್ಗಳಂತೆ ಇದೆ. ಆಯಿತು. ತಮ್ಮ ಊರು ಹೇಗಿದೆ? ಏನೇನು ನೋಡಬೇಕು? ತೋರಿಸಿ, ನೋಡೋಣ ನಡೆಯಿರಿ” ಎಂದರು: ತಮ್ಮ ರುಮಾಲು ತೆಗೆದು ಹ್ಯಾಟ್ ಹಾಕಿಕೊಂಡು ಊರುಗೋಲು ಹಿಡಿದು ಹೊರಟೇಬಿಟ್ಟರು. ನಾಯಕನು ತೆಗೆದುಕೊಂಡಿದ್ದ ಕೊಡೆಯನ್ನು ಬೇಡವೆಂದು “ತಾವೂ ಹ್ನಾಟ್ ಹಾಕಿಕೊಂಡುಬಿಡಿ ” ಎಂದರು. ನಾಯಕನೂ ಹ್ಯಾಟ್ ಹಾಕಿಕೊಂಡು ಹೊರಟನು.
ದಾರಿಯಲ್ಲಿ ಸಣ್ಣಗೆ ಹ್ಯಾಟಿನಮೇಲೆ ಒಂದು ಉಪನ್ಯಾಸ ಮಾಡಿ ದರು. ನಮ್ಮ ದೇಶದಲ್ಲಿ ಬಿಸಿಲು ಬಹಳ. ಈ ಬಿಸಿಲಿನ ಒಣಗ ಬೇಕಾಗಿಲ್ಲ. ಆಫ್ರಕಾ ಅಮೇರಿಕಾ, ಮೊದಲಾದ ಕಡೆಗಳಲ್ಲೂ ಈ ಹ್ಯಾಟ್ ಬಹಳ. ನಮ್ಮ ರೈತರೆಲ್ಲ ಉಳೋವಾಗ ಹ್ಯಾಟ್ ಹಾಕ್ಕೊಂ ಡರೆ ಬಹಳ ಒಳ್ಳೆಯದು. ನಮ್ಮ ಶ್ರೀರಂಗಪಟ್ಟಣದ ಸಿದ್ದಲಿಂಗ ದೇವರು ನೋಡಿದ್ದೀರಾ? ಅವರು ಒಂದು ನಿಕ್ಕರ್, ಒಂದು ಬನಿ ರ್ಯ, ಒಂದು ಹ್ಯಾಟ್ ಹಾಕ್ಕೊಂಡು ನೆಲ ಉಳುತ್ತಾರೆ. ತೋಟ ದಲ್ಲಿ ಗೊಬ್ಬರ ಹೊತ್ತು, ಕಳೆಕಿತ್ತು ತಾವೇ ಆಳಿಗಿಂತ ಚನ್ನಾಗಿ ದುಡಿ ಯುತ್ತಾರೆ. ನಮ್ಮ ರೈತಾಪಿಯೆಲ್ಲಾ ಅವರ ಹಾಗೆ ಆಗಬೇಕು. ಅಸೆಂಬ್ಲಿಯಲ್ಲಿ ಆವರ ಮಾತು ಕೇಳಿದ್ದೀರೇನು? ಕಣ್ಣು ಮುಚ್ಚಿ ಕೊಂಡು ಹೇಳೋಕೆ ಷುರುಮಾಡಿದರೆ, ಒಂದು ಗಂಟೆ ಆಗಲಿ, ಜಗ್ಗೊ? ದಿಲ್ಲ. ಹಾಗೆ ರೈತ ನಮ್ಮ ದೇಶದ ಬೆನ್ನುಮೂಳೆ. ಅವನು ಗಟ್ಟಿ ಯಾಗಬೇಕು. ಅವನಿಗೆ ಮಾತು ಬರೊಲ್ಲ. ಅವನು ಮಾತು ಕಲಿಯಬೇಕು. ಜಪಾನಿನಿಂದ ಹಿಡಿದು ಆಸ್ಟ್ರೇಲಿಯ, ಕ್ಯಾಲಿಫೋ ರ್ನಿಯರರೆಗೆ ಎಲ್ಲೆಲ್ಲಿ ಏನೇನು ಸುಧಾರಣೆ ಆಗಿದೆ ಅದೆಲ್ಲ ಕಲಿಯ ಬೇಕು. ಮನೆ ಮನೆಯಲ್ಲೂ ನಮ್ಮ ನಾಯಕರ ಮನೆಯಲ್ಲಿರುವ ಹಾಗೆ ಸಂತೋಷ ಸೌಭಾಗ್ಯ ತುಂಬಬೇಕು.” ಎಂದು ಸಂಭ್ರಮದಿಂದ ಮುಂದೆ ಬರಬೇಕಾದ ಭವ್ಯಭವಿಷ್ಯತ್ತಿನ ವೈಭವಸಂಪನ್ನಚಿತ್ರವನ್ನು ವರ್ಣಿಸುತ್ತ ನಡೆದರು.
*****