ಸಾಬಿ ಗುಳುಮ್ಮನೆ ನುಂಗಿದನೊಮ್ಮೆ
ತಾಜಾ ಕೋಳಿಯ ಮೊಟ್ಟೆಯನು
ಸೇರಿತು ಕೋಳಿಯ ಮೊಟ್ಟೆಯು ಸಾಬಿಯ
ಗುಡಾಣದಂತಹ ಹೊಟ್ಟೆಯನು
ಹೊಟ್ಟೆಯ ಒಳಗಿನ ಮೊಟ್ಟೆಯ ಕೋಳಿ
ಮಲಗಿದ ಸಾಬಿಯ ಹೊಟ್ಟೆಯ ಸೀಳಿ
ಬಂದಿತು ಕೋ ಕೋ ಅನ್ನುತ್ತ!
ಸಾಬಿಯ ಬೀಬಿಯು ಕೋಳಿಯ ಕಂಡು
“ಅರೇ ಖುದಾ ಹೋ ಅಲ್ಲಾ” ಅಂದು
ಗಂಡನ ಸಾವಿಗೆ ಬಹಳೇ ನೊಂದು
ಅವನ ಕೊಂದ ಆ ಕೋಳಿಯ ಕೊಂದು
ತುಕಡಿಯ ಮಾಡಿ-
ರುಚಿಯನು ನೋಡಿ-
ಅತ್ತಳು ಒಬ್ಬಳೆ ತಿನ್ನುತ್ತ!
*****








