Home / ಕಥೆ / ಸಣ್ಣ ಕಥೆ / ಮುದಿ ಕಪ್ಪೆ

ಮುದಿ ಕಪ್ಪೆ

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ.

ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿದ. ಕಪ್ಪೆ ಕದಲಲಿಲ್ಲ. ಅವನ ಹೆಂಡತಿಯೇ ಅವನಿಗೆ ಹೆದರುವದಿಲ್ಲ. ಅಂದ ಮೇಲೆ ಕಪ್ಪೆ ಬೆದರುತ್ತದೆಯೇ? ಕಪ್ಪೆಗೇ ಹೊಡೆಯಲು ಅವನ ಮನಸ್ಸಾಗಲಿಲ್ಲ. ಈ ಕಪ್ಪೆಯನ್ನೋಡಿಸಲು ಹಿಂದೆ ಮುಂದೆ ನೋಡುವವರು ಯುದ್ಧಗಿದ್ದಕ್ಕೆ ಹೋದರೆ….” ಎಂದು ಉಮೆ ಚುಚ್ಚಿದಳು. ತನಗೆ ಕಪ್ಪೆಯೆನ್ನೊಡಿಸುವ ಧೈರವೂ ಇಲ್ಲವೆಂದು ಮಡದಿ ತೀರ್ಮಾನಿಸಿ ಕೊಂಡಳಲ್ಲ ಎಂದು ಉಮೇಶನಿಗೆ ನಾಚಿಕೆಯಾಯಿತು. ಆದರೆ ಅವನ ಸಂಕಟ ಅವಳಿಗೆಲ್ಲಿ ತಿಳಿಯಬೇಕು? ಕುರುಕ್ಷೇತ್ರದಲ್ಲಿ ಬಿಲ್ಲು ಬಾಣ ಬಿಸಾಡಿ ನಿಂತ ಅರ್ಜುನನಂತಾಗಿದ್ದ ಉಮೇಶ ಅವನ ತಲೆತುಂಬ ವಿಚಾರ.

ಪಾಪ, ಈ ಕಪ್ಪೆ ಕಚ್ಚುವದಿಲ್ಲ. ಏನೂ ಕದ್ದು ತಿನ್ನುವದಿಲ್ಲಸುಮ್ಮನೆ ನೀರಿನ ತಂಪಿಗಾಗಿ ಕೊಡದ ಬಳಿಗೆ ಕುಳಿತಿದೆ. ಹೊಡೆದರೆ
ಸಾಯುವದು. ನನ್ನ ಮೇಲೆ ತಿರುಗಿ ಬೀಳುವ ಪಾಶ್ವೀವೃತ್ತಿಯದಲ್ಲ. ಇಂಥ ಪ್ರಾಣಿಯನ್ನು ಓಡಿಸಬೇಕೇ? ಏಕೆ? ನನ್ನ ಮನೆಯೊಳಗೆ ಬಂದಿತೆಂದೇ? ಹೆಂಡತಿ ಹೇಳುತ್ತಾಳೆಂದೇ? ನನಗೆ ಈ ಕಪ್ಪೆಯನ್ನು ಹೊಡೆಯಲು ಯಾವ ಅಧಿಕಾರವಿದೆ? ನನ್ನ ಮನೆಯೊಳಗೆ ಬಂದಿತೆಂದು…ನಿಜ. ಆದರೆ ಈ ಮನೆ ನನ್ನದು ಎಷ್ಟರ ಮಟ್ಟಿಗೆ? ಬಾಡಿಗೆ ಕೊಟ್ಟು ಬಿಟ್ಟರೆ ಮನೆ ನನ್ನದಾಗಲಿಲ್ಲ. ನಾಳೆ ಮಾಲಿಕನು ಬಂದು ಹೊರಡಿರಿ ಎಂದರೆ ನಾನು- ನಾವು- ಕಪ್ಪೆಯಂತೆ ಕುಳಿತುಕೊಳ್ಳುತ್ತೇವೆ! ಇನ್ನು ನಾನು…. ಎಂದರೆ ಹತ್ತುವರುಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಎಲ್ಲಿಯೋ ಹೇಗೋ ದಿನ ಕಳೆಯುತ್ತಿದ್ದಾಗ ಜ್ವರ ಬಂದು ನರಳುತ್ತಿದ್ದಾಗ ಈ ಕಪ್ಪೆಯಂತೆ ಒಂದು ಮೂಲೆಯಲ್ಲಿ ಬಿದ್ದಿದ್ದಾಗ ಯಾರೋ ತಾಯಿಯಂತೆ ಆರೈಕೆ ಮಾಡಿ ಬದುಕಿಸದಿದ್ದರೆ….

“ಬೇಗ ಓಡಿಸಿ ಅಂದ್ರೆ” ಎಂದು ಉಮೆಯು ತನ್ನ ‘ಗೀತೆ’ಯನ್ನು ನುಡಿದಳು. ಉಮೇಶನು ತನ್ನ ಹತ್ತರ ಸಾಧ್ಯವಿಲ್ಲವೆಂದು ಸೌದೆಯನ್ನು ಬಿಸಾಡಿ ಕೋಣೆಯೊಳಗೆ ನಡೆದನು. ಅವಳು ನಕ್ಕು, ತನ್ನ ಅತ್ತೆಯನ್ನು ಕರೆದು ಹೇಳಿ ಚೇಷ್ಟೆ ಮಾಡಿದಳು. “ಕಲಿತವರೆಲ್ಲಾ ಹೀಗೇ, ಪುಕ್ಕರು. ಕಪ್ಪೆ ಓಡಿಸಲಿಕ್ಕೂ ಬರುವದಿಲ್ಲ!” ಎಂದು ಅತ್ತೆ ಸೊಸೆಯರಿಬ್ಬರೂ ಕೂಡಿ ಟೀಕಿಸಿದರು. ಉಮೇಶ ಕೇಳಿಯೂ ಕೇಳದವನಂತೆ ಮಲಗಿದ.

ಹೊರಗೆ ಮಲಗಿದ ಆಳನ್ನು ಕರೆದು ಒಂದೇ ನಿಮಿಷದೊಳಗೆ ಓಡಿಸಿ ಬಂದು ಗಂಡನಿಗೆ “ನಿಮ್ಮ ಹತ್ತಿರ ಆಗದಿದ್ದರೇನು? ಸುಬ್ಬ ಒಂದೇ ಪೆಟ್ಟಿಗೆ ಓಡಿಸಿಬಿಟ್ಟ, ಓಹೋ!” ಅಂದಳು ಉಮೆ.

ಉಮೇಶನಿಗೆ ನಿದ್ದೆಯೇ ಹತ್ತಲಿಲ್ಲ. ತಾನು ಹೇಡಿಯೇ? ಎಂದು ತನ್ನನ್ನೇ ಕೇಳಿಕೊಂಡ. ಹೇಡಿಯಾಗಿದ್ದರೆ ದಾರಿದ್ರದ ದಿನಗಳನ್ನು ದಾಟಿ ಊರೂರಲೆದು ಕಲಿಯಲು ಸಮರ್ಥನಾಗುತ್ತಿದ್ದಿಲ್ಲ. ಆದರೆ ಸಾಹಸಕ್ಕೂ ಕಪ್ಪೆಯನ್ನು ಹೊಡೆದೋಡಿಸುವದಕ್ಕೂ ಯಾವ ಸಂಬಂಧ? ಈ ಕೆಲಸದಲ್ಲಿ ಹೇಡಿಯೇ ಆದೆ. ಆಗಲಿ, ಅಡ್ಡಿಯಿಲ್ಲ. ಆದರೆ ಹೆಂಡತಿಯೂ ಚೇಷ್ಟೆ ಮಾಡುವಂತಾಯಿತಲ್ಲ.

ಬದಿಗೆ ಉಮೆಯು ನಿದ್ದೆ ಹೋಗಿದ್ದಳು. ಉಮೇಶನು ಎದ್ದು ಆ ಕಪ್ಪೆಯನ್ನು ಹೊರಗೆ ಹಾಕಿ ಮುಚ್ಚಿದ ಬಾಗಿಲನ್ನೇ ತೆರೆದ. ಬೇಟ್ರಿ ಹಿಡಿದು ನೋಡಿದ. ಅಲ್ಲೇ ಇತ್ತು ಆ ಮುದಿಕಪ್ಪೆ! ಅದು ಉಬ್ಬಸಬಿಡುವದೂ ಅವನಿಗೆ ಕಂಡಿತು. ಅದಕ್ಕೆ ಮಾತಾಡಲು ಬರುತ್ತಿದ್ದರೆ ಎನೆಲ್ಲ ಹೇಳುತ್ತಿತ್ತೋ! ಉಮೇಶ ಎನೇನು ಹೇಳುತ್ತಿದ್ದನೋ! ಒಂದೆರಡು ನಿಮಿಷ ಅವನು ಏನೋ ವಿಚಾರಿಸಿದ. ಮೂರು ನಾಲ್ಕು ಸಲ ಬೇಟ್ರಿಯ ಬೆಳಕು ಬಿಟ್ಟು ನೋಡಿದ. ಕೊನೆಗೆ ಒಂದು ತಂಬಿಗೆ ನೀರು ತಂದು ಅದರ ಬಳಿಗೆ ಸುರಿದು ಬಾಗಿಲ ಹಾಕಿಕೊಂಡು ಬಂದ.

“ಎಲ್ಲಿಗೆ ಹೋಗಿದ್ದಿರಿ?” ಉಮೆಗೆ ಎಚ್ಚರವಾಗಿಬಿಟ್ಟಿತ್ತು!

“ನಿತ್ಯದಂತೆ ಹೊರಗೆ ಹೋಗಿದ್ದೆ” ಎಂದು ಮಲಗಿದ. ಅವನಿಗೆ ಹಿಂದಿನ ದಾರಿದ್ರ್ಯವೆಲ್ಲ ನೆನಪಾಗಿ ಕನಸಿನಲ್ಲಿಯೂ ತೋರಿಸಿಕೊಂಡವು. ಹೀಗೆ ಸ್ಮೃತಿ ಪಟಲವನ್ನು ತಟ್ಟಿದವರು ಯಾರು? ಮುದಿಕಪ್ಪೆಯೋ ಮಡದಿಯೋ ಎಂಬುದು ಮಾತ್ರ ಅವನಿಗೆ ತಿಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...