ಬರೆದವರು: Thomas Hardy / Tess of the d’Urbervilles
ಶಂಭುರಾಮಯ್ಯನು ರಸಿಕ. ಅವನಿಗೆ ಜರ್ದಾ ಎಂದರೆ ಪ್ರಾಣ. ಅಡಕೆಲೆ ಇಲ್ಲದಿದ್ದರೂ ಬಾಯಲ್ಲಿ ಒಂದು ಚೂರು ಜರ್ದಾ ಇರಬೇಕು. ಅದೀ ಜರ್ದಾನೇ ಅವನಿಗೆ ಮಲ್ಲಣ್ಣನ ಸ್ನೇಹವನ್ನು ಸಂಪಾದಿಸಿ ಕೊಟ್ಟುದು. ತಿಮ್ಮಯ್ಯನು ಹೊಸ ಬುದ್ಧಿಗಳನ್ನು ತೋರಿಸಿದ. ಮಲ್ಲಣ್ಣನಿಗೆ ಕೊಳ್ಳೇಗಾಲದ ಆಚೆ ಕಾವೇರೀ ನದಿಯ ಹತ್ತಿರ ಮಠ ದಲ್ಲಿದ್ದ. ಸ್ವಾಮಿ ಶಿವರಾಮಯ್ಯ ಇವನೇ ಇರಬಹುದೆ? ಎಂದು ಅನುಮಾನನಾಯಿತು. ಆದರೂ ಕೇಳಲಿಲ್ಲ.
ಶಂಭುರಾಮಯ್ಯನ ಹೆಂಡತಿ ಆನಂದಮ್ಮನು ಮದರಾಸಿನವಳು. ಅವಳು ಥಿಯೋಸಫಿಯ ಪ್ರಭಾವಕ್ಕೆ ಒಳಗಾಗಿ ಬಾಲ್ಯ ವಿವಾಹೆವನ್ನು ವಿರೋಧಿಸಿದ್ದಳು. ಆಕೆಗೆ ದಿನವೂ ಧ್ಯಾನ ಜಪ ಮೊದಲಾದವುಗಳನ್ನು. ಮಾಡುವುದರಲ್ಲಿ ಆಸಕ್ತಿ. ಜೊತೆಗೆ ಏನಾದರೂ ಲೋಕೋಪಕಾರ ಮಾಡಬೇಕೆಂದು ಆಸೆ.
ಶಂಭುರಾಮಯ್ಯನು ಅವಳಿಗೆ ಗಂಟು ಬಿದ್ದುದು ವಿಚಿತ್ರವಾದ ಸಂದರ್ಭದಲ್ಲಿ. ಸುಮಾರು ಹದಿನೈದು-ಇಪ್ಪತ್ತು ವರ್ಷದ ಕೆಳಗೆ ಅವನು ಮದರಾಸಿಗೆ ಹೋಗಿದ್ದ. ಮೈಸೂರಿನಲ್ಲಿ ಪ್ರಸಿದ್ಧಳಾದ ಒಬ್ಬಳು ಸಂಗೀತಗಾರಳು ಮದರಾಸಿಗೆ ಬಂದಿದ್ದಾಗ ಅವಳ ಸಂಗೀತ ಕೇಳಿ ಆನಂದಮ್ಮನು ಅವಳ ಸ್ನೇಹಿತೆಯಾಗಿದ್ದಳು. ಶಂಭುರಾಮಯ್ಯನಿಗೂ ಸಂಗೀತಗಾರಳಿಗೂ ಏನೋ ಸಂಬಂಧವಿತ್ತೆಂದು ವದಂತಿ. ಸಂಗೀತ ಗಾರಳ ಮನೆಗೆ ಶಂಭುರಾಮಯ್ಯ ಹೋಗಿ ಇಳದುಕೊಂಡ. ಅಲ್ಲಿ ಸಂಗೀತಗಾರಳ ಬುದ್ಧಿವಂತಿಕೆಯೋ ಆನಂದಮ್ಮನ ಅವಿವೇಕವೋ, ಅವನ ಆಸೆಯೋ ಅಂತೂಇಂತೂ ಬೆಟ್ಟದ ನೆಲ್ಲಕಾಯಿಗೂ, ಘಟ್ಟದ ಉಪ್ಪಿಗೂ ಸಂಬಂಧ ಬಿದ್ದಂತೆ ಇಬ್ಬರಿಗೂ ತೆಕ್ಕೆ ಬಿತ್ತು.
ತೆಕ್ಕೆ ಬಿಚ್ಚಬೇಕೆಂದು ಇಬ್ಬರೂ ಒದ್ದಾಡಿದರೂ ಆಗಲಿಲ್ಲ. ಒಂದು ಮಗುವಾದಹಾಗೆ, ಆ ಮಗುವನ್ನು ಇಟ್ಟು ಕೊಳ್ಳಲಾರದೆ ಯಾರಿಗೋ ಕೊಟ್ಟು ಬಿಟ್ಟ ಹಾಗೆ ಅದೇ ಕಾರಣನಾಗಿ ಇಬ್ಬರಿಗೂ ವಿಯೋಗ ವಾಗಿದ್ದು ಮೆತ್ತೆ ಗಂಟುಬಿದ್ದಹಾಗೆ, ಅವರ ಮಾತಿನಲ್ಲಿ ಆಗಾಗ ತೇಲು ತ್ತಿತ್ತು. ಎರಡನೆಯ ಸಲ ಸೇರಿದಾಗ, ಮೊದಲಿನ ಕಹಿ ಅಷ್ಟು ಕಡಿಮೆಯಾಗಿ ಕೊನೆಗಿಬ್ಬರೂ ಒಂದು ಮಠಕಟ್ಟ ಕೊಂಡು ಮೈ ಸೂರಿನಲ್ಲಿ ನಿಂತಿದ್ದರು. ಅವಳಿಗೆ ಒಂದಷ್ಟು ಗಪ್ಪೆಯಿತ್ತು. ಅದು ಕರಗದಹಾಗೆ “ರೊಟ್ಟಿ ತೊಳೆದುಕೊಂಡು ನೀರು ಕುಡಿಯುತ್ತ ” ಇಬ್ಬರೂ ಸಂಸಾರ ವನ್ನು ಸಾಗಿಸಿದ್ದರು.
ಆನಂದಮ್ಮನು ದಿನವೂ ಸಂಜೆ ಪುರಾಣವನ್ನು ಹೇಳುವಳು. ಮಧ್ಯಾಹ್ನ ನಾಲ್ಕು ಗಂಟೆಯಿಂದ ಆರು ಗಂಟೆಯವರೆಗೆ. ಪುರಾಣವಾಗು ವುದು. ಏನೋ ಸತ್ಕಾಲಕ್ಷೇಪವೆಂದು ಅವರೂ ಇವರೂ ಬರುವರು. ಬಂದವರು ಬರಿಯ ಕೈಯಲ್ಲಿ ಬರುತ್ತಿರಲಿಲ್ಲ. ಹಾಗೂ ಹೀಗೂ ಅವರ ಮಠದಲ್ಲಿ ತಿಂಗಳಿಗೊಮ್ಮೆಯಾದರೂ ಸಮಾರಾಧನೆಯಾಗುವುದು. ಆಗ ಎಲ್ಲರೂ ಸೇರುವರು.
ಶಂಭುರಾಮಯ್ಯನ ಹರಟೆಯೇ ಹರಟೆ. ಅವನು ಉತ್ತರ ದೇಶದಲ್ಲಿ ಎಂದು ಷುರು ಮಾಡಿದರೆ ಮುಗಿಯುವುದಕ್ಕೆ ಒಂದು ಗಂಟೆ ಆಗಬೇಕು. “ನೋಡಿ, ಕಾಶಿಗಿಂತ ಇನ್ನು ಇಲ್ಲವಲ್ಲ ಅಲ್ಲಿಯೂ ಅಷ್ಟೇ ! ವಿದ್ವಾಂಸರು, ಎಂತಹ ವಿದ್ವಾಂಸ ಸರು ಅಂತೀರಿ, ಘನ ವಿದ್ವಾಂಸರು. ನಮ್ಮ ದೇಶದವರು ಆಡಾದರೆ, ಅವರು ಆನೆ. ಅಷ್ಟು ಭಾರಿ ವಿದ್ದಾಂಸರೂ ಗಾಂಜಾ, ಅಫೀಮು, ರಾಮರಸ ಹೊಡೆದು ಬಿಡುತ್ತಾರೆ ಅಂದರೆ! ಅದೆಷ್ಟಾಗಲಿ, ಜ್ಞಾನ ಭೂಮಿ. ಇದೆಷ್ಟಾಗಲಿ ಕರ್ಮಭೂಮಿ – ನಿಮ್ಮ ಜಾತಿ ಜಾತಿಗಳ ಹೋರಾಟವೆಲ್ಲ ಈ ದಕ್ಷಿಣ ದಲ್ಲೇ! ಕನಕದಾಸರು ಅಷ್ಟಲ್ಲದೇ ಹೇಳಿದರೆ! ” ಕುಲ ಕುಲವೆನ್ನುತಿ ಹರಯ್ಯ ! ಕುಲವಾವುದು “ನಮ್ಮ ಶ್ರೀ ಹರಿಭಕ್ತರಿಗೆ’ ಎನ್ನುವನು. ಅವನ ವಾಚಾಳತ್ವನೋಡಿ ಅನೇಕರು’ “ನೀವೇಹರಿ ಕಥೆ ಮಾಡ ಬಾರದು.” ಎನ್ನುವರು. “ಇರಲಿ ಕಾಲ ಬರುತ್ತೆ? ಎನ್ನುವನು. ಅವನಿಗೂ ಎಷ್ಟೋವೇಳೆ ಅನ್ನಿಸಿತ್ತು. ಆದರೆ ಆಗಲಿ ಏನವಸರ ಎನ್ನುವ ಸ್ವಭಾವ.
ಅಂತೂ ಅವನು ದಿನವೂ ಪತ್ರಿಕೆ ಓದುವನು. ಮೈಸೂರಿನ ಸಾಧ್ವಿ, ವೃತ್ತಾಂತ ಪತ್ರಿಕೆಗಳಿರಲಿ, ಪೂನಾದ ಕೇಸರಿ, ಅಲಹಾಬಾದಿನ ಆಜ್, ಕೂಡ ತರಿಸುವನು : ಓದುವನು : ತಾನು ಓದಿದ್ದು ಎಲ್ಲರಿಗೂ ಹೇಳಬೇಕು ಎಂದು ಅವನಿಗೂ ಆಸೆ. ಆ ಆಸೆ ಒಂದೊಂದು ಸಲ ಫಲಿಸುತ್ತಿತ್ತು.
ಒಂದು ದಿವಸ ಅವನು ತಿಲಕರ ವೃತ್ತಾಂತ ಹೇಳುವುದಕ್ಕೆ ಆರಂಭಿಸಿದ್ದಾನೆ. ಅವರು ಗೀತೆಯನ್ನು ಎಲ್ಲರೂ ಓದಬೇಕು ಎನ್ನು ತ್ತಾರೆ. “ಗೀತೆ ಓದಿದರೆ ಮರಣದಭಯ ತಪ್ಪುತ್ತದೆ. ಮನುಷ್ಯನು ಧೀರನಾಗುತ್ತಾನೆ” ಎಂದು ಹೇಳುತ್ತಿದ್ದಾನೆ. ಒಬ್ಬನು ಎದ್ದು “ಏನು ಸ್ವಾಮಿಗಳೇ! ಗೀತೆ ಯಾವಾಗಲೂ ಮಡಿಯಲ್ಲಿ ಓದಬೇಕು. ಅದಕೆ ಉಪದೇಶವಾಗಬೇಕು, ಅಂತಾರಲ್ಲ? ? ಎಂದು ಕೇಳಿದ. ಅದಕ್ಕೆ ಸರಿಯಾಗಿ ಏನು ಹೇಳಬೇಕೋ ತಿಳಿಯಲಿಲ್ಲ. ಆದರೂ ಅಲ್ಲಿಗೆ ಬಿಟ್ಟರೆ ತನಗೆ ಅವಮಾನ ಎಂದು, ಏನೋ ಒಂಡು ಭಿರ್ಕಾ ಹೊಡೆದ : ” ನೋಡಿ. ಗೀತಾ ಅನ್ನೋದು ರುದ್ರಾಕ್ಷಿ ಹಾಗೆ. ಅಥವ ವೀರಶೈವರ ಲಿಂಗದ ಹಾಗೆ. ಅವರು ಹೇಳುವಂತೆ ಲಿಂಗ ಯಾವಾಗಲೂ ಅಂಗದಲ್ಲಿ ಇದ್ದೇ ಇರಬೇಕು ಎನ್ನುವಂತೆ ಗೀತಾ ಯಾವಾಗಲೂ ನಿಮ್ಮ ಹೃದಯದಲ್ಲಿ ಇರಲೇಬೇಕು” ಎಂದ.
ಪ್ರಶ್ನೆ ಕೇಳಿದೆವನಿಗೂ ಅಮ ಸರಿಯೋ ತಪ್ಪೋ ಗೊತ್ತಿಲ್ಲ. ಇನ್ನು ಮುಂದೆ ಕೇಳಿದರೆ ತನ್ನ ಅಜ್ಞಾನ ಎಲ್ಲಿ ಪ್ರಕಟವಾಗುತ್ತೋ ಅಂತ ” ಆಹಹಾ! ಎಂಥಾ ಮಾತು ಎಂಥು ‘ಮಾತು ! ತಾವು ಹೇಳಿದ್ದು ಬಹಳ ಸರಿ ಬಹಳ ಸರಿ” ಎಂದು ಶರಣು ಮಾಡಿ ಕೂತು ಬಿಟ್ಟ.
ಅಂದಿನಿಂದ ಶಂಭುರಾಮಯ್ಯನ ಕೀರ್ತಿ ಹೆಚ್ಚಿತು. ಸಂಜೆ ಆರು ಗಂಟೆಯಿಂದ ಎಂಟು ಗಂಟೆಯವರೆಗೂ ಸುತ್ತಮುತ್ತಿನವರೆಲ್ಲರೂ ಅಲ್ಲಿಗೆ ಬಂದು ಹರಟೆ ಹೊಡೆಯುವರು. ಆದರೆ ಶಂಭುರಾಮಯ್ಯನ ಹರಟೆ ಪೇಪರುಗಳಿಗೆ ಹೆಚ್ಚು ಸಂಬಂಧ ಪಟ್ಟುದು. ಅಲ್ಲಿ ಹೀಗಂತೆ, ಇಲ್ಲಿ ಹೀಗಂತೆ, ಎನ್ನುವುದೇ ಹೆಚ್ಚು.
ಮಲ್ಲಣ್ಣನು ಅಲ್ಲಿಗೆ ಹೋಗುವುದಕ್ಕೆ ಆರಂಭಿಸಿದ. ಮೊದ ಮೊದಲು ಸುಮ್ಮನಿರುತ್ತಿ ದ್ಹವನು ಬರುಬರುತ್ತಾ ಹೊಸ ನೆಲದಲ್ಲಿ ಹಾಕಿದ ಗಿಡದಂತೆ ಮೆಲ್ಲಗೆ ಚಿಗುತುಕೊಂಡ. ಇವನ ಹರಟೆಗೂ ಅಲ್ಲಿ ಒಂದು ಸ್ಥಾನ ಸಿಕ್ಕಿತು. ಶಂಭುರಾಮಯ್ಯನ ಪೇಪರ್ ಹರಟೆ ಜೊತೆಗೆ ಮಲ್ಲಣ್ಣನ ನ ತತ್ವದ ಹರಟೆಯೂ ಆರಂಭವಾಯಿತು. ಯಾವಾ ಗಲೂ ನಿಜಗುಣರು, ಚಿಂದಾನಂದರು, ಸಣ್ಣಪ್ಪನವರು, ಇವರುಗಳ ಯಾವುದಾದರೂ ಒಂದು ತತ್ತ ಹಾಗೆನ್ನುವನು. ಸೇರಿದ್ದ ಜನ ಅರ್ಥ ವಾಗಲ, ಅರ್ಥವಾಗದಿರಲ್ಲಿ ಭೇಷ್ ಭೇಷ್ ಎಂದು ತಲೆದೂಗುವರು. ಬರುಬರುತ್ತ ಮಲ್ಲಣ್ಣನೂ ಶಂಭು ರಾಮಯ್ಯನೂ ಬಹಳ ಸ್ನೇಹಿ ತರಾದರು. ಇಬ್ಬರ ಸ್ನೇಹವೂ ಬಲಿತು ಕೆಂಪಮ್ಮ ಆನಂದ ಇಬ್ಬರೂ ಇವರ ಮನೆಗೆ ಅವರು ಅವರ ಮನೆಗೆ ಇವರು ಬಂದು ಹೋಗುವಂತೂ ಆಯಿತು.
ಒಂದು ದಿನ ಅವರು ಸಂಜೆ ಪುರಾಣ ಮುಗಿಸಿದ ಮೇಲೆ “ಬನ್ನಿ ನಮ್ಮ ಮನೆಗೆ ಹೋಗೋವ” ಎಂದು ಕೆಂಪಿಯು ಆನಂದಮ್ಮನನ್ನು’ ಕರೆದಳು.
“ಎಲ್ಲಮ್ಮಾ? ರಾತ್ರಿ ಆಡುಗೆ ಆಗ ಬೇಡವೆ?”
“ಆಯ್ತದೆ. ತಪ್ಪಿದ್ದು ಯಾವೊತ್ತು ? ಬನ್ನಿ. ಅಡಕೆಲೆ ತಕೊಂಡು ಬರೋರಂತೆ! ”
ದಾರಿಯಲ್ಲಿ ಹೋಗುತ್ತ ಕೆಂಪಿಯು ಕೇಳಿದಳು. “ಏನವ್ವಾ ನಿಮಗೆ ಮಕ್ಕಳಾಗಲಿಲ್ಲವಾ ? ?
ಆನಂದಮ್ಮನಿಗೆ ಆ ಪ್ರಶ್ನೆಗೆ ಉತ್ತರ ಥಟ್ಟನೆ ಹೇಳಲಾಗಲಿಲ್ಲ. ಒಂದು ಗಳಿಗೆ ತಡೆದು ಹೇಳಿದಳು: “ಅದೆಲ್ಲ ಯಾಕೆ ಕೇಳುತ್ತೀರಿ ಕೆಂಪಮ್ಮ! ಇದ್ದಿದ್ದರೆ ನನಗೂ ಒಂದು ಹೆಣ್ಣು ಮಗು ಸುಮಾರು ಹತ್ತು ವರುಷದ್ದು ಇರಬೇಕಾಗಿತ್ತು. ಏನೋ ಹಣೆಯಲ್ಲಿ ಬರೆಯಲಿಲ್ಲ! ಏನು ಮಾಡೋದು ?”
“ಅಂದರೆ ಹೋಗಿ ಬುಡುತಾ ? ”
“ಅಯ್ಯೋ ಪಾಪ! ಎಲ್ಲಾದರೂ ಚೆನ್ನಾಗಿರಲಿ. ಆಗ ಹೆರಿಗೇಲಿ ಕಷ್ಟವಾಯಿತು. ನನಗೆ ಹುಷಾರಾಗೋಕೆ ಮೂರು ತಿಂಗ ಳಾಯಿತು. ಅದುವರೆಗೂ ಯಾರ ಹತ್ತಿರಲೋ ನೋಡಿಕೊಳ್ಳೋಕೆ ಅಂತ ಮಗು ಬಿಟ್ಟಿದ್ದೆ. ಅವರು ರಾಮೇಶ್ವರದ ಯಾತ್ರಿ ಹೋಗಿ ಬರುತ್ತೀವಂತ ಹೋಗುವಾಗ ಮಗೂನೂ ಕಕೆದುಕೊಂಡು ಹೋದರು: ಅದನ್ನು ಮತ್ತೆ ನಮಗೆ ಕೊಡಲೇ ಇಲ್ಲ. ನಾವೂ ಯತ್ನವಿಲ್ಲದೆ ಉತ್ತರ ದೇಶಕ್ಕೆ ಹೋಗಬೇಕಾಗಿ ಬಂತು. ಏನೇನೊ ಆಯಿತು. ನಮಗೆ ಮತ್ತೆ ಮಗು ಕೈಗೆ ಸಿಕ್ಕಲೇ ಇಲ್ಲ.”
ಕೆಂಪಮ್ಮ ಸಹಜವಾಗಿ ಕೇಳಿದಳು: “ಹಿಂಗೂ ಉಂಟಾ?” ಆನಂದಮ್ಮನಿಗೆ ತನ್ನ ಮಾತಿನ ಸುಳ್ಳು ಅವಳಿಗೂ ಗೊತ್ತಾಯಿತೋ ಏನೋ ಅನ್ನಿಸಿ ಹೇಳಿದಳು: “ನಾವೂ ಪೋಲೀಸಿಗೆ ಹೇಳೋಣ ಅಂದು ಕೊಂಡೆವು. ಆದರೆ, ಅವರು ನಮಗೆ ಮಾಡಿದ ಉಪಕಾರಕ್ಕೆ ನಾವು ಅವರನ್ನು ಕೋರ್ಟಿಗೆಳೆಯುವುದು ಬೇಡ. ಒಂದು ಕೊಟ್ಟ ದೇವರು ಇನ್ನೊಂದು ಕೊಡಲಾರನೇ ಎನ್ನಿಸಿತು. ಸುಮ್ಮನಾದೆವು.?
“ನಮ್ಮದೂ ಅಂಗೇ ಆಯಿತು ಕಣವ್ವ ! ಏನೋ ಹೊಟ್ಟೇಲಂತೂ ಇಲ್ಲ. ಓಗಲಿ ಅಂತ ಒಂದು ಮೊಗಾ ತಕೊಂಡು ಸಾಕದೋ. ಆ ಮೊಗಾನಾದರೂ ಮೊಗವಲ್ಲ ಕಣವ್ವ, ಅದರ ಮಾತೋ? ಬುದ್ದಿಯೋ? ರೂಪಾವೋ? ಒಂದೊಂದಾ? ಅದೇಳ ಬೇಕೂಂದ್ರೆ ಒಂದು ದಿನವೆಲ್ಲಾ ಬೇಕು. ಏನೋ ದೇವರು ಹೂವಿಲ್ಲ ಅಂದ್ಳೊಂಡರೆ ಮಲ್ಲಿಗೇ ಹೂವೇ ಕೊಟ್ಟ೦ಗೆ ಆಯಿತು. ಆದರೇನು ? ಕೊಟ್ಟ ದೇವರು ಅವಳ….?
ಕೆಂಪಿಯ ಬಾಯಲ್ಲಿ ಮಾತು ಹೊರಡದೇ ಹೋಯಿತು – ಆನಂದಮ್ಮನು “ಏನಾಯಿತಮ್ಮ]? ಮಗುವಿಗೆ ಏನಾದರೂ ಕೆಟ್ಟ ದಾಯಿತೆ್ ” ಎಂದು ಮರುಕದಿಂದ ಕೇಳಿದಳು.
“ಮೊಗಾ ಏನೋ ಚೆನ್ನಾಗದೆ : ಆದರೆ. ನಮಗಿಲ್ಲದೇ ಹೋಯಿತು. ನಮ್ಮ ಖಾವಂದರ ಕಣ್ಣಿಗೆ ಬಿತ್ತು. ಅದ್ನ ಅವರೇ ಮಾಡಿಕೊಂಡೇ ಬುಟ್ಟರು.”
“ಅಂದರೆ ಅವರು ಬಲವಂತ ಮಾಡಿ ಕಿತ್ತುಕೊಂಡು ಬಿಟ್ಟರೆ?
“ಇಲ್ಲ ಕಣವ್ವ, ಮದುವೇನೆ ಮಾಡಿಕೊಂಡು ಬುಟ್ಟರು. ಮೊಗಾ ಹೆಂಗದೇ ಅಂತೀರಿ. ಚಂದಮಾಮ ಅನ್ನಿ. ಮಲ್ಲಿ ಅಂತ ಹೆಸರಿಟ್ಟದ್ದೋ? ಮಲ್ಲಿಗೆ ಮೊಗ್ಗೋ ನಮ್ಮ ಮಲ್ಲೀನೋ? ಒದೊಂದು ದಿನ ಹಿತ್ತಲಲ್ಲಿ ಹುಲ್ಲುಮೆದೇಲಿ ಕೂತುತಕೊಂಡು ಒಂದು ಹುಲ್ಲುಕಡ್ಡಿ ಕಚ್ಚಿಕೊಂಡು ನನ್ನ ಮೊಗ ತತ್ವ ಹೇಳುತಾ ಒರಗಿ ಕೊಂಡಿದ್ದರೆ, ಎಲ್ಲ ನನ್ನ ಮೊಗಕ್ಕೆ ಕಣ್ಣೆಸರಾದೀತೋ ಅನ್ನೋದು ಕಣವ್ವಾ ; ಈಗ ಹದಿನೈದು ದಿನದಲ್ಲಿ ಬಂದಿದ್ಲು. ಈಸಲ ಬರುತಲೂ ನಿಮ್ಗೆ ತೋರ್ತೀನಿ. ಈಸಲ, ಇಲ್ಲಿ ಕನ್ನಂಬಾಡಿ ಕಟ್ಟುತವರಲ್ಲಾ; ನೋಡೋಕೆ “ನಮ್ಮ ಖಾವಂದಿರು, ರಾಣಿಯೋರು ನಮ್ಮಮೊಗಾ, ಎಲ್ಲರೂ ಬರುತಾರೆ. ನಾವೂ ಹೋಯ್ತೀವಿ. ನೀವು ಬನ್ನಿ. ಜೊತೇನೂ ಇದ್ದಂಗಾಯ್ತು ; ಕೆಂಪೀಮಾತು ನಿಜವೋ ಸುಳ್ಳೋ ನೀವೇ ಏಳೋರಂತೆ ?”
ಮನೆಗೆ ಕರೆದುಕೊಂಡು ಬಂದು ಒಂದು ಗಳಿಗೆ ಕುಳಿರಿಸಿ ಕೊಂಡಿದ್ದು ಕೆಂಪಿಯು ಒಂದುಚಿಪ್ಪು ರಸಬಾಳೆಹಣ್ಣು, ಒಂದುಕುಚ್ಚು ಹೂವ್ವು, ಸೊಗಸಾದ ಎಲೆ ಅಡಿಕೆ, ಎಲ್ಲವನ್ನೂ ಕೊಟ್ಟು ಆನಂದಮ್ಮ ನನ್ನು ಕಳುಹಿಸಿಕೊಟ್ಟಳು.
ಆನಂದಮ್ಮ; ಪ ರಸಬಾಳೆಹೆಣ್ಣು ನೋಡಿ “ಏನು ಕೆಂಪಮ್ಮ? ಈ ಹಣ್ಣು ಎಲ್ಲಿಂದ ತರಿಸಿದಿರಿ ?” ಎಂದಳು.
“ಅಂಯ್ ; ನಾವು ತರಿಸೋದೂ ಉಂಟಾ ಅವ್ವ ; ನಮ್ಮ ಮಗಳ ಊರಿಂದ ಖಾವಂದರು ಕಳುಹಿಸಿಕೊಟಿದ್ದು. ”
ಆನಂದಮಗಮನಿಗೆ ಮಲ್ಲಿ, ಖಾವಂದರು, ರಾಣಿ ಎಂಬ ಹೆಸರುಗಳು ಗೊತ್ತಾದರೂ ಅವರವರವರ ಸಂಬಂಧ ಅವರು ಯಾರು ಎನ್ನುವುದು ಯಾವುದೂ ಗೊತ್ತಾಗಲಿಲ್ಲ. ಕೇಳಬೇಕು ತಿಳಿದುಕೊಳ್ಳಬೇಕು ಎನ್ನುವ ಆಸೆ, ಆದರೂ ಏನೂ ಇಲ್ಲದಂತೆ ಸಮಾಧಾನದಿಂದ “ಹಾಗಾ ದರೆ ಕನ್ನಂಬಾಡಿಗೆ ಯಾವಾಗ ಹೋಗುತ್ತೀರ?” ಎಂದು ಕೇಳಿದಳು.
“ನಮ್ಮ ಖಾವಂದ್ರು ದಿವಾನರಿಗೆ ಬೋ ಬೇಕಾದವರು ಕಣ್ರವ್ವ ; ಅವರು ನೀವು ಖಂಡಿತ ಬರಬೇಕು ಅಂತ ಏಳವ್ರಂತೆ. ಅವರು ಬಂದಾಗ ನಾನೇ ಕರೆಯೋಕೆ ಬತ್ತೀನಿ. ತಾವೂ ಬನ್ನಿ. ಅಯ್ಯನೋರಿಗೂ ಏಳಿರಿ. ಎಲ್ಲರೂ ಓಗೋವ.”
” ಹಾಗಂದರೆ ನಿಮ್ಮ ಖಾವಂದ್ರು ಯಾರು?” ಆನಂದಮ್ಮನು ತಡೆಯದೆ ಕೇಳಿಯೇಬಿಟ್ಟಳು.
“ಮಜ್ಜಿಗೇಹಳ್ಳಿ ನಾಯಕರು ಅಂತ ನೀವು ಕೇಳಿಲ್ಲವಾ?”
ಉತ್ತರವಾಗಿ ಬಂದ ಪ್ರಶ್ನೆ ಆನಂದಮ್ಮನಿಗೆ ಏನೋ ನೆನೆಪಿಗೆ ತಂತು. ಆ ನೆನೆಪನ್ನು ಮುಚ್ಚಿಕೊಳ್ಳುವಳಂತೆ “ಹೂಂ. ಅದು ಯಾರೋ ಶ್ರೀಮಂತರು ಆ ಹೆಸರಿನವರು ಇದ್ದಾರಂತೆ, ಕೇಳಿದ್ದೀನಿ.”
“ಸೀಮಂತರು ? ಚೆನ್ನಾ ಗಿ ಏಳಿದ್ರಿ ? ಅವರ ಮನೇಲಿ ಕೊಳಗ ದಲ್ಲಿ ಅಳೆಯೋಷ್ಟು ಹಣ ಅದೆ ಕಣವ್ವ ; ನಮ್ಮ ಮಲ್ಲೀಗೆ ಎರಡು ಮೂರು ತೊಡವೆ ಒಡವೆ ಇಟ್ಟವ್ರೆ ?”
“ಹಾಗಾದರೆ ಮದುವೆ ಮಾಡಿಕೊಂಡರು ಅನ್ನಿ?
ಕೆಂಪೀಗೆ ತನ್ನ ಮಗಳಿಗೆ ಬಂದಿಹಾಕಿದರು ಎನ್ನುವುದು ಇಷ್ಟವಿಲ್ಲ. ಅದರಿಂದ “ಹೂಂ” ಎಂದಳು. ನಂಬಿಕೆ ಬರಲೆಂದೋ ಏನೋ ನಕ್ಕಳು.
“ಹಾಗಾದಕೆ ಆ ನೊಗ.ವಿಗೆ ಎಷ್ಟು ವರುಷ ? ”
” ಹತ್ತು ತುಂಬ್ತದೆ ಅನ್ನಿ. ”
ಅನಂದಮ್ಮನು ಆ ಮಾತು ಕೇಳಿ ಉರಿಉರಿಯಾಗಬೇಕಾಗಿತ್ತು. ಮಚ್ಚಿಗೆಹಳ್ಳಿ, ಹತ್ತುವರುಷ, ತಕೊಂಡಮಗು, ಎಂಬ ಆ ಮಾತುಗ ಳೆಲ್ಲಾ ಏನೇನೋ ಯೋಚನೆಗಳನ್ನು ತಲೆಗೆ ತುಂಬಿದಂತಾಗಿ, “ಇನ್ನು ಹೊತ್ತಾಯಿತು. ಇನ್ನೊ೦ದು ದಿವಸ ಮಾತಿಗೆ ಕುಳಿತುಕೊಳ್ಳೋಣ ಎಂದು ಅವಸರವಾಗಿ ಹೊರಟು ಹೋದಳು.
ಯಾವನಾದರೂ ಮನಶ್ಶಾಸ್ತ್ರಜ್ಞನಿದ್ದಿದ್ದರೆ ಆಕೆಯ ಅವಸರದಲ್ಲಿ ಏನೇನು ಕಂಡು ಹೇಳುತ್ತಿದ್ದನೋ ?
ಆನಂದಮ್ಮನು ಹೋದ ಅಷ್ಟು ಹೊತ್ತಿಗೆ, ಮನವಾರ್ತೆ ನಂಜಪ್ಪನು ಉಗ್ರಾಣದ ಗಾಡಿಯನ್ನು ಹೊಡೆಯಿಸಿಕೊಂಡು ಬಂದನು. “ಬೆಳಗಾಗ ಖಾವಂದರು ಜನಾನಾ ಬರುತ್ತಾರೆ. ಮಧ್ಯಾಹ್ನ ಊಟ ಮಾಡಿಕೊಂಡು ಮೂರುಗಂಟೆ ಹೊತ್ತಿಗೆ ಕನ್ನಂಬಾಡಿ ನೋಡುವು ದಕ್ಕೆ ಹೋಗುವುದು ಎಂದು ಗೊತ್ತಾಗಿದೆ ” ಎಂದು ಹೇಳಿದನು.
ಕೆಂಪೀಗೆ ಮಗಳು ಬರುವಳು ಎಂಬ ಸಂತೋಷ ಹಿಡಿಸಲಾರ ದಷ್ಟು. ಮಲ್ಲಣ್ಣನಿಗೆ ಮಗಳನ್ನು ನೋಡುವುದಕ್ಕಿಂತ ಖಾವಂದ್ರ ದರ್ಶನದಲ್ಲಿ ಹೆಚ್ಚು ಆಸಕ್ತಿ.
*****