ಬದುಕು ಇದು ಎಂಥ ಬದುಕು
ದೇವರ ಧ್ಯಾನಿಸಿದ ಈ ಬದುಕು
ಬದುಕಿಗೆ ಇಲ್ಲಿ ಕಿಂಚಿತ್ತು ಮರುಕು
ದೇವರ ಧ್ಯಾನಿಸದೆ ಕಾಯ ಮುರುಕು
ನನ್ನೆದೆ ತುಂಬಲಿ ಕೃಷ್ಣನ ರೂಪ
ನನ್ನ ಕರ್‍ಣದಲಿ ಅವನದೆ ಪದರೂಪ
ಆ ಕಣ್ಣಗಳಲಿ ಪ್ರೀತಿಯ ಸಲ್ಲಾಪ
ಜೀವ್ಹೆಯಲ್ಲಿರಲಿ ನಿತ್ಯ ಕೃಷ್ಣನ ಜಪ
ಎತ್ತೆತ್ತ ಆಲಿಸಲಿ ಮುರಲಿನಾದ
ಸುತ್ತಲೂ ಬಯಸಲಿ ನಾಮ ಸ್ವಾದ
ಅವನ ನೆನೆಯದ ಗಳಿಗೆ ವಿಷಾದ
ಅವನಿರದ ತಾಣವೆಲ್ಲ ಪ್ರಮಾದ
ಮಂಗಳ ಮಯವಿರಲಿ ಮನ
ಆತ್ಮ ಸುಖದಿ ಮೆರೆಯಲಿ ತನ
ಮರೆತು ಹೋಗಲಿ ಲೋಕದ ಜನ
ಮಾಣಿಕ್ಯ ವಿಠಲನೇ ಜೀವನ
*****