Home / ಕಥೆ / ಕಿರು ಕಥೆ

ಕಿರು ಕಥೆ

ಕಲ್ಲು ಮುಳ್ಳಿನ ನಡುವೆ ಒಮ್ಮೆ ಹೀಗೆ ಮಾತುಕತೆ ನಡೆದಿತ್ತು. ಕಲ್ಲು ಬಂಡೆಗೆ ಆತು ಬೆಳದಿದ್ದ ಮುಳ್ಳಿನ ಪೊದೆ ಹೇಳಿತು- “ಏಕೆ ನನ್ನ ಬಗಲಲ್ಲಿ ಇರುವೆ? ನಾನು ನಿನ್ನ ಸನಿಹಕ್ಕೆ ಕರೆಯಲಿಲ್ಲ.” “ನಿನ್ನ ಚೂಪು ಮುಳ್ಳಿನ ಮೂಗು ಯಾರಿಗೂ ಬೇಡ. ನನ್ನ ಹತ್ತ...

ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು. “ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇ...

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉ...

ಶಿಷ್ಯರನೇಕರು, ತಮಗೆ ತೋರಿದ ಕಾಣಿಕೆಯಾಗಿ ಬುಟ್ಟಿ, ಹಣ್ಣು, ಹೂವು, ಚಿನ್ನ, ಬೆಳ್ಳಿ, ಹಣ ಮೊದಲಾದವುಗಳನ್ನು ಗುರುಗಳಿಗೆ ತಂದು ಕೊಡುತ್ತಿದ್ದರು. ಶಿಷ್ಯ ರಾಮನಿಗೆ ಎನೂ ತೋಚಲಿಲ್ಲ. ಸೀದಾ ಗುರುಗಳಲ್ಲಿಗೆ ಬಂದು “ನನಗೆ ಏನು ಕಾಣಿಕೆ ಕೊಡಲು ತ...

ಬಹುದೂರದ ಹೊಲದಲ್ಲಿ ಖಾರದ ಮೆಣಸಿನ ಕಾಯಿಗಳು ಒಂಟಿತನದಲ್ಲಿ ಕೆಂಪಾಗಿ ಬಾಡುತ್ತಿದ್ದವು. ಸಮುದ್ರ ಉಪ್ಪು ಹೆಪ್ಪು ಗಟ್ಟಿ ಉಪ್ಪಿನ ಹರಳಾಗಿ ದಡದಲ್ಲಿ ಸಂಗಾತಿಗಾಗಿ ಕಾಯುತಿತ್ತು. ಗಾಳಿ ಬೀಸಿದಾಗಲೆಲ್ಲಾ ಹುಣಸೆ ಕಾಯಿಗಳು ನೆಲದ ಮೇಲೆ ಬಿದ್ದು ನರಳುತ್ತ...

ಒಂದು ಕೊಳ. ಅದರ ಬದಿ ಒಂದು ಪುಟ್ಟ ಗುಡಿಸಲು. ಅದರಲ್ಲಿ ಬಾತು ಕೋಳಿಗಳನ್ನು ನೋಡಿಕೊಳ್ಳುತ್ತಾ, ಒಬ್ಬ ಹಳ್ಳಿಯ ವೃದ್ದ ವಾಸವಾಗಿದ್ದ. ಅವನಿಗೆ ಸಂಸಾರದಲ್ಲಿ ಸಾವಿರಾರು ತಾಪತ್ರಯಗಳು, ಮನದಲ್ಲಿ ಸಾವಿರಾರು ಬಗೆಯ ತೀರದ ಪ್ರಶ್ನೆಗಳು ತುಂಬಿಕೊಂಡಿತ್ತು....

ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು. “ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ...

ಒಂದು ಮಾವಿನ ತೋಪು, ಮಾವಿನ ಮರದಲ್ಲಿ ಚೂತ ಚಿಗುರಿನೊಂದಿಗೆ ಅನೇಕ ಕೋಗಿಲೆಗಳು ವಾಸವಾಗಿದ್ದವು. ಒಮ್ಮೆ ತೊಪಿನ ಕೋಗಿಲೆಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದವು. ವಸಂತ ಆಗಮನವನ್ನು ಸಾರಿ ನಾವು ಕುಹೂ ಕುಹೂ ಎಂದು ಕೂಗಿ ವಸಂತಮಾಸ ಪೂರ ನಾವು ಹಾಡುತ್...

ಒಬ್ಬ ನಿಷ್ಠಾವಂತ ಸಾಧಕ ಶ್ರಾವಣದ ಭೋರ್ಗರೆವ ಮಳೆಯಲ್ಲಿ ಒಂಟಿ ಕಾಲ ಮೇಲೆ ನಿಂತು ತಪಗೈಯುತ್ತಿದ್ದ. ಧಾರಕಾರ ಮಳೆ ಹುಯ್ಯುತ್ತಿತ್ತು. ಮಳೆಯ ತೀವ್ರತೆ ಚಾವಟಿಯಂತೆ ಥಳಥಳಿಸುತ್ತಿತ್ತು. ಮೇಲೆ ಆಲಿಕಲ್ಲುಗಳು ಉದುರುತ್ತಿದ್ದವು. ಕಾರ್ಮೊಡಗಳು ಒಂದನ್ನೊಂ...

ವನದಲ್ಲಿ ಒಂದು ದುಂಬಿ ಹೂವಿನಿಂದ ಹೂವಿಗೆ ಹೋಗಿ ಬಂಡನ್ನು ಉಂಡು ಅತೃಪ್ತವಾಗಿತ್ತು. ದಿನಕ್ಕೆ ಸಾವಿರಾರು ಹೂಗಳನ್ನು ಹೀರಿಯು ಮತ್ತೆ ಮತ್ತೆ ಅತೃಪ್ತವಾಗಿತ್ತು. ಮಧು ಪಾನಕ್ಕಾಗಿ ಕಾತರಿಸುತ್ತಿತ್ತು. ಒಮ್ಮೆ ಅದು ಒಂದು ಮದ್ಯದ ಅಂಗಡಿ ಮುಂದೆ ಹಾದು ಹ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....