Henry Fieldingನ Tom Jones- ಬದುಕಿನ ಅನಿರ್ದಿಷ್ಟತೆಯ ವಾಸ್ತವ ಚಿತ್ರಣ

Henry Fieldingನ Tom Jones- ಬದುಕಿನ ಅನಿರ್ದಿಷ್ಟತೆಯ ವಾಸ್ತವ ಚಿತ್ರಣ

Tom Jones ಎಂಬ ಬಾಲಕ ಹುಟ್ಟುತ್ತಾ ಹೆತ್ತವರಿಂದ ತಿರಸ್ಕೃತನಾದ ಪರಿತ್ಯಕ್ತನಾಗಿ ಅನಾಥ ಶಿಶುವಾದಾಗಿನಿಂದ ತನ್ನ ಪ್ರೌಢಪ್ರಾಯದವರೆಗೆ ಹಲವು ರೀತಿಯಲ್ಲಿ ಅನುಭವಗಳ ಸಾರವನ್ನು ಪಡೆಯುತ್ತ, ಭಾವನಾತ್ಮನಾಗಿದ್ದರೂ ಗಟ್ಟಿಗೊಳ್ಳುತ್ತ, ಸಧೃಢನಾಗುತ್ತ, ಸಾಗುತ್ತಾನೆ.

Squire allworthy ತನ್ನ ಬಿಸಿನೆಸ್ ಪ್ರವಾಸ ಮುಗಿಸಿ ಮನೆಗೆ ಬಂದಾಗ ತನ್ನ ಹಾಸಿಗೆಯಲ್ಲಿ ಅನಾಥ ಮಗುವನ್ನು ಕಂಡು ಗಾಬರಿಗೊಳ್ಳುತ್ತಾನೆ. ಅಲ್ಲಿಂದ ಪ್ರಾರಂಭವಾದ ಕಥೆ ಟಾಮ್ ಬೆಳೆದು ದೊಡ್ಡವನಾಗುತ್ತ ಬದುಕಿನೆಲ್ಲ ದುಷ್ಟ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡು ಅನುಭವಗಳ ಮುಟೆಯಿಂದ ಕಲಿಸಿಕೊಟ್ಟ ಪಾಠದಿಂದ ಜ್ಞಾನಿಯಾಗುತ್ತ ಆ ಮೂಲಕ ಪರಿಶುಧ್ಧನಾಗುತ್ತ ಹೋಗುತ್ತಾನೆ. ತನ್ನ ಮನೆಯ ಕೆಲಸದಾಕೆ Jenny Jones ಅನೈತಿಕ ಸಂಬಂಧಕ್ಕೆ ಜನಿಸಿದ ಮಗುವೆಂದು ತಿಳಿದು ಆ ಮಗುವನ್ನು ದತ್ತು ಪಡೆದು Squire allworthy ಧೀಮಂತನಾಗುತ್ತಾನೆ. ಯೌವನಕ್ಕೆ ಬರುತ್ತಲೇ ಟಾಮ್ ತನ್ನ ನೆರೆಮನೆಯ ಸುಂದರ ಯುವತಿ Sophia Westernಳಲ್ಲಿ ಅನುರಕ್ತನಾಗುತ್ತಾನೆ. ಆದರೆ ಆಕೆಯ ತಂದೆ Squire Western ಪ್ರಾಪಂಚಿಕ ಶ್ರೀಮಂತಿಕೆಯಲ್ಲಿ ಆಸಕ್ತನಾಗಿದ್ದು ಅನೈತಿಕ ಕುಡಿ ಟಾಮನಿಗೆ ಆಕೆಯನ್ನು ಧಾರೆಯೆರೆಯಲು ಹಿಂದೇಟು ಹಾಕುತ್ತಾನೆ. ಆದರೆ ಸೋಫಿಯಾ ತನ್ನ ದಿಟ್ಟ ನಿರ್ಧಾರವನ್ನು ಬದಲಿಸುವುದಿಲ್ಲ. ಕೊನೆಯಲ್ಲಿ ಟಾಮ್ ತನ್ನ ಪ್ರಿಯಳಾದ ಸದ್ಗುಣಿ ಸೋಫಿಯಾಳನ್ನು ವಿವಾಹವಾಗಿ ತನಗೆ ನಿಜಕ್ಕೂ ದಕ್ಕಬೇಕಾದ ಆಸ್ತಿಗೆ ಒಡೆಯನಾಗಿ ಸುಖಾಂತದೊಂದಿಗೆ ಆಶಾವಾದದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಕಾದಂಬರಿಯ ಇನ್ನೊಂದು ಪಾತ್ರ Molly Seagrim ಆಕೆ ಕೂಡ ಟಾಮ್ನನ್ನು ಪ್ರೀತಿಸುತ್ತಾಳೆ. ಆಕೆ ಬಡವ Black Georgeನ ಮಗಳು. ಆಕೆಯ ಎಲ್ಲ ಕಷ್ಟಗಳಲ್ಲಿ ಆಕೆಗೆ ಸಹಾಯ ನೀಡುವ ಸೋಫಿಯಾ ಆಕೆಯೊಂದಿಗೆ ಟಾಮ್‌ನ ಸಂಬಂಧ ತಿಳಿದೂ ಕ್ಷಮಿಸುತ್ತಾಳೆ. ಸೋಫಿಯಾಳ ಪ್ರೇಮ ದೈವಿಕ ಪರಿಪಕ್ವ. ಆಕೆ ಪಾತ್ರವನ್ನು ತೀರಾ ಆದರ್ಶಪ್ರಾಯವಾಗಿ ಪ್ರಾತಿನಿಧಿಕವಾಗಿ ಚಿತ್ರಿಸುತ್ತಾನೆ ಫಿಲ್ಢಿಂಗ್.

ಆದರೆ ಟಾಮ್‌ನ ತಾಯಿ Jenny Jones ಅಸಭ್ಯ ವ್ಯಕ್ತಿತ್ವದ, ಲೈಂಗಿಕವಾಗಿ ಶೋಷಿಸಲ್ಪಟ್ಟ, ಆದರೂ ಬದುಕಿನ ಜೊತೆ ಬಂದಂತೆ ಜೊತೆಗೂಡಿ ನಡೆವ ಪಾತ್ರ. ಮತ್ತು Mrs Waters ಆಗಿ ಬದಲಾಗುವ ಆಕೆಯ ಪಾತ್ರ ಅವಳೊಂದಿಗೆ ಸ್ವತಃ ತನ್ನ ಅರಿವಿಲ್ಲದೇ ತನ್ನ ತಾಯಿಯೊಂದಿಗೇ ಲೈಂಗಿಕ ಸಂಪರ್ಕ ಹೊಂದುವ ಟಾಮ್‌ನ ಬಗ್ಗೆ ಒಂದು ಕ್ಷಣಕ್ಕೆ ಜಿಗುಪ್ಸೆಯ ಚಿತ್ರಣ ಬರುತ್ತದೆಯಾದರೂ, ಆತನನ್ನು ಕೂಡಾ ಆ ವಿಚಾರ ಕಾಡುತ್ತದೆಯಾದರೂ ಅದೇನೂ ಗಂಬೀರವಾಗಿ ಚಿತ್ರಿಸಲಿಲ್ಲ ಫಿಲ್ಡೀಂಗ್. ಕಾರಣ ಫಿಲ್ಢಿಂಗ ಪ್ರಕಾರ ಇಂತಹ ಪಾಪಕ್ಕಿಂತ ಹಿಪೋಕ್ರಸಿಯೇ ಅತಿಯಾದ ದೊಡ್ಡ ಪಾಪ ಎಂಬ ಪ್ರಜ್ಞೆಯನ್ನು ಚಿತ್ರಿಸುತ್ತಾನೆ.

ಈ ಕಾದಂಬರಿ Bildungsromanಪ್ರಕಾರಕ್ಕೆ ಸೇರುತ್ತದೆ. Buildingsromanಜರ್ಮನ್ ಪದ. ಈ ಕಾದಂಬರಿಗಳಲ್ಲಿ ನಾಯಕನ ಮನಸ್ಸು ಮತ್ತು ಸ್ವಭಾವಗಳು ಬಾಲ್ಯದಿಂದ ಪ್ರೌಢತೆಯವರೆಗೂ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಪರಿಸರದಲ್ಲಿ ಆತನ ಕಲಿಯುತ್ತಾ ಕೊನೆಯಲ್ಲಿ ಬದುಕಿನ ಅನುಭವಗಳಿಂದ ಸಿಧ್ಧನಾಗಿ ಪ್ರಬುದ್ಧತೆಯ ಸ್ಥಿತಿಗೆ ತಲುಪುತ್ತಾನೆ.

ಟಾಮ ಸೋಪಿಯಾಳನ್ನು ಅತಿಯಾಗಿ ಪ್ರೀತಿಸುತ್ತಾನಾದರೂ ಆಕೆಯ ಬಿಟ್ಟು Molly Seagrim ಮತ್ತು Mrs Waters ಹಾಗೂ ಇತರ ಹೆಣ್ಣುಗಳೊಂದಿಗೆ ಹಾಸಿಗೆ ಹಂಚಿಕೊಳ್ಳುತ್ತಾನೆ. ತನ್ನ ಭವಿತವ್ಯದ ಕುರಿತು ಅತಿಯಾಗಿ ಚಿಂತಿಸುವುದಿಲ್ಲ. ಸದಾ ಎಲ್ಲದಕ್ಕೂ ಒಗ್ಗಿಕೊಳ್ಳುತ್ತ ನಿರ್ದಿಷ್ಟ ಬದುಕಿನ ನೀತಿಯ ಪರಿಪಾಲಿಸದೆ ಇರುವ ಆತ ಗೊಂದಲದ ವ್ಯಕ್ತಿಯಾಗಿ ಕಾಣುತ್ತಾನೆ. ಒಮ್ಮೆ ಸೈನ್ಯ ಸೇರ ಬಯಸುತ್ತಾನೆ. ಮತ್ತೆ ಆ ನಿರ್ಧಾರದಿಂದ ಹಿಂದಕ್ಕೆ ಓಡುತ್ತಾನೆ. ಟಾಮ್ ಮೂಲಭೂತವಾಗಿ ತುಂಟ. ಉಡಾಳ ಆದರೆ ಕೊನೆಯಲ್ಲಿ ಬದುಕಿನ ಎಲ್ಲ ಆಯಾಮಗಳಲ್ಲಿ ಪರಿಪೂರ್ಣತೆ ಪಡೆದ ಟಾಮ್ ವಿವೇಕಿಯಾಗಿ ಸಮರ್ಥ ಜಮಿನ್ದಾರನಾಗಿ ಪಡಿಮೂಡುತ್ತಾನೆ.

ಟಾಮ್ ಜೋನ್ಸ ಆಧುನಿಕ ಸಾಂಪ್ರದಾಯಿಕ ಶಾಸ್ತ್ರೀಯ ಎರಡೂ ಮೂಲಗಳಿಂದ ಸಮ್ಮೀಳಿತಗೊಂಡಿದೆ. Carvantesನ “Don Quixote”ನಲ್ಲಿ ಬರುವಂತೆ ಮಧ್ಯಯುಗೀನ ರಮಣೀಯ ಕಲ್ಪನೆಯ ಏಕ ವ್ಯಕ್ತಿಯ ಸಾಹಸ ಗಾಥೆಯ ಮಾದರಿಯಂತೆ ಟಾಮ್‌ನ ಬದುಕನ್ನು ಚಿತ್ರಿಸುತ್ತಾನೆ. ಪಾತ್ರಗಳ ನಿರ್ವಹಣೆಯಲ್ಲಿ ತೋರಿಕೆ ಮತ್ತು ಹೇಳಿಕೆಗಳು ಪ್ರಮುಖ ಉಪಕರಣಗಳು. ಕಾದಂಬರಿ ಉದ್ದಕ್ಕೂ ಹಲವು ಪಾತ್ರಗಳು ಗಂಡು-ಹೆಣ್ಣು, ಮುದುಕ-ಯುವಕ, ಶಿಷ್ಟ-ದುಷ್ಟ, ಹಾಸ್ಯ-ಗಂಭಿರ ಹೀಗೆ ಎಲ್ಲ ಪ್ರಕಾರದ ಪಾತ್ರಗಳ ವಿಭಿನ್ನ ವ್ಯಕ್ತಿಗಳ ಚಿತ್ರಣವಿದೆ. ಫಿಲ್ಡಿಂಗ್ ಆತನ ಕಾಲದ ಬದುಕಿನ ವಾಸ್ತವಿಕತೆ ಗಂಡು ಹೆಣ್ಣುಗಳ ಬದುಕಿನ ಸಂಬಂಧಗಳು, ರೀತಿ ನೀತಿಗಳ ಕಣ್ಣಮುಂದೆ ನಿಲ್ಲಿಸುತ್ತಾನೆ. ಆಸೆಬುರುಕ ಜಮೀನುದಾರ, ಘಟವಾಣಿ ಹೆಣ್ಣು, ಅಂಜುಬುರುಕ ಗಂಡುವರ, ತೋರಿಕೆಯ ಜ್ಞಾನ ಪ್ರದರ್ಶಿಸುವ ಖಾಸಗಿ ಶಿಕ್ಷಕ ಹೀಗೆ ಸಾಗುತ್ತದೆ. ಅದರೆ ಟಾಮ್‌ನ ಹೊರತಾಗಿ ಯಾವ ಪಾತ್ರವೂ ಪೂರ್ಣಪ್ರಮಾಣದಲ್ಲಿ ಚಿತ್ರಿಸಲ್ಪಡುವುದಿಲ್ಲ. ಈತ ಕಾದಂಬರಿಯ ಕೇಂದ್ರ ಪಾತ್ರ. ಫಿಲ್ಡಿಂಗ್ ಆಸಕ್ತಿ ಎಂದರೆ ಟಾಮ್ ನನ್ನು ಪೂರ್ಣಪ್ರಮಾಣದ ವ್ಯಕ್ತಿಯನ್ನಾಗಿ ರೂಪಿಸುವ ನಿಲುವಿನಲ್ಲಿ ಬಧ್ಧನಾಗಿರುವುದು.

ಇಂಗ್ಲೀಷ ಕಾದಂಬರಿ ಲೋಕದ ಆದ್ಯ ಪುರುಷರಲ್ಲಿ ಒಬ್ಬನಾದ ಹೆರ್ನ್ರಿಫಿಲ್ಢಿಂಗ್ ೧೭೦೭ ರಲ್ಲಿ ಜನಿಸಿದ. ತನ್ನ ಕಾದಂಬರಿಯ ನಾಯಕ ಟಾಮ್ ಜೋನ್ಸ್‌ನಂತೆ ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ಕ್ಲೆರ್ಜಿಮ್ಯಾನ್ ನಿಂದ ಪಡೆದ. ಲಂಡನ್ನಿನ ಮಿಡ್ಲಸೆಕ್ಸನಲ್ಲಿ ನ್ಯಾಯಾದೀಶನಾಗಿ ಸಾಮಾಜಿಕ ಚಳುವಳಿಗಾರನಾಗಿ ಗುರುತಿಸಿಕೊಂಡ ಇವರ ಕಾಲದಲ್ಲಿ ಲಂಡನ್ನಿನಲ್ಲಿ ಅಪರಾಧ ಪ್ರಕರಣಗಳು ಆತನ ನೂತನ ಯೋಚನೆ ಯೋಜನೆಗಳ ಮುಖಾಂತರ ಕಡಿಮೆ ಆಗಿದ್ದವು. ೧೭೫೪ರಲ್ಲಿ ತಮ್ಮ ಅನಾರೋಗ್ಯದ ಕಾರಣ ಹುದ್ದೆಗೆ ರಾಜಿನಾಮೆ ನೀಡಿದರೂ ಅದೇ ವರ್ಷ ಕಾಯಿಲೆ ಗುಣ ಕಾಣದೇ ಮರಣ ಹೊಂದಿದ.

೧೮ನೇ ಶತಮಾನದಲ್ಲಿ ಪ್ರಕಟವಾದ ಕೆಲವೇ ಪ್ರಮುಖ ಕಾದಂಬರಿಗಳಲ್ಲಿ ಇದೊಂದು ಮಾಸ್ಟರ ಪೀಸ್. ೧೭೪೯ರಲ್ಲಿ ಪ್ರಕಟಿಸಲ್ಪಟ್ಟಿತು. ನಾಲ್ಕು ಹಂತದಲ್ಲಿ ಪಡಿಮೂಡಿದ ಕಾದಂಬರಿ, ಮೊದಲ ಭಾಗ ಕಾಲ್ಪನಿಕ ನೆಲೆಯ ಮೂಲಕ ಬೆಳೆದು ಬರುತ್ತದೆ. ಎರಡನೆ ಘಟಕದಲ್ಲಿ ಟಾಮನ ಸಾಮಾನ್ಯ ವಿಚಾರಗಳು, ಮೂರರಲ್ಲಿ ಕಥೆಯಲ್ಲಿಯ ಪಾತ್ರಗಳು ಕಥಾ ಹಂದರದ ಬೆಳವಣಿಗೆ, ನಾಲ್ಕನೇ ಭಾಗದಲ್ಲಿ ಫಿಲ್ಡಿಂಗ್‌ನ ಸ್ತ್ರೀ ಪರ ಕಾಳಜಿ ಹಾಗೂ ದೃಷ್ಟಿಕೋನದಿಂದ ಖುಷಿಕೊಡುತ್ತದೆ.

ಕಾದಂಬರಿ ಪ್ರಕಾರ ವಿಶಾಲವಾದ ವಸ್ತುವೈವಿಧ್ಯತೆ, ಜನಪ್ರಿಯತೆ, ತನ್ನದೇ ಆದ ಸಾಂಸ್ಕೃತಿಕ ಚೌಕಟ್ಟು, ನಿರೂಪಣಾ ಹಿನ್ನೆಲೆಯ ಪ್ರತಿಪಾದನೆಯ ಮುಖಾಂತರ ಇಂದು ಜನಪ್ರಿಯ ಸಾಹಿತ್ಯ ಮಾದರಿಯಾಗಿ ಬೆಳೆದು ಬರುತ್ತಿದೆ. ಯುರೋಪ, ಇಂಡಿಯಾ, ಆಫ್ರಿಕಾ, ವೆಸ್ಟ ಇಂಡೀಸ್, ಲ್ಯಾಟೀನ್ ಅಮೇರಿಕಾ, ಮುಂತಾದ ದೇಶಗಳ ವಾಸ್ತವಿಕ ಬದುಕಿನ ಜೀವನ ರೀತಿಯ ಸಾಂಸ್ಕೃತಿಕ ಬಾಳ್ವೆಯ ಅವಲೋಕನ ಕಾದಂಬರಿಯ ವೈಶಿಷ್ಟ್ಯ. ಆರ್ ಕೆ, ನಾರಾಯಣ್, ರಾಜಾ ರಾವ್, ಅನಿತಾ ದೇಸಾಯಿ, ಕುವೆಂಪು, ಕಾರಂತರು ಬೈರಪ್ಪನವರು, ಡೊಸ್ಟೋವಸ್ಕಿ, ಲಿಯೋ ಟಾಲಸ್ಟಾಯ್, ಚಿನ್ನು ಅಚೀಬೆ, ಹತ್ತು ಹಲವಾರು ಜಾಗತಿಕ ಖ್ಯಾತಿಯ ಕಾದಂಬರಿಕಾರರ ಹೆಸರಿಸಬಹುದು. ಆ ಕಾಲದ ವರ್ಗದ ಜನಜೀವನದ ಸ್ಥಿತ್ಯಂತರದ ಸುತ್ತ ಕಾದಂಬರಿ ಸ್ಥೂಲವಾದ, ಸೂಕ್ತವಾದ ಆ ಕಾಲದ ಚಹರೆಗಳ ಪದರಪದರವಾಗಿ ಕಟ್ಟಲು ಹಾಗೂ ಅದ ಅರಿಯಲು ಸಾಧ್ಯಮಾಡಿಕೊಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಕ್ರಗೀತೆ
Next post ಮಳೆ

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…