ಉಮರನ ಒಸಗೆ – ೪೪

ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****

ಉಮರನ ಒಸಗೆ – ೪೨

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****

ಉಮರನ ಒಸಗೆ – ೪೧

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****

ಉಮರನ ಒಸಗೆ – ೩೯

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****