ಡಿಪೋದೊಳಗಣ ಕಿಚ್ಚು…

ಡಿಪೋದೊಳಗಣ ಕಿಚ್ಚು…

ಚಿತ್ರ: ವಾಲ್ಡೊಪೆಪರ್‍

ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು.

’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು… ಡೆವಿಲ್ ವರ್ಕ್‌ಶಾಪು…!! ಯಾರಿಗ್ಯಾರಿಲ್ಲ. ಎಲ್ಲನೂ ಮ್ಯಾನೇಜರ್ ಕುತ್ತಿಗೆಗೆ. ಪುಣ್ಯ ಮಾಡಿ ಇಂಥಾ ನೌಕರಿಗೆ ಬ೦ದಿದ್ದೆನೆಂದು’ ಗೊನಗುತ್ತಾ… ಮನೋಜ್ ಪಾಟೀಲರು, ಗೇಟೊಳಕ್ಕೆ ಬಲಗಾಲಿಟ್ಟರು. ಜನ್ರ ಮನವಿ ಪತ್ರ ನೀಡಿದ್ದು ಓದಿ…

‘ಈ ಪತ್ರ ನಮ್ಗೆ ಕೈಪಿಡಿಯಂತಿದೆ. ನಮ್ಮ ಬೆನ್ನು ನಮ್ಗೆ… ತೋರಿಸುತ್ತಿದೆ.’ ಬಂದವ್ರ ಕೈಕೈ ಕುಲುಕಿದರು.

’ಬನ್ರೀ ಚೇಂಬರಿಗೆ… ನಿಮ್ಗೆಲ್ಲಾ ಚಹ ಕುಡ್ಸೇ… ಕಳಿಸ್ಬೇಕು’ ಎಂದು, ಚೇಂಬರಿಗೆ ಕರೆದೊಯ್ದು, ಐದತ್ತು ಚಹ ತರಿಸಿದರು.

’ವೇಳಗೆ ಸರಿಯಾಗಿ, ಬಸ್ಸು ಬಿಡುವ ವ್ವವಸ್ಥೆನ, ಈ ದಿನವೇ ನಾ ಮಾಡುತ್ತೇನೆ. ಸಾರಿಗೆ ಆದಾಯನೂ ಹೆಚ್ಚಿಸುವೆ, ಒ೦ದೇ ಟೈಮಿಗೆ ಐದಾರು ಬಸ್ಸು, ಬಂದು ಹೋಗುವುದ, ತಪ್ಪಿಸುವೆ. ಎಲ್ಲಾ ಬಸ್ಸುಗಳಿಗೆ ಬೋರ್ಡು ಹಾಕ್ಸಿ, ತೊಳೆಸಿ, ಕಸಹೊಡ್ಸಿಸಿ, ಸೀಟುಗಳ ಶುಚಿಮಾಡ್ಸಿ ಕಳಿಸುವೆ. ಸ್ಕೂಲ್ ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸ್ಥಾತಂತ್ರ್ಯ ಹೋರಾಟಗಾರರಿಗೆ, ಪತ್ರಿಕಾ ಪ್ರತಿನಿಧಿಗಳಿಗೆ, ಗೌರವದಿಂದ ಕಾಣಲೂ, ಮೀಸಲು ಆಸನಗಳ ಪ್ರಯಾಣಿಕರಿಗೆ… ಬಿಟ್ಟುಕೊಡಲೂ ನಮ್ಮ ಸಿಬ್ಬಂದಿಗೆ ತಿಳಿಸುವೆ. ನಾನೂ ಬಸ್ಸು ಹತ್ತಿ ಗಮನಿಸುವೆ.’ ಪಾಟೀಲರು ಬೇಗ ಜನ್ರ ಹೃದಯ ಗೆದ್ದರು. ಜನರು ಚಹ ಕುಡಿದು. ಮುಷ್ಕರ ಕೈಬಿಟ್ಟಿರುವುದಾಗಿ ತಿಳಿಸಿದರು. ಪಾಟೀಲರ ಮುಖವರಳಿತು. ನನ್ನ ವಿಜ್ಞಾಪನೆ ಸ್ವಲ್ಲ… ಕೇಳಿ…

’ಪಾಸು ತೋರ್ಸಿ ಎಂದು… ನಿರ್ವಾಹಕರು ಕೇಳಿದಾಗ ರೇಗಬೇಡಿ, ಸೀಟು ಹರೀಬೇಡಿ, ನೆಲಗಡ್ಲೆ, ಹಸಿಗಡ್ಲೆ, ಕಾಗ್ದ, ಬಸ್ಸಿನಲ್ಲಿ ಚೆಲ್ಲಬೇಡಿ. ಬಸ್ಸಿನ ಹೊರ್‍ಗೆ ಒಳ್ಗೆ ಘೋಷಣೆಗಳನ್ನು ಪೇಂಟನಿಂದ ಬರೀಬೇಡ್ರಿ. ಬಸ್ಸಿಗೆ ಕಲ್ಲು ಒಗೀಬೇಡ್ರಿ… ಬೆಂಕಿ ಇಡಬೇಡ್ರೀ. ಮುಷ್ಕರಗಳಿಗೆ ಬಸ್ಸು ನಿಲ್ಸಬೇಡ್ರೀ. ಈ ಬಸ್ಸುಗಳೆಲ್ಲ ನಿಮ್ಮವು. ನಮ್ಗೆ ನೀವೇ ದೇವ್ರು, ಸಹಕರಿಸಿ’ ಎಂದರು.

ಪಾಟೀಲರು ಪ್ರತಿ ನಮಸ್ಕರಿಸಿ, ಗೇಟ್‌ವರೆಗೂ ಬಂದು, ಜನ್ರನ್ನ ಬಿಟ್ಟು… ಒಳನಡೆದರು.

ಡಿಪೋದ ಬಗ್ಗೆ, ಮನೋಜ್ ಪಾಟೀಲರ ಬಗ್ಗೆ… ಜನರಿಗೆ ಸಣ್ದಾಗಿ… ಅಭಿಮಾನ ಮೂಡಿತು. ಡಿಪೋ ಸುಧಾರಿಸುವವರಂತೆ ಕಂಡರು. ಇದೇ ರೀತಿ, ಸಂಸ್ಥೆಯವರು ಜನ್ರೊಂದಿಗೆ ಸೌಜನ್ಯದಿಂದ, ನಡೆದುಕೊಂಡ್ರೆ.. ಸಂಸ್ಥೆಗೂ ಒಳ್ಳೇ ಹೆಸರು, ಎಂದೊಬ್ರು, ’ಯಾರೋ ಹೊಸಬ, ಹೊಸದಾಗಿ ಯಲ್ಲರು ಹೀಗೇ ಸಿನ್ಸಿಯರ್’ ಎಂದು… ಕೆಲವರು ಆಡಿಕೊಂಡರು.

ಇತ್ತ ಎಲ್ಲಾ ಸಿಬ್ಬಂದಿನ, ಪಾಟೀಲರು ಚೇಂಬರಿಗೆ ಕರೆದು, ಜನ್ರು ಈಗ ಮನವಿ ಸಲ್ಲಿಸಿದ್ದನ್ನು ಓದಿದರು. ಸುಧಾರಣೆಗೆ ಪ್ರಯತ್ನಿಸುವಂತೆ ತಿಳಿಸಿದರು.

’ಸರ್… ಸುಧಾರಣೆ ಎರಡೂ ಕಡೆ ಆಗಬೇಕು. ನಮ್ಮನ್ನು, ಬಸ್ಸನ್ನು ಕಂಡ್ರೆ ಈ ಜನ್ರು ಯಾಕೆ ಹಾವು ಕಂಡಂಗೆ ಮಾಡ್ತಾರೆ? ಅದೇ ಖಾಸಗಿ ಬಸುಗಳಲ್ಲಿ, ಇದೇ ಜನ್ರು ಯಾಕೆ, ತೆಪ್ತಗಿರ್ತಾರೆ?’ ಕಂಡಕ್ಫರ್ ಸೋಮಣ್ಣ ಪಶ್ನಿಸಿದ. ’ನಮ್ಮಿಂದ ಜನ್ರು, ಬಹಳಷ್ಟು ನಿರೀಕ್ಷಿಸುತ್ತಿದ್ದಾರೆ. ನಮ್ಮ ಸಣ್ಣ ತಪ್ಪು ದೊಡ್ಡವೇ. ಅದ್ಕೇ ಹೀಗೆ ವರ್ತಿಸುವರೆಂದು’ ಮ್ಯಾನೇಜರ್ ಸಂತೈಸಿದರು. ಸಿಬ್ಬಂದಿ ತೃಪ್ತಿಯ ನಗೆ ಚೆಲ್ಲಿದ್ರು.

’ಮೇಲಿಂದ್ಮೇಲೆ ಬಸ್ಸುಗಳು ಡಿಪೋಕ್ಕೆ ಬರುವುದು ಬೇಡ. ಸಣ್ಣ ರಿಪೇರಿಗಳಾದ ಕಿ೦ಗ್‌ಪಿನ್‌ಡಗ್… ಟೈರಾ ಪಂಚೇರ್, ಆಯಿಲ್ ಸೀಲು, ಟೂಲ್ಸ್, ಪ್ಯಾನ್ ಬೆಲ್ಟ್‌, ಯುಕ್ಲಾಕ್ಲಾಂಪ್ ರಿಪೇರಿ, ಆಯಿಲ್ ಪಾನೀ, ಗ್ರೀಸಿಂಗ್, ಡೈಲೀ, ವೀಕ್ಲೀ ಡಾಕಿಂಗ್… ಇದು ಕಷ್ಟವೇ?? ಸಿಬ್ಬಂದಿ ಕೊರತೆ ಮುಂದಿಟ್ರೆ ಸಮಸ್ಯೆ ತೀರದು. ಮನೋಬಲದ ಕೊರತೆ… ನನ್ಗೆ ಯೆದ್ದು… ಕಾಣುತ್ತಿದೆ’ ಪಾಟೀಲರು ಗುಡುಗಿದ್ರು, ಸಿಬ್ಬಂದಿ ತಬ್ಬಿಬ್ಬಾದ್ರು.

’ಹೊಸಬ್ರಂಗೆ ಹಳಬರೂ ಬಸ್ಸಿಗೆ… ಡೀಸೆಲ್ ಹಾಕ್ಸಿ, ವಾಶಿಂಗ್ ಮಾಡ್ಸಿ, ಕಸ ಹೊಡ್ಸಿಸಿ, ರ್‍ಯಾಂಪ್ಗೆ ಬಿಟ್ಟು… ಚೆಕಪ್ ಮಾಡ್ಸಿ, ಗೇಟ್ಗೆ ಲಾಗ್‌ಶಿಟ್‌ನ್ನು … ಕೊಟ್ಟು ಹೋದ್ರೆ. ಡಿಪೋ ಪ್ರಗತಿ ದುಪ್ಪಟ್ಟಾಗುವುದು. ಆದ್ರೆ ಬಸ್ಸನ್ನು ಗೇಟಿನಲ್ಲಿ ಬಿಟ್ಟು ಲಾಗ್ ಶೀಟ್‌ನ್ನು ಅಲ್ಲೇ ಒಗೆಯುತ್ತಿರುವರೆಂದೂ… ವೆಹಿಕಲ್ ಯಗ್ಜಾಮಿನರ್… ತೆಲಂಗ ಸಂಕಟ ತೋಡಿಕೊಂಡ್ರು. ಹೊಸಬ್ರು ಮಾಡ್ದೇನು? ಹಳಬ್ರಿಗೆ ಕಷ್ಟವೇನು? ಸಂಸ್ಥೆ ಹಳಬ್ರುಗೇ ಜಾಸ್ತಿ ಪಗಾರ ನೀಡುತ್ತಿದೆಯಲ್ಲಾ?’ ಮನೋಜ್ ಪಾಟೀಲರು, ಹಳಬ್ರ ಮುಖ ನೋಡಿ ಪ್ರಶ್ನಿಸಿದರು. ಆಕ್ಷಣ ಬಿಸಿ ಏರಿತು. ಸದ್ದು ಗದ್ದಲ ಅಶಿಸ್ತು ಪ್ರದರ್ಶನಗೊಂಡಿತು. ಯೂನಿಯನ್ ಲೀಡರ್ ಶಂಕರಪ್ಪ… ಎದ್ದು ನಿ೦ತು ’ಸಾರ್… ಈ ಡಿಪೋ ರಗಳೆ ನಿಮ್ಗೆ ಅರ್ಥವಾಗಲ್ಲ. ಹೊಸಬ್ರುಗೆ ಮನೆ, ಮಠ, ಸ೦ಸಾರವಿಲ್ಲ. ನೌಕರಿಬಿಟ್ರೆ ಬೇರಿಲ್ಲ. ಹಗಲು ರಾತ್ರಿ ಕೆಲ್ಸಾ ಕೆಲ್ಸಾ. ಅಂತಾರೆ. ನಮ್ಗೆ ಮನೆಗೆಲ್ಸ ಬೇರೆ, ಸೈಡ್ ಬಿಜ್‌ನೆಸ್‌ಗಳಿವೆ. ಪುಲ್ ಡ್ಯೂಟಿ ಮುಗ್ಸಿಕೊಂಡು ಡಿಪೋದಲ್ಲಿ ಈ ಕೆಲ್ಸ ಆಗಲ್ಲ.’ ಕಟ್ಗೆ ಮುರಿದ ಹಾಗೆ ಮಾತಾಡಿದ

’ಬಸ್ಸಿನಿ೦ದ್ಲೇ ಉಣ್ಣೋದು, ಇದು ಲಕ್ಷೀ. ಹೆತ್ತ ತಾಯಿ, ಎಲ್ಲರ ಶಾಲಾ… ಕಾಲೇಜಿಗೆ ಕರೆದೊಯ್ದು… ಕೋಟಿ ಜನ್ರ ಉದ್ಧರಿಸಿದೆ. ಈ ಬಸ್ಸಿಗಾಗಿ ಒಂದು ಘಳಿಗೆ ವ್ಯಯಿಸಲು ಕುಂಟು ನೆಪ ಬೇಡ… ಸಾರೀ… ಇದ್ಯಾರಿಗೆ ಶೋಭೆಯಲ್ಲ. ಡಿಪೋಕ್ಕೆ ಹಳಬರು ಬೇಡೆ೦ದ್ರೆ… ಎಲ್ಲಿಗೆ ಹೋಗುವಿರಿ? ದೂರದ ಡಿಪೋಕ್ಕೆ ವರ್ಗವಾದ್ರೆ ನಿಮಗೆಷ್ಟು ತೊಂದರೆ? ಹೆಚ್ಚು ದುಡಿಯಿರಿ, ಕೇಡಿಲ್ಲ, ನಿಮ್ಗೆ ನೀವೇ ಮಾದರಿಯಾಗಿ’ ಪಾಟೀಲರು, ತಂತಿ ಮೇಲೆ, ನಡೆದಂತೆ ನುಡಿದರು. ಎಲ್ರು ಎದ್ದೆದ್ದು ಹೋದ್ರು,

’ನನ್ನ ಮಗನ ವಯಸಿಲ್ಲ ಎಷ್ಟು ಮಾತು? ನನ್ನ ಸರ್ವಿಸ್ ಅರ್ಧದಷ್ಟು ಮಾನೇಜರ್‌ದ್ದು ವಯಸ್ಸಾಗಿಲ್ಲ. ಎಷ್ಟೊಂದು ಕೆಲ್ಸ ಹೇಳ್ತಾನೆ… ’. ’ಎಲ್ರುಗೆ ಜೋರಲಿ ಬುದ್ಧಿ ಹೇಳಾಕೆ ಬಂದಾನೆ. ಏನೋ… ಗತಿ ಕಾಣಿಸ್ಬೇಕು’ ಎಂದು, ಮೂರು ಜನ, ಪಾಟೀಲರ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದರು… ಆ ಮೂವರ ಹೆಸರು ಶ೦ಕರಪ್ಪ, ಈರಣ್ಣ, ಸಿದ್ದಪ್ಪ… ಅಂತ ತಿಳಿದು, ಕೈ ಮಾಡಿ ಕರೆದು, ತಿಳಿ ’…ಡಿಪೋದೊಳ್ಗಣ ಕಿಚ್ಚು, ಡಿಪೋವನ್ನಲ್ಲದೆ, ಡ್ರೈವರ್ಸ್, ಮ್ಯಾಕ್ಯಾನಿಕ್ಸ್ ಎಲ್ಲರನ್ನು ಸುಡುವುದಲ್ದೆ, ಪ್ರಯಾಣಿಕರಿಗೂ… ಅದ್ರಾ ಕಾವು ತಗುಲುವುದೆಂದು…’ ಹೇಳಬೇಕೆಂದು… ಎದ್ದು, ನಿಂತು… ಯಾಕೋ ನಕ್ಕು, ಪಾಟೀಲರು ಕೆಲಸದಲ್ಲಿ ಮಗ್ನರಾದರು.

ತಿ೦ಗಳಾಯಿತು, ಬೆಳಿಗ್ಗೆನೇ ಜನರನ್ನು ಡಿಪೋದಲ್ಲಿ ಕಂಡು. ಮನೋಜ್ ಪಾಟೀಲರು, ದಂಗು ಬಡಿದರು. ಏನೋ ಅವಘಡವಾಗಿದೆಯೆ೦ದು ಡಿಪೋಕ್ಕೆ ಬಲಗಾಲಿಟ್ಜರು. ಅದೇ ಜನ್ರ, ಅವೇ ನಗುಮುಖಗಳು. ಬಂದವರೆ ಕುಶಲ ಕೇಳಿದರು.

’ನಿಮ್ಗೆ ಧನ್ಯವಾದ ಹೇಳಲು ಬಂದೀವಿ. ತಿಂಗಳಿಂದ ಡಿಪೋದ ಸುಧಾರಣೆ ಅದ್ಭುತ. ಈ ಹಿಂದೆ, ತಲೆ ರೋಸಿ, ಹತ್ತಾರು ಸಲ ಡಿಪೋಗೇಟ್ ಹಾಕಿಸಿ, ಬೀಗ ಜಡಿದಿದ್ದುಂಟು! ಈ ಡಿಪೊ ಹುಟ್ಟದಾಗಿಂದ ನಾಗೂರು, ಸಾಲಿ, ಬಾಳೇಸರ ಬಿದ್ರಹಳ್ಳಿ, ಅಗಸನಕಟ್ಟೆ… ಗಳಿಗೆ ವೇಳೆಗೆ ಬಸ್ಸು ಓಡಾಡಿದ್ದಿಲ್ಲ. ಸಿಬ್ಬಂದಿ ವರ್ತನೆ ತುಂಬಾ ಪರಿವರ್ತನೆ ಕಂಡು… ಜನ್ರು ಮೂಕವಿಸ್ಮಿತರಾಗಿದ್ದಾರೆ. ಈ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ, ನಿಮ್ಮನ್ನು ಅಭಿನಂದಿಸಿ, ’ಪೌರಸನ್ಮಾನ’ ಮಾಡಲು, ಸಭೆ ತೀರ್ಮಾನಿಸಿದೆ. ನೀವು ಬರಬೇಕೆಂದು ವಿನಂತಿಸಿದರು.

ಸಿಬ್ಬಂದಿಯ ಕ್ರಮ, ಸೌಜನ್ಯ, ನಡೆ,. ನುಡಿ ತೋರ್ಸಿದ್ದರೆ… ಜನ್ರು ಸಂಸ್ಥೆಯ ಸೇವೆಯನ್ನು ಗುರ್ತಿಸಿದೆ. ಆನಂದಭಾಷ್ಪದೊಂದಿಗೆ. ’ನನ್ಗಿಂತ ಡಿಪೋದ ಮೂವರಿಗೆ ಸನ್ಮಾನಿಸಿದ್ರೆ. ಇಡೀ ಡಿಪೋನೇ ಸನ್ಮಾನಿಸಿದಂತೆ…’ ಪಾಟೀಲರು ಸಲಹೆ ಮುಂದಿಟ್ಟರು.

’ಹಾಗಾದ್ರೆ ಅವರ ಹೆಸರು ಕೊಡಿ’ ಎಂದು ಜನರೆಂದರು. ಪಾಟೀಲರು ಶಂಕರಪ್ಪ, ಈರಣ್ಣ, ಸಿದ್ಧಪ್ಪ ಇವ್ರ ಹೆಸರು, ಶಿಫಾರಸ್ಸು ಪತ್ರವನ್ನಿತ್ರರು.

ಮನೋಜ್ ಪಾಟೀಲರ ದೊಡ್ಡತನ ಕಾಡ್ದಿಚ್ಚಿನಂತೆ ಹರಡಿತು.

ಅಂದು… ರಾಜ್ಯೋತ್ಸವ. ಪಟ್ಟಣದಲ್ಲಿ ಸಮಾರಂಭ. ಎಲ್ಲಾ ಕಡೆ ಸನ್ಮಾನಿತರ ಭಾವಚಿತ್ರಗಳು… ಅಚ್ಚಾದವು. ಸಂಸ್ಥೆಯ ಪತ್ರಿಕೆಗಳಲ್ಲಿ ’ಹೂವು ತಂದವರೆಂದು’ ಈ ಮೂವರ ಚಿತ್ರ ಪ್ರಕಟಗೊಂಡಿತು. ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರರಾದರು. ತಮ್ಮ ನೆರೆಹೊರೆ ಪಶಂಸೆಯಿಂದಾ… ಕೊಂಡಾಡಿದರು. ಮ್ಯಾನೇಜರ್‌ಗೆ ತೊಂದರೆಕೊಟ್ಟು ಕಣ್ಣಿಲಿ ನೋಡಬೇಕೆಂಬ, ದುರಾಲೋಚನೆ ಕೈ ಬಿಟ್ಟು, ನಾಚಿ ನೀರಾದರು. ಗುಣಗಳನ್ನು ಗುರ್ತಿಸಿ, ಸನ್ಮಾನ್ಕಕ್ಕೆ ಶಿಫಾರಸ್ಸು ಮಾಡಿದ ಮನೋಜ್ ಪಾಟೀಲರನ್ನು ಈ ಮೂವರು ಕಾಲುಕಟ್ಠಿ… ’ತಮ್ಮ ಅಸಡ್ಡೆ ವರ್ತನೆ, ಲಘುಮಾತುಗಳನ್ನು, ಮೈಗಳ್ಳತನವನ್ನು ಮನ್ನಿಸಬೇಕೆಂದು ಡಿಪೋದಲ್ಲಿ ಬೇಡಿಕೊಂಡ ದೃಶ್ಯ ಎಲ್ಲರಿಗೆ ಗುಣಪಾಠವಾಯಿತು.

ಮನೋಜ್ ಪಾಟೀಲರು ಮೂವರನ್ನು ತಬ್ಬಿಕೊಂಡು- “ದ್ವೇಷ ಬಿಡಿ. ಸ೦ಸ್ಥೆ ಬೆಳ್ಸಿ ದುಡಿದು ಗಳ್ಸಿ ಸಂಸ್ಥೆ ಉಳ್ಸಿ’ ಎಂದು. ತಮ್ಮ ಕುರ್ಚಿಗೂ, ಪದವಿಗೂ. ಮಿಗಿಲೆನಿಸಿದ್ರು.


Previous post ಪಶ್ಚಾತ್ತಾಪ
Next post ಕನಸು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…