ಒಬ್ಬ ಗೃಹಸ್ಥ ಸಂಸಾರ ಸಾಗರದಲ್ಲಿ ಮುಳಗಿದ್ದ. ಅವನು ಅಪಾರ ಸಂಪತ್ತು ಗಳಿಸಿ ಇಟ್ಟಿದ್ದ. ಅವನಿಗೆ ಹೆಂಡತಿ, ಮಕ್ಕಳು, ಮನೆಮಠ, ಹಣದಿಂದ ಶಾಂತಿ ದೊರೆಯಲಿಲ್ಲ. ಅವನ ಮನೆಗೆ ಒಂದು ದಿನ ಒಬ್ಬ ಸಾಧು ಬಂದಾಗ, ಗೃಹಸ್ಥ ತನ್ನ ಸ್ಥಿತಿಯನ್ನು ಬಿನ್ನವಿಸಿ ಕೂಂಡ.
ಸಾಧು ಹೇಳಿದ- “ನೋಡು ನಿನಗೆ ಎರಡು ಇಲಿಗಳನ್ನು ಕೊಟ್ಟು ಹೋಗುತ್ತೇನೆ. ಒಂದು ಕಪ್ಪು ಇನ್ನೊಂದು ಬಿಳಿ, ಇದನ್ನು ಒಂದು ವರ್ಷ ಕಾಲ ಸಾಕು. ನಾನು ಮತ್ತೆ ತಿರುಗಿ ಬರುತ್ತೇನೆ. ನೀನು ಹೇಗೆ ಇರುವೆ ಎಂದು ಹೇಳು” ಎಂದರು.
ಅದಕ್ಕೆ ಗೃಹಸ್ಥ ಒಪ್ಪಿಕೊಂಡ.
ಒಂದು ವರ್ಷವಾಯಿತು. ಸಾಧು ತಿರುಗಿ ಬಂದರು. ಗೃಹಸ್ಥ ಈಗ ಸನ್ಯಾಸಿಯಂತೆ ಕಾವಿಬಟ್ಟೆ ಉಟ್ಟು ನಿಂತಿದ್ದನು. ಸಾಧು ಕೇಳಿದ- “ಈಗ ಶಾಂತಿ ಇಂದ ಇರುವೆಯಾ?” ಎಂದು. ನೀವು ಕೊಟ್ಟ ಬಿಳಿ ಇಲಿ ಹಗಲಿನಲ್ಲಿ ಸಂಸಾರದ ಎಳೆಯನ್ನು ಕಡೆಯಿತು. ನೀವು ಕೊಟ್ಟ ಕರಿ ಇಲಿ ರಾತ್ರಿಯ ಕತ್ತಲಲ್ಲಿ ನನ್ನ ಹಣದ ನೋಟುಗಳನ್ನೆಲ್ಲಾ ತಿಂದು ಹಾಕಿತು. ಈಗ ನಾನು ನಿಮ್ಮಂತೆ ಶಾಂತಿ ಪಡೆದು ಸನ್ಯಾಸಿಯಾಗಿದ್ದೇನೆ.” ಎಂದ.
*****