ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್ ಡಿಫರೆಂಟ್, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ ದೂರವಿಟ್ಟಾಗ ಅಂತಃಕರಣಿ, ಉಪಕಾರಿ ಅನ್ನುವಾಗಲೇ ಅಹಂಕಾರಿ, ಕೇಡು ಬಯಸದವನಂದುಕೂಂಡಾಗ ಕಡುಕ, ಯಾರ ಉಸಾಬರಿಗೂ ಹೋಗದವನೆಂದು ಮರುಕಪಡುವಾಗಲೇ ತನ್ನದಲ್ಲದ ಸಂಗತಿಗಳಿಗೆಲ್ಲಾ ಕಾಲು ಕೆರೆದು ಜಗಳ ತೆಗೆವ ಪಟಿಂಗ. ನಿರುಪದ್ರವಿ ಬಡಪಾಯಿ ಅಂತಲ್ಲಾ ನಿಡುಸುಯ್ಯುವಾಗಲೇ ಬಂಡುಕೋರ, ಏತಿ ಎಂದರೆ ಪ್ರೇತಿ ಎನ್ನುವ ಇಂತಿಪ್ಪ ರಂಗ, ಇನ್ನೂ ಓದು ಬರಹ ಕಲಿವ ಸ್ಪೂಡಂಟ್ ದಾರಿಗೆ ಬಂದಾನೆಂಬುವರ ಗೆಸ್ಗಳನ್ನೆಲ್ಲಾ ಮಿಸ್ ಮಾಡಿದ ರೌಡಿ ಎಲಿಮೆಂಟ್. ಹೀಗಂತ ತಾತ್ಸಾರ ತೋರುವಾಗಲಿ ಮೈ ಬಗ್ಗಿಸಿ ದುಡಿವ ಅವನದು ಪಕ್ಕಾ ಆಳಿನ ಗೆಟ್‌ಅಪ್. ಆಳಿನಂತೆ ಟ್ರೀಟ್ ಮಾಡಿದವರ ಸಂಗಡ ಅರಸನ ಪಿಕ್‌ಅಪ್. ಕವಡ ಕಿಮೃತ್ತಿಲ್ಲದ ದಂಡಪಿಂಡನಂತೆ, ಗಲ್ಲಿ ತಿರುಗುವ ಉಂಡಾಡಿಯಂತೆ ಎಲ್ಲರ ಬಳಿ ಉಗಿಸಿಕೂಳ್ಳಲಂದೇ ಮ್ಯಾನುಫ್ಯಾಕ್ಟರ್ ಆದ ಪೀಕದಾನಿಯಂತೆ ಪರಿಪರಿಯ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ನೋಡುಗರಲ್ಲಿ ಮೂಡಿಸುವ ರಂಗ, ಮನೆಯವರ ನೆರೆಯವರ ಗೆಳೆಯರ ಬಂಧು ಬಾಂಧವರ ಒಟ್ಟಾರೆ ಸಮಸ್ತ ಸಂಪಿಗೆಹಳ್ಳಿಗರ ಪಾಲಿಗೆ ಈವತ್ತಿಗೂ ನಿಗೂಢ… ಅಸ್ಪಷ್ಟ ಹೆಡೆ ಎತ್ತಿದ ಸರ್ಪ, ನಾಸ್ತಿಕರ ಪಾಲಿಗೆ ಮೃತ್ಯುಭೀತಿ, ಆಸ್ತಿಕರಲ್ಲಿ ಪೂಜ್ಯಭಾವ ಮೂಡಿಸುವ ರೀತಿ ಅವರವರ ಭಾವಕ್ಕೆ ಸ್ವಭಾವಕ್ಕೆ ತಕ್ಕಂತೆ.
ಕಛೇರಿಗೆ ಕಾಲೇಜು ಸ್ಕೂಲಿಗೆ ಹೂರಡುವ ವೇಳೆ ಸಮೀಪಿಸುತ್ತಿದೆ, ರಂಗ ಮನೆಯಲ್ಲಿಲ್ಲ ಅರ್ಥಾತ್ ರಂಗ ಮನೆಗೆ ಬಂದಿಲ್ಲ.
‘ಎಲ್ಲಿ ಹಾಳಾಗಿಹೋದ ಈನನ್ಮಗ? ನನ್ನ ಕೋಟಿನ ಇಸ್ತ್ರಿ ಯಾರು, ಇವನಪ್ಪ ಮಾಡ್ತಾನ್ಯೇ?’ ಲಾಯರ್ ವಂಕಟ್ ಅವರ ಸಂಕಟ.
‘ನನ್ನ ಬೈಕ್ ಯಾಕೋ ಸ್ಟಾರ್ಟೇ ಆಗ್ತಿಲ್ಲ… ಅವನಿದ್ದಿದ್ದರೆ ಏನಾದ್ರೂ ರಿಪೇರಿ ಮಾಡೋನು. ಎಲ್ಲಿ ಸತ್ತ ಈ ಪೀಡೆ’ ಕಾಲೇಜ್ ಮೇಷ್ಟ್ರು ತಳಮಳ. ಕಾರಿನ ಪಟ್ರೋಲ್ ಖಾಲಿಯಾಗಿದೆ ನಿನ್ನೆನೇ ಹಾಕಿಸು ಅಂತ ಹೀಳಿದ್ದನಯ್ಯಾ ಲೋಫರ್‍ಗೆ… ನಾನ್ ಹೇಗಪ್ಪಾ ಫ್ಯಾಕ್ಟರಿಗೆ ಹೋಗ್ಲಿ?’ ಫ್ಯಾಕ್ಟರಿ ಸೂಪರ್‌ವೈಸರ್ ಪರಮೇಶಿಯ ಪರಡಾಟ. ಈ ಅಣ್ಣ ತಮ್ಮಂದಿರ ಹಂಡಿರೂ ಎಂಪ್ಲಾಯ್ಗಳೆ. ಅವರಿಗೂ ಒಂದಲ್ಲ ಒಂದು ಕಲಸಕ್ಕೆ ರಂಗ ಬೇಕೇ ಬೇಕು. “ನನ್ನ ಚಪ್ಪಲಿ ಹರಿದಿದೆ ಇಲ್ಲಿ ಯಾವನಿದ್ದಾನೆ ರಿಪರಿ ಮಾಡೋಕೆ? ಸಿಟಿಗೆ ಹೋಗ್ಬೇಕು. ಹರಕು ಚಪಲಿ ಹೇಗ್ರಿ ಹಾಕ್ಕೊಂಡು ಹೋಗೋದು? ರಂಗನ್ನ ಹೀಗೆ ಬಿಟ್ಟರೆ ಆಗೋಲ್ಲ. ಹದ್‌ಬಸ್ಕ್‌ನಲ್ಲಿಡಬೇಕು’ ಲಾಯರ್ ವಂಕಟರ ಪತ್ನಿ ಪಾರ್ವತಿಯ ಪರದಾಟ.
‘ಅಂಕೆಯಿಲ್ಲದ ಕುದುರೆ ಅಗಳು ಹಾರ್‍ತಂತೆ… ಮನೇಲಿ ದಂಡಿ ಕೆಲಸ ಬಿದ್ದಿದೆ ಮಾಡೋಕೆ… ಅದು ಹಾಳಾಗಿಹೋಗ್ಲಿ. ನಾನು ಬ್ಲೌಸ್ ಹೊಲಿಯೋಕೆ ಕೊಟ್ಟಿದ್ದೆ ಈಸ್ಕೊಂಡು ಬಂದನೋ ಹೆಂಗೋ? ಇಂವಾ ದಂಡಪಿಂಡಾರೀ….’
ಕಾಲೇಜು ಮೇಷ್ಟ್ರು ಗಣೇಶನ ಮಡದಿ ಹೈಸ್ಕೂಲ್ ಟೀಚರ್ ರಾಗಿಣಿಯ ಉವಾಚ. ‘ನಿನ್ನೆ ಅವನಿಗೆ ಪಾರ್‍ಕರ್
ಪೆನ್ ತರೋಕೆ ದುಡ್ಡು ಕೂಟ್ಟಿದ್ದೆ ಕಣ್ರಿ. ಅದನ್ನೂ ನುಂಗಿ ಹಾಕಿದ್ನೇನೋ ಭಡವ. ಬೇಕಿದ್ದರೆ ಕೇಳಿ ಇಸ್ಕೋಬೇಕು, ಕಂಡೋರ ಕಾಸು ಅಂದ್ರೆ ಪಾಷಾಣ ಅಂದ್ಕೋಬೇಕು. ಈವತ್ತಿನ ಹುಡುಗರಿಗೆ ಯಾರ ದುಡ್ಡಾದರೇನು ಮಜಾ ಮಾಡೋಕೆ, ಯೂಸ್‌ಲಸ್ ಫೆಲೋಸ್’ ತನ್ನ ದುಡ್ಡೆಲ್ಲಿ ಎತ್ತಿಹಾಕಿದನೋ ಎಂದು ಸೈರನ್ ತರಾ ಕೂಗುವ ಫ್ಯಾಕ್ಟರಿ ಪರಮೇಶನ ಹಂಡತಿ ಮಾಧುರಿ ದುಡಿಯೋದೂ ಅದೇ ‘ಕುಮಾರಸ್ನಾಮಿ ಸಿಲ್ಕ್ ಫ್ಯಾಕ್ಟರಿ’ಯ ಆಫೀಸ್ ವಿಂಗ್ನಲ್ಲೆ. ಲಾಯರ್‍ಗೆ ಮಗ, ಫ್ಯಾಕ್ಟರಿಯವನಿಗೆ ಮಗಳೂಬಳಿದ್ದಾಳೆ. ಇಬ್ಬರೂ ಸಿಟಿಯ ಕಾನ್ವೆಂಟಿನಲ್ಲಿ ಓದುತ್ತಿದ್ದು ಸಂಪಿಗೆಹಳ್ಳಿಯಿಂದ ಹೆತ್ತವರೇ ದಿನಾ ಅವರನ್ನು ಕರದೊಯ್ದು ಬರುವಾಗ ಕರೆತರುತ್ತಾರೆ. ‘ನಮ್ಮ ಬೂಟು ಸಾಕ್ಸ್ ಎಲ್ಲಿವೆಯೋ ಸಿಗ್ಗಿಲ್ಲ್’ ಎಂದು ರಂಪ ಎಬ್ಬಿಸುವಾಗ ಅಡಿಗೆಮನೆಯಲ್ಲಿ ದೋಸ ಮಾಡುತ್ತಿದ್ದ ಕಮಲಮ್ಮ ಚಟ್ನಿಯನ್ನು ಮಿಕ್ಸಿಗೆ ಹಾಕಿದ್ದ ಮಗಳಿಗೆ ‘ಹೋಗಿ ಹುಡುಕಿಕೂಡು’ ಎಂಬಂತೆ ಸನ್ನೆ ಮಾಡುತ್ತಾ ಸರಗಿನಿಂದ ಬೆವರೂರಸಿಕೊಳ್ಳುತ್ತಾಳೆ. ಮಗಳು ಕಾವೇರಿ ಗಿಡಿಬಿಡಿಯಿಂದ ಬಂದು ಬೂಟುಗಳ ರಾಶಿಯಲ್ಲಿ ಸೇರಿಹೋಗಿದ್ದ ಅವುಗಳನ್ನು ಎತ್ತಿಕೊಡುತ್ತಾಳೆ. ‘ಶೂಸ್ಗಳಿಗೆ ಪಾಲಿಶೇ ಹಾಕಿಲ್ಲ ರಂಗ… ಮಿಸ್ ಬೈತಾರೆ’ ಕಣ್ಣುಜ್ಜುತ್ತವೆ ಮಕ್ಕಳು. ಕಾವೇರಿ ಪಾಲಿಶ್ ಡಬ್ಬಿಗಾಗಿ ತಡಕಾಡುವಾಗಲೆ ‘ಬೇಗ ಬಾರೆ. ಅವರುಗಳಿಗೆ ಆಫೀಸಿಗೆ ಲೇಟಾಯ್ತು… ಕರೆಂಟ್ ಕೈ ಕೊಟ್ಟರೆ ನಾವೇ ಚಟ್ನಿಯಾಗಿಬಿಡ್ತೀವಿ’ ಕಮಲಮ್ಮ ಕೂಗುತ್ತಾಳೆ… ಕೂಗಿನಲ್ಲಿದ್ದ ಟೆನ್ಶನ್ ಅರ್ಥ ಮಾಡಿಕೂಂಡ ಕಾವೇರಿ ಅಡಿಗೆಮನೆಗೆ ಓಡುತ್ತಾಳ. ‘ಪಾಲಿಶ್ ಹಾಕ್ಕೂಡಿ ಬೂಟ್ಗೆ’ ಮಕ್ಕಳ ರಂಪ ಶುರುವಾಗುತ್ತೆ. ‘ಟೈಮಿಗೆ ಸರಿಯಾಗಿ ಒಂದು ಟಿಫನ್ ಮಾಡೋಕೆ ಬರೋಲ್ಲ. ಒಂದು ರುಚಿನೇ ಶುಚಿನೇ ನಮಗೆ ಗತಿಯಿಲ್ಲ ತಿಂತೀವಿ. ಡಬ್ಬಿಗೆ ತುಂಬಿಕೂಟ್ಟ ಅನ್ನ ಸಾಂಬಾರ್ ಆ ದೇವರಿಗೇ ಪ್ರೀತಿ’ ಕೋರ್ಟಲ್ಲಿ ಕ್ಲರ್ಕ್ ಕೆಲಸ ಮಾಡುವ ಪಾರ್ವತಿಯ ಜಡ್ಜ್‌ಮೆಂಟ್ ಹೂರಬಿದ್ದಾಗ ಉಳಿದ ವಾರಗಿತ್ತಿಯರೂ ಹೌದೆಂಬಂತೆ ಮೂತಿಯನ್ನು ಮತ್ತಷ್ಟು ಕೆಡಿಸಿಕೊಳ್ಳುತ್ತಾರೆ. ‘ಎಲ್ಲಿಗೆ ಹೋದ್ನಪ್ಪ ಈ ರಂಗ?’ ಕಮಲಮ್ಮ ಒಳಗೇ ಪೇಚಾಡುತ್ತಾಳೆ. ಆಕೆಯ ಮೋರೆಯಲ್ಲಿ ಮೂಡಿದ ಭಯವನ್ನು ಗ್ರಹಿಸಿದ ಕಾವೀರಿಗೂ ಒಳಗೇ ಭಯ. ‘ರಂಗ ಎಲ್ಲಾ ಗೊತ್ತಿದ್ದೂ ಯಾಕಮ್ಮ ಹೀಗ ಮಾಡ್ತಾನೆ? ಟೈಮಿಗೆ ಸರಿಯಾಗಿ ಮನೆಗೆ ಬರೋಕೇನ್ ಧಾಡಿ’ ಭಯ ಮಾತಿನ ರೂಪ ಪಡೆದಿರುತ್ತದೆ. ‘ದೊಡ್ಡವನಾಗಿ ಚಿಕ್ಕಮಕ್ಕಳಂತೆ ಬಾಯಿಗೆ ಬಂದ್ಹಾಗೆ ಬೈಸ್ಕೊತಾನೆ. ಎಷ್ಟೋ ಸಲ ಹೊಡೆತ ಬಿದ್ದರೂ ಬುದ್ಧಿ ಮಾತ್ರ ಅದೇ ರದ್ದಿ… ಇವನು ಬದಲಾಗೋಲ್ಲಮ್ಮ’ ಕಾವೇರಿ ಕಣ್ಣಂಚಿನಲ್ಲಿ ಕಾವೇರಿಯ ಉದ್ಭವ ‘ದುಡೀದೇ ತಿನ್ನೋನು ದುಡಿಯೋರ ಸೇವೆ ಮಾಡ್ಕೂಂಡಾದ್ರೂ ಬಿದ್ದಿರಬೇಕು- ನಾಯಿ ತರಾ. ಎಲ್ಲದಾನೋ ಏನ್ ಮಾಡ್ತಿದಾನೋ! ಗೂಳಿ ತಿರುಗ್ದಂಗೆ ಎಲ್ಲಿ ತಿರುಗ್ತಿದಾನೋ?’ ಕಮಲಮ್ಮ ನಿಟ್ಟುಸಿರುಬಿಡುತ್ತಾಳೆ.
* * *
ಗೂಳಿ ಗುಟುರು ಹಾಕುತ್ತಾ ಕಂಡಕಂಡ ಹೊಲದಲ್ಲಿ ನುಗ್ಗಿ ಮೆಯುತ್ತಾ ತನ್ನ ದಾರಿಗೆ ಅಡ್ಡ ಬಂದವರನ್ನು ತನ್ನ ಕೋಡುಗಳಿಂದ ಎತ್ತಿ ಬಿಸಾಡುತ್ತಾ ಸಾಗಿದೆ. ಗೂಳಿಯನ್ನು ನೋಡುವುದಿರಲಿ ಅದರ ಗುಟುರು ಕಿವಿಗೆ ಬಿದ್ದೊಡನೆ ಹಳ್ಳಿ ಜನ ‘ಕರ್‍ಫ್ಯೂ’ ಎಂದೇ ಭಾವಿಸಿ ಮಾಯವಾಗಿಬಿಡುತ್ತಾರೆ. ಅದು ಯಾರ ಹೊಲದಲ್ಲಿ ಬೇಕಾದರೂ ನುಗ್ಗಿ ಮೇಯಬಹುದು ಯಾರನ್ನು ಬೇಕಾದರೂ ಎತ್ತಿ ಬಿಸಾಡಬಹುದು. ಆದರೂ ಯಾರೂ ಅದನ್ನು ತಡೆಗಟ್ಟುವಂತಿಲ್ಲ. ಅದಕ್ಕೆ ಸಣ್ಣ ಪೆಟ್ಟೂ ಹಾಕುವಂತಿಲ್ಲ, ಕನಿಷ್ಠ ಗದರಿಸುವಂತಿಲ್ಲ. ಯಾಕೆಂದರೆ ಅದು ದೇವರಿಗೆ ಬಿಟ್ಟಿ ಗೂಳಿ. ಅಷ್ಟೇ ಆಗಿದ್ದರೆ ಕಣ್ತಪ್ಪಿಸಿಯಾರದೂ ಅದನ್ನು ಬಡಿದು ಬೆದರಿಸುತ್ತಿದ್ದರೇನೋ. ಆದರೆ ‘ಬಸವ’ನೆಂದು ಪಾಳೇಗಾರ್ ಭರಮಪ್ಪನವರಿಂದ ಕರೆಸಿಕೊಳ್ಳುವ ಆ ಗೂಳಿ ಅವರ ಸಾಕುಮಗನಂತಯೇ ಬಳೆದಿದ ಬಿಳಸಿದ್ದಾರೆಂಬ ಎಚ್ಚರಿಕೆ ಎಲ್ಲರ ಎದೆಯಲ್ಲಿ ಹಪ್ಪುಗಟ್ಟದೆ. ಪಾಳೇಗಾರ ಭರಮಪ್ಪನೆಂದಾಕ್ಷಣ ಅವರೇನು ಭಾರಿ ಇತಿಹಾಸ ಹೂಂದಿದವರಲ್ಲ. ಹಿಂದಿನವರು ಕೋಟೆ ಕೂತ್ತಲ ಆಳಿದ್ದಿರಬಹುದು. ಭರಮಪ್ಪನ ಹಿರೀಕರು ದಳವಾಯಿಗಳಾಗಿ ದುಡಿದವರು. ಮಸ್ತು ಮರಮುಟ್ಟುಗಳಿಂದ ಕೂಡಿದ ಅರವತ್ತು ಅಂಕಣದ ಹಳೆಯ ಕೋಟೆಯಂತಿರುವ ವಿಶಾಲವಾದ ಮನೆಗೆ ಭರಮಪ್ಪನ ಮಗ ಉಗ್ರಪ್ಪ, ಮೈಲಾರಿ ಹೂಸ ರೂಪ ಕೂಟ್ಟಿದ್ದಾರೆ. ಪ್ರಾಚೀನತೆಯನ್ನು ಉಳಿಸಿಕೊಂಡು ಮಾಡರನ್ ಶೃಲಿಯ ಪರಿಕರಗಳು, ಪೇಂಟಿಂಗ್ಸ್ ಅಲಂಕಾರಿಕ ವಸ್ತುಗಳು ದುಬಾರಿ ಫರ್ನಿಚರ್‌ಗಳಿಂದ ಸಿಂಗರಿಸಿ ಹಳೆ ಮನೆಯ ವಾಸನೆ ಸೋಂಕದಂತೆ ಬಂಗಲೆಯ ಮತ್ತು ಗಮ್ಮತ್ತು ಹೆಚ್ಚಿಸಿದ್ದಾರೆ. ಭರಮಪ್ಪನವರಲ್ಲಿ ವಂಶಜರ ಪಾಳಗಾರಿಕೆ ಗತ್ತು ಇದ್ದರೂ ಗರ್ವವಿಲ್ಲ. ಹುಂಬತನವಿದ್ದರೂ ವಿವೇಕ ಕೈ ಕೂಟ್ಟಿಲ್ಲ, ದರ್ಪ ಕಣ್ಣುಗಳಲ್ಲಿ ಮನೆ ಮಾಡಿದ್ದರೂ ಕ್ರೌರ್ಯದ ರೂಪ ಪಡೆದಿಲ್ಲ. ಆತ್ಮವಿಶ್ವಾಸವೆಂದೂ ಪರರ ವಿಶ್ವಾಸವನ್ನು ಅಪಮಾನಿಸಿಲ್ಲ. ಸಿರಿಯ ಗರ ಬಡಿದಿಲ್ಲ ಹಿಂಸಗೆ ತಿರುಗಿಲ್ಲ. ಆದರೆ ಉಗ್ರಪ್ಪ, ಮೈಲಾರಿ ಈಗಲೂ ಗತಿಸಿಹೋದ ಪಾಳೇಗಾರರ ಪಳೆಯುಳಿಕಗಳಂತಯೇ ವರ್ತಿಸುತ್ತಾರೆ. ಸಿರಿವಂತಿಕೆಯ ಜೊತೆಗೆ ಅಧಿಕಾರವಿದ್ದರೆ ಮಾತ್ರ ಜನ ಬೆಲೆಕೊಡುತ್ತಾರೆ, ತಮ್ಮ ವಿರುದ್ಧ ಸೊಲ್ಲೆತ್ತುವುದಿಲ್ಲವೆಂದೇ ನಂಬಿರುವ ಉಗ್ರಪ್ಪನಾಗಲಿ ಮೈಲಾರಿಯಾಗಲಿ ನೇರವಾಗಿ ರಾಜಕೀಯ ಅಧಿಕಾರಗಳಿಗೇನು ಅಪೇಕ್ಷೆಪಟ್ಟವರಲ್ಲ, ಆಕಾಂಕ್ಷಿಗಳೂ ಅಲ್ಲ. ಆದರೆ ಯಾರನ್ನು ಬೇಕಾದರೂ ಚುನಾವಣೆಗೆ ನಿಲ್ಲಸಿ ಗೆಲ್ಲಿಸಬಲ್ಲ ತಾಕತ್ತು ಗುಟ್ಟುಪಟ್ಟುಗಳನ್ನು ಬಲ್ಲವರು. ಹೀಗಾಗಿ ಗ್ರಾಮಪಂಚಾಯ್ತಿಯಿಂದ ಶಾಸಕರೂ ಸಂಸದರೂ ಎಲ್ಲರೂ ಅವರ ಉಪ್ಪುಂಡು ಉಪ್ಪರಿಗೆ ಏರಿದವರೇ. ಆ ಕಾರಣವಾಗಿ ಸಿಯಮ್ಮು ಕೂಡ ದೂರದವರೇನಲ್ಲ. ಸಾಕ್ಷಿ ಬೇಕೆಂದರೆ ಉಗ್ರಪ್ಪ ಮತ್ತು ಮೈಲಾರಿಯ ಹೆಗಲ ಮೇಲೆ ಕೈಹಾಕಿಕೊಂಡು ಇಷ್ಟಗಲ ನಗುತ್ತಿರುವ ಸಿಯಮ್ ಅವರ ದೊಡ್ಡ ಫೋಟೋ ಹೂರಬಾಗಿಲಲ್ಲೇ ಕಾಣುತ್ತದೆ. ಪಾರ್ಟಿ ಫಂಡ್ ಎಲ್ಲಾ ಪಕ್ಷಗಳಿಗೂ ತಾರತಮ್ಯ ತೋರದೆ ಹಂಚುವುದರಿಂದಾಗಿ ಯಾರೇ ಗೆಲ್ಲಲಿ ಪಾಳೇಗಾರರ ಫ್ಯಾಮಿಲಿಗೆ ಬಾಧಕವಿಲ್ಲ. ಅವರಿಗೆ ಬೇಕಾದ ತೋಟತುಡಿಕೆ, ರಸ್ತೆಬದಿಯ ಜಮೀನು ಗ್ರಾನೈಟ್ ಬಿಸಿನೆಸ್ ಮೈನ್ಸ್ ದಂಧೆ ಎಲ್ಲಾ ನೈಸಾಗಿ ನಡೆಯುತ್ತಾ ಸಂಪತ್ತು ದಿಗುಣಿಸುತ್ತಿರುವುದರಿಂದ ಸೊಕ್ಕೂ ಮಲ್ಟಿಪ್ಲೈ ಆಗುತ್ತಿದೆ. ಉಗ್ರಪ್ಪ ಹೆಸರಿನಂತೆ ಉಗ್ರನೇ ಆದರೂ ಹುಂಬನಲ್ಲ. ಸೋಲನ್ನೆಂದೂ ಸೈರಿಸುವನೂ ಅಲ್ಲ. ಗೆಲುವಿಗಾಗಿ ಸಂಚು ವಂಚನೆಗೂ ಸೈ. ಆದರೆ ಮೈಲಾರಿಗೆ ಇವೆಲ್ಲಾ ಗೊತ್ತಿಲ್ಲ. ಅವನು ತನ್ನ ತೋಳ್ಬಲವನ್ನೇ ನಂಬಿದ ಸಿರಿಯ ಗರ ಬಡಿದ ಹಸಿದ ಹುಲಿಯಂತವನು. ತಮ್ಮ ಎರುದ್ಧ ಸೊಲ್ಲು ಎತ್ತುವರ ಅಂತ್ಯ ಸಾವೇ ಎಂದು ನಂಬಿದವನು. ಉಗ್ರಪ್ಪನಿಗೆ ಒಬ್ಬ ಮುದ್ದಾದ ಹರೆಯದ ಮಗಳಿದ್ದಾಳೆ. ಅವಳ ಹೆಸರೇನೋ! ಎಲ್ಲರೂ ಅವಳನ್ನು ಅಕ್ಕರೆಯಿಂದ ‘ಚಿನ್ನು’ ಅಂತಲೇ ಕರೆಯುತ್ತಾರೆ. ಉಗ್ರಪ್ಪನ ಹೆಂಡತಿ ಚಿನ್ನಮ್ಮ ಗೌಡತಿ ತರಾ ತಾನಾಯಿತು ಮನೆಯ ಪಾಡಾಯಿತು ಎಂಬಾಕೆ. ಉಗ್ರಪ್ಪ ಕಾಲೇಜು ಓದಿದ್ದರೂ ಡಿಗ್ರಿ ಮಾಡಿಕೊಳ್ಳಲಾಗಲಿಲ್ಲ. ಕಲಿತಿದ್ದು ತಮ್ಮ ವ್ಯವಹಾರಕ್ಕೆ ಸಾಕು ಎಂಬ ತೃಪ್ತಿ ಅವನಿಗಿದೆ. ಮೈಲಾರಿ ಡಿಗ್ರಿ ಮಾಡಿಕೊಂಡವ. ‘ಕಾಪಿ ಹೊಡೆದು ಮಾಡಿಕೊಂಡೆ, ನನ್ನ ಯಾವನೇನು ಮಾಡಿಕೂಳ್ಳೋಕೂ ಆಗ್ಲಿಲ್ಲ’ ಎಂದು ಹಮ್ಮಯಿಂದಲೇ ಹೇಳಿಕೂಳ್ಳುವ ಮೈಲಾರಿ, ಜಿಮ್‌ಗೆ ಹೋಗಿ ಸಖತ್ತಾಗಿ ಮೈ ಕೈ ಗಟ್ಟಿಮಾಡಿಕೂಂಡವ. ಹೆಸರು ಓಲ್ಡ್ ಟೈಪಾಯಿತೆಂದು ಓದುವಾಗಲೇ ಅಫಿಡವಿಟ್ ಮಾಡಿಸಿ ತನ್ನ ಹಳೆ ಹಸರಿಗೆ ನವೀನ್ ಮೈಲಾರಿ ಎಂದು ನವೀನ ರೂಪ ಇಟ್ಟುಕೂಂಡವ. ಆದರೂ ಯಾರೂ ಅವನನ್ನು ನವೀನ್ ಅನ್ನಲೇ ಇಲ್ಲ. ಈಗಲೂ ಮೈಲಾರಿಯೇ ಆಗಿ ಉಳಿದಿರುವ ಅವನಿಗೇನೂ ಈಗ ಹೆಸರಿನ ಬಗ್ಗೆ ಅಂತಹ ವ್ಯಾಮೋಹವಿಲ್ಲ. ‘ಯಾವುದಾದರೇನ್ಲಾ ಕರೆಯೋಕೆ ಒಂದ್ ಹೆಸರು ಅದೆ’ ಅಂತಲೇ ಇತರರನ್ನು ಕನ್‌ವಿನ್ಸ್ ಮಾಡುತ್ತಾ ತಾನೂ ಕನ್‌ವಿನ್ಸ್ ಆಗುವಷ್ಟು ಬದಲಾಗಿದ್ದಾನೆ. ‘ಜಿಮ್ ಮಾಡಿ ಕೊಬ್ಬಿರುವ ಮೈಕೈಗೆ ಆಗಾಗ ಯಾರನ್ನಾದರೂ ಹೊಡೆದು ಬಡಿಯದಿದ್ದರೆ ಉಂಡಿದ್ದು ಅರಗಲ್ಲ ಅಂತ ಕಾಣುತ್ತೆ’ ಎಂಬ ಅಭಿಪ್ರಾಯಕ್ಕೆ ಹೆಂಡತಿ ಕೆಂಚಮ್ಮ ಬಂದಿದ್ದಾಳೆ. ಒಂದಿಷ್ಟು ಅಂದವಾಗಿಯೂ ಇರುವ ಈಕೆ ಡಿಗ್ರಿವರೆಗೂ ಓದಿದವಳಾದ್ದರಿಂದ ಸಂಪಿಗೆಹಳ್ಳಿಗೆ ಮೂದಲು ಫ್ಯಾಶನ್ ತಂದವಳೆಂಬ ಕೀರ್ತಿ ಅಪಕೀರ್ತಿಯೂ ಅಂಟಿದೆ. ಹೂಕ್ಕಳ ಕಾಣುವಂತೆ ಸೀರೆ ಸುತ್ತಿಕೊಳ್ಳುವ ಆಕೆ ಬಗ್ಗೆ ಭರಮಪ್ಪನೇ ಅದು ಎಷ್ಟೋ ಸಲ ‘ನಿನ್ನ ಹೆಂಡ್ರಿಗೆ ನೆಟ್ಟಗೆ ಸೀರೆ ಸುತ್ತಿಕೊಳ್ಳಾಕೆ ಹೇಳ್ಳಾ… ಜಾರಿ ಬಿದ್ದುಗಿದ್ದೀತು’ ಎಂದು ಗದರಿದ್ದಿದೆ. ‘ಹಳ್ಳಿ ಮುದುಕನಿಗ ನನ್ನ ಸುದ್ದಿಯಾಕೆ ಒಂದಿಷ್ಟೂ ನಯನಾಜೂಕಿಲ್ಲ. ಎದೆಗೆ ಸೀರೆ ಸುತ್ಕೊಳ್ಳೋ ಹಳ್ಳಿಮುಕ್ಕನೇ ತಂದು ಕಟ್ಟಬೇಕಿತ್ತು ಮಗನಿಗೆ’ ಎಂದು ಕೆಂಚಮ್ಮ ಗಂಡನಿಗೆ ಮಾತ್ರ ಕೇಳುವಂತೆ ಗೂಣಗುವಷ್ಟು ಧೈರ್ಯಶಾಲಿ. ಆಕೆಗೂ ತನ್ನ ಹಸರು ಚೆನ್ನಾಗಿಲ್ಲವೆಂಬ ಹಳಹಳಿಯಿದೆ. ಬೇರೆ ಹೆಸರಲ್ಲಿ ಕೂಗಿ ಎಂದಾಕೆ ನವೀನ್ ಮೈಲಾರಿಗೆ ಅಹವಾಲು ಮಂಡಿಸಿದ್ದಿದೆ. ಆದರೆ ತಂದೆಯ ಭಯಕ್ಕೆ ಅವನ ನಾಲಿಗಯೇ ಹೂರಳುವುದಿಲ್ಲ. ರಾತ್ರಿ ತೆಕ್ಕೆಬಿದ್ದಾಗ ‘ಸುಮಿ’ ಎಂದವಳನ್ನು ನವಿರಾಗಿ ಕರೆದು, ಖುಷಿಯ ಉತುಂಗ ತಲುಪಿದಾಗ ‘ಕೆಂಚಿ’ ಎಂದು ಏದುಸಿರು ಬಿಡುವ ಅವನಂಥ ಒರಟನ ಬಳಿ ಹೆಣಗಾಡಿ ಅವಳಿಗೂ ರೋಸಿಹೋಗಿದೆ. ಏನಿದ್ದರೇನು ಸುಖ ಸ್ವಾತಂತ್ರ್ಯವಿಲ್ಲದನಕ್ಕ ಅಂತ ಕೆಂಚಮ್ಮ ಹಪಹಪಿಸುತ್ತಾಳ. ಸಧ್ಯಕ್ಕೆ ಈ ಮನೆಯಲ್ಲದ್ದೂ ಸ್ವಾತಂತ್ರ್ಯಪಡೆದ ಭಾಗ್ಯಶಾಲಿಯಿದ್ದರೆ ಅದು ಬಸವನೆಂಬ ಗೂಳಿ ಮಾತ್ರ.
*****