ಬೇಟೆ ಪಾಠ ಕಲಿಯಲೆಂದು
ಮದ್ದು ತುಂಬಿ ಕೋವಿಗೆ
ಗುರಿಯ ಹಿಡಿದ ಬಳಿಯ ಗಿಡದ
ಅರಳುತಿದ್ದ ಹೂವಿಗೆ
ಗುರಿಯು ತಪ್ಪಿ ತಾಗಿತೊಂದು
ಮೇಯುತಿದ್ದ ಗೋವಿಗೆ
ನಗೆಯು ಬಂತು ಅದೇ ಗಿಡದ
ಬುಡದ ಬಿಳಿಯ ಹಾವಿಗೆ
ಭೀತಿಯಿಂದ ಹಾರಿಕೊಂಡ
ಕೋವಿಯೊಡನೆ ಭಾವಿಗೆ !
*****
ಕನ್ನಡ ನಲ್ಬರಹ ತಾಣ
ಬೇಟೆ ಪಾಠ ಕಲಿಯಲೆಂದು
ಮದ್ದು ತುಂಬಿ ಕೋವಿಗೆ
ಗುರಿಯ ಹಿಡಿದ ಬಳಿಯ ಗಿಡದ
ಅರಳುತಿದ್ದ ಹೂವಿಗೆ
ಗುರಿಯು ತಪ್ಪಿ ತಾಗಿತೊಂದು
ಮೇಯುತಿದ್ದ ಗೋವಿಗೆ
ನಗೆಯು ಬಂತು ಅದೇ ಗಿಡದ
ಬುಡದ ಬಿಳಿಯ ಹಾವಿಗೆ
ಭೀತಿಯಿಂದ ಹಾರಿಕೊಂಡ
ಕೋವಿಯೊಡನೆ ಭಾವಿಗೆ !
*****