ಸುಖವೆಲ್ಲಿ!

ಸಾಗರದ ಅಲೆ ಅಲೆಗಳೆಲ್ಲ
ನಿನ್ನ ನಿನಾದವೆ ನುಡಿಸುತ್ತಿವೆ
ಕೋಗಿಲೆ ತನ್ನ ಕೊರಳಿನ ದನಿಯಲಿ
ನಿನ್ನ ರೂಪಗಳ ಗುನಿಗುನಿಸುತ್ತಿವೆ

ತಾರೆಗಳೆಲ್ಲ ಕೃಷ್ಣ ಚವತ್ತಿಗೆ
ಚಂದ್ರನ ಕಾಣಲು ಪರಿತಪಿಸುವಂತೆ
ಲೋಕದ ಜನರ ಮಧ್ಯನಾನು
ನಿನ್ನ ದರುಶನಕ್ಕಾಗಿ ನಾ ನಿತ್ಯ

ನೀಲಿಗಗನದಲಿ ಮೋಡಗಳು
ಕಪ್ಪಾಗಿ ಅಬ್ಬರಿಸುವ ತೇರ
ನನ್ನ ಆತ್ಮದ ಪರಿಛಾಯೆಯಲಿ
ಅವಗುಣಮನ ಕಾಡುತ್ತಿದೆ ಒಳಹೊರ

ನಿನ್ನ ಕೃಪೆ ಇರದೆ ನಾನು
ಒಂದು ಹೆಜ್ಜೆಯ ಮುಂದಿಡಲಾರೆ
ನೀನು ದಾರಿ ತೋರದೆ ನಾನು
ನಿನ್ನ ಪ್ರಾಪ್ತಿಗೆ ದುಡಿಯಲಾರೆ

ಅಂಧಕಾರದಲ್ಲಿರುವ ಮನೆಯಲಿ
ಜ್ಯೋತಿ ಇರದೆ ಶೋಭೆ ಎಲ್ಲಿ
ನಿನ್ನ ನಾಮ ಪಠಿಸಿದ ತನುವು
ಮಾಣಿಕ್ಯ ವಿಠಲನೆಯದೆ ಸುಖವೆಲ್ಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೧
Next post ಮಲ್ಲಿ – ೧೯

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…