Home / V G Bhatta

Browsing Tag: V G Bhatta

ಎಣ್ಣೆಯ ಹಚ್ಚಲು ಕನ್ನಡಿಯಂತೇ ಹೊಳೆ ಹೊಳೆಯುವುದಜ್ಜನ ಬೋಳು ಅಪ್ಪಾ, ಗೋಡೆಯ ಮೇಲಿನ ಕನ್ನಡಿ ಯಾರಜ್ಜನ ಬೋಳಿನ ಹೋಳು? ಅಪ್ಪಾ, ನೀ ಹೇಳು *****...

ಇತ್ತಲಾಗಿ ನನ್ನಣ್ಣನ ಬೆನ್ನು ಬಹಳ ಬಾಗಿದೆ ಪಾಪ, ತುಂಬು ಹರೆಯದಲ್ಲೇ ಬಿಲ್ಲಿನಂತೆ ಆಗಿದೆ ನಮಗೆ ಅದರ ಕಾರಣವೂ ಅಲ್ಪ ಸ್ವಲ್ಪ ಗೊತ್ತಿದೆ: ಗುರುಹಿರಿಯರ ಹರಕೆಯ ಅದು ಮಣಗಟ್ಟಲೆ ಹೊತ್ತಿದೆ! *****...

ಗುಲಗಂಜೀ ಗುಲಗಂಜೀ ಕೆಂಪು ಗುಲಗಂಜೀ ಬೇಕೇನು ಪಂಜಿ ಬಿಳಿ ಬಿಳೀ ಪಂಜಿ? ಗುಲಗಂಜೀ ಗುಲಗಂಜೀ ತಂಪು ಗುಲಗಂಜೀ ಬೇಕೇನು ಗಂಜಿ ಬಿಸಿ ಬಿಸೀ ಗಂಜಿ? ಜೋತಾಡುತಿದ್ದ ಗುಲಗಂಜಿ ಮಾತಾಡಲಿಲ್ಲ ಅಂಜಿ! *****...

ಒಮ್ಮೆ ಶ್ರೀರಾಮಚಂದ್ರನು ಸಿಂಹಾಸನಾರೂಢನಾಗಿರಲು ಅವನ ಸೇವಕರು ಒಬ್ಬನನ್ನು ಹಿಡಿದು ತಂದೊಪ್ಪಿಸಿ ಬಿನ್ನವಿಸಿದರು. “ಪ್ರಭೂ, ಈ ಪ್ರಾಣಿಯು ಒಂದು ಮರಕ್ಕೆ ಹಗ್ಗ ಕಟ್ಟಿ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಕಂಡು...

ಒಂಟಿಯಾಗಿಯೆ ನೀನು ದಿನ ದಿನ ಒಂದೆ ದಿಕ್ಕಿಗೆ ಮೂಡುವೆ ಒಂದೆ ದಿಕ್ಕಿಗೆ ಮುಳುಗಿ ಬಾನವ ಕೆಂಪ ಕೆಂಪಗೆ ಮಾಡುವೆ ಒಮ್ಮೆಯಾದರು ನಮ್ಮ ಹಿತ್ತಲ ತುದಿಗೆ ಸೂರ್‍ಯನೆ ಮೂಡಿ ಬಾ ಒಮ್ಮೆಯಾದರು ನಿನ್ನ ಬಳಗದ ಚಂದ್ರ ಚುಕ್ಕೆಯ ಕೂಡಿ ಬಾ ಒಮ್ಮೆಯಾದರು ನಮ್ಮ ತೋಟ...

ಸೀತಾದೇವಿಗೆ ಲವಕುಶರನಂತರ ಮಕ್ಕಳಾಗಲೇ ಇಲ್ಲವೆ? ಪುರಾಣದಲ್ಲಿ ಅವಳಿಗೆ ತದನಂತರ ಪತಿಯ ಸಮಾಗಮ ಲಭಿಸಲಿಲ್ಲವೆಂದೇನೋ ಹೇಳಿದೆ. ನನ್ನ ಕತೆ ಮಾತ್ರ ಹೀಗಿದೆ. “ಹಿಂದಕ್ಕೆ ನಾವು ವನವಾಸದಲ್ಲಿದ್ದಾಗ ನಮ್ಮ ಕುಟೀರದ ಎದುರಿಗೆ ಒಂದು ಮಲ್ಲಿಗೆ ಬಳ್ಳಿಯ...

ಇದ್ದಿತು ಕತ್ತೆಯ ಬೆನ್ನಿನ ಮೇಲೆ ಕಲ್ಲಿನ ಭಾರವು ಆರು ಮಣ ಕರಿಯ ಕಲ್ಲುಗಳ ಭಾರದ ತುದಿಗೆ ಕುಳಿತಿತು ಸುಮ್ಮನೆ ಒಂದುನೊಣ ಏರನು ಹತ್ತುವುದಾಗದೆ ಕತ್ತೆ ಅಂದಿತು “ಆಯ್ಯೋ ಅಪ್ಪಾ ಸತ್ತೆ ಬದುಕಿಸು ಹೇಗಾದರೂ ನನ್ನ” ತನಗೇ ಕತ್ತೆಯು ಹೇಳಿತ...

ರಾಮಚಂದ್ರದೇವರ ಆಳಿಕೆಯಲ್ಲಿ ಗುಪ್ತಚಾರ ದಲವು ಭದ್ರವಾಗಿತ್ತೆಂದು ಸೀತಾ ಪರಿತ್ಯಾಗದ ಕಾರಣದಿಂದ ಗೊತ್ತಾಗುತ್ತದೆ. ಒಂದಿರುಳು ಒಬ್ಬ ಗುಪ್ತಚಾರನು ಒಂದು ಬೀದಿಯಲ್ಲಿ ನಡೆದಿದ್ದನು. ನಿಸರ್ಗದ ಕರೆಗೆ ಓಗೊಡಲು ಹೊರಗೆ ಬಂದಿದ್ದ ಒಬ್ಬ ನನ್ನಂಥ ಸಭ್ಯಗೃಹಸ...

ಹೆಂಗಸರು ಎಷ್ಟೇ ಒಳ್ಳೆಯವರಿದ್ದರೂ ಕೆಲವು ವಿಷಯಗಳು ನಾಲಿಗೆಯ ಮೇಲೆ ನಲಿಯತೊಡಗಿದವೆಂದರೆ ಕೊಂಚ ಮಟ್ಟಿಗಾದರೂ ಅವರು ಚಂಡಿ-ಚಾಮುಂಡಿಯರಾಗುತ್ತಾರೆ. ಪಂಚಕನ್ಯೆಯರಲ್ಲಿ ಒಬ್ಬಳೆಂದು ಖ್ಯಾತಿಪಡೆದ ಸೀತಾದೇವಿಗೂ ಯಾವ ಕವಿಯಿಂದಲೂ ಹೊಗಳಿಸಿಕೊಳ್ಳದ (ಲಕ್ಷ್...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...