ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು.
“ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ ಹತ್ತಿರಕ್ಕೆ ಬಂದು, “ವಟವಟ” ಎನ್ನುತಿತ್ತು. ನನಗೇನು ಅನುಭವವಾಗಲಿಲ್ಲ, ಅರ್ಥವೂ ಆಗಲಿಲ್ಲ.” ಎಂದ ಶಿಷ್ಯ. ಎರಡನೇಯ ಶಿಷ್ಯಾ! “ನಿನ್ನ ಅನುಭವವೇನು?” ಎಂದರು.
ಅಳಿಲು ಬೇಸರವಿಲ್ಲದೆ ಮರ ಹತ್ತುತ್ತಿತ್ತು, ಇಳಿಯುತ್ತಿತ್ತು. ಏನೋ ಹುಡುಕಿ ಹುಡುಕಿ ಸವಿಯುತಿತ್ತು. ಅದನ್ನು ನೋಡುತ್ತಾ ಇದ್ದೆ” ಎಂದ
“ನಿನ್ನ ಅನುಭವವೇನು?” ಎಂದರು ಮೂರನೇಯ ಶಿಷ್ಯನಿಗೆ.
ದಡದಲ್ಲಿ ಕುಳಿತ ನಾನು ಕೊಳದ ಅಂತರಂಗ, ನೀರ ಮೇಲೆ ಬರೆಯುವ ಲಿಪಿಯನ್ನು ನೋಡುತ್ತಿದ್ದೆ. ಆದರೆ ಅರ್ಥವಿಸಲಾರದೆ ಹೋದೆ”. ಎಂದ
“ಕೊಳದ ಕಪ್ಪೆ ನೀರಿನಲ್ಲಿ ಇದ್ದರು ನಾ ಮುಳಗಲಿಲ್ಲ. ನೆಲದ ಮೇಲೆ ಇದ್ದರು ನಾ ನೆಗದು ಬೀಳಲಿಲ್ಲ” ಎಂದು ವಟಗುಟ್ಟಿ ಸಾರುತ್ತಿತ್ತು. ಇದರ ಮರ್ಮ ತಿಳಿಯಲಿಲ್ಲವೇ?” ಶಿಷ್ಯಾ ಎಂದರು ಮೊದಲ ಶಿಷ್ಯನಿಗೆ.
ಪುಟ್ಟ ಅಳಿಲು ಮರ ಹತ್ತಿ ಇಳಿಯುವ ಕರ್ಮಯೋಗ ಮಾಡಿ ಸತ್ಯದ ಹಣ್ಣು ಹುಡುಕಿ ಸವಿಯುವುದನ್ನು ಕಾಣಲಿಲ್ಲವೇ?” ಎಂದರು ಎರಡನೇಯ ಶಿಷ್ಯನಿಗೆ
ಹರಿವ ಕೂಳ ತನ್ನ ಅಂತರಂಗವನ್ನು ನೀರ ಮೇಲೆ ಸಹಜೀವನದ ಸೂತ್ರಗಳನ್ನು ಬರೆಯುತ್ತಿದೆ. ಅದನ್ನು ನಾವು ಅರ್ಥವಿಸ ಬೇಕಲ್ಲವೇ?” ಎಂದರು ಗುರುಗಳು.
ಗುರುಗಳ ನಿರೀಕ್ಷೆಗೆ ಬಾರದ ಶಿಷ್ಯರು ತಲೆ ತಗ್ಗಿಸಿ ಸತ್ಯವನ್ನು ಅರಿತು ಕೊಂಡರು.
*****

















