ಎರಡು ಮದುವೆಗಳು

ಎರಡು ಮದುವೆಗಳು

ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು ಮಾಡಬೇಕೆಂದು ತೋಚದೆ ಕೈ ಮೇಲೆ ತಲೆ ಹೊತ್ತು ಕುಳಿತಿದ್ದರು.

ಕಡಲ ತೀರದ ಒರಿಸ್ಸಾ ಭುವನೇಶ್ವರದ ಹಳ್ಳಿಗಳಲ್ಲಿ ಒಂದು ವಿಚಿತ್ರ ಸಂಪ್ರದಾಯವಿತ್ತು. ಮನುಷ್ಯನಿಗೆ ಪ್ರಕೃತಿಯು ಕೈ ಕೊಟ್ಟಾಗ, ಅದನ್ನೊಲಿಸಲು ಆತ ಏನನ್ನೂ ಮಾಡಲು ಸಿದ್ಧವಾಗುತ್ತಾನೆ. ಹಳ್ಳಿಯ ಮುಖಂಡರು ಪಂಚಾಯಿತಿ ಸೇರಿ ಒಂದು ತೀರ್‍ಮಾನಕ್ಕೆ ಬಂದರು. ಒಂದು ವಿಚಿತ್ರ ಸಂಪ್ರದಾಯದ ಮದುವೆ ನಡೆಸಬೇಕಿತ್ತು. ಅದು ಮನುಷ್ಯರದಲ್ಲ ವಟಗುಟ್ಟುವ ಕಪ್ಪೆಗಳದ್ದು. ಅದು ಮಾಡಿಬಿಡೋಣ ಅಂತ ನಿರ್ಧರಿಸಿದರು. ಮುಗ್ಧ ಹಳ್ಳಿಯ ಜನರು ಒಟ್ಟು ಸೇರಿ ಎರಡು ಗುಂಪುಗಳಾದರು. ಒಂದು ಗುಂಪು (ಕನ್ಯಾ ಪಾಕ್ಯ) ಹೆಣ್ಣಿನ ಕಡೆಯವರು ಮದುವಣಗಿತ್ತಿ ಕಪ್ಪೆಯನ್ನು ಹಳ್ಳಿಯ ಕೊಳದಿಂದ ಕರೆದು ತರಲು ನಿರ್ಧರಿಸಿತು. ಮತ್ತೊಂದು ಗುಂಪು (ಖಾರಾ ಪಾಕ್ಯಾನ) ಗಂಡಿನ ಕಡೆಯವರು ಇನ್ನೊಂದು ಕೊಳದಿಂದ ಮದುಮಗ ಕಪ್ಪೆಯನ್ನು ತಂದರು. ಈ ಕಪ್ಪೆಗಳ ಮದುವೆಯನ್ನು ಮಳೆಗರೆಯುವ ಇಂದ್ರದೇವನನ್ನು ಒಲಿಸುವುದಕ್ಕಾಗಿ ಮಾಡಲು ನಿಶ್ಚಯ ಮಾಡಿಕೊಂಡರು.

ಪುರೋಹಿತರನ್ನು ಕೇಳಿ ಒಂದು ಶುಭದಿನ, ಶುಭಮುಹೂರ್‍ತ ನಿಶ್ಚಯಿಸಲಾಯಿತು. ದೊಡ್ಡ ಮದುವೆಯ ಹಂದರ ಸಿದ್ದವಾಯಿತು. ಮದು ಮಗಳ ಕಡೆಯವರು – ಮದುಮಗನ ಕಡೆಯುವರು ಭರದಿಂದ ಎಲ್ಲಾ ತಯಾರಿಗಳನ್ನು ಮಾಡಿ ಹಂದರದಲ್ಲಿ ಒಂದುಗೂಡಿದರು.

ಒಳ್ಳೆಯ ಭೋಜನ ಸಮಾರಂಭವು ಎರ್‍ಪಡಿಸಲಾಗಿತ್ತು. ಬಾಜಾ ಬಜಂತ್ರಿ ಓಲಗ ಡೋಲುಗಳೊಡನೆ, ಹಿಂದೂ ಮದುವೆಗಳ ಮಂತ್ರೋಚ್ಚಾರಣೆಯನ್ನೊಳಗೊಂಡು ಜಿಗಿಯುವ ಕಪ್ಪೆಗಳನ್ನು ಸೆರೆಹಿಡಿದು ಹಿಂಸಿಸಿ ಅವುಗಳಿಗೆ ದಾಂಪತ್ಯದ ಗಂಟನ್ನು ಬಿಗಿದರು. ಹರ್‍ಷೋದ್ಗಾರಗಳೊಂದಿಗೆ ಎಲ್ಲರೂ ಮೃಷ್ಟಾನ ಭೋಜನವನ್ನು ಸವೆದರು. ಇಂದ್ರ ದೇವರನ್ನು ತೃಪ್ತಿಪಡಿಸಿದ ಭಾವದಿಂದ ಮಳೆ ಬಂದೇ ಬರುತ್ತದೆ ಎಂಬ ದೃಢನಂಬಿಕೆ ಇಟ್ಟಿದ್ದರು.

ಕಪ್ಪೆ ದಂಪತಿಗಳನ್ನು ಮಧುಚಂದ್ರಕ್ಕಾಗಿ, ಕೊಳದಲ್ಲಿ ವಿಹಾರಕ್ಕಾಗಿ ಬೀಳ್ಕೊಟ್ಟ ಹಳ್ಳಿಯವರಲ್ಲಿ ಒಂದು ನಿಶ್ಚಿಂತ ಭಾವ ತುಂಬಿಕೊಂಡಿತ್ತು.

ಮನಸ್ಸಿನಂತೆ ಮಹದೇವ ಎಂಬಂತೆ ಅವರ ನಂಬಿಕೆಯೋ, ಸಕಾರಾತ್ಮಚಿಂತನೆಯೋ, ಇಲ್ಲ ವಿಚಿತ್ರ ಸಂಪ್ರದಾಯವೋ, ಇಲ್ಲ ಎಲ್ಲಾ ಕಾಕತಾಳ ನ್ಯಾಯವೋ ಎಂಬಂತೆ ಮಾರನೆಯ ದಿನ ಭೋರ್‍ಗರೆದು ಒಳ್ಳೆಯ ವರ್‍ಷಧಾರೆಯಾಯಿತು. ಹಳ್ಳಿ ರೈತ ಜನರ ಹೃದಯ ಸಂತಸದಿಂದ ತುಂಬಿ ಹರಿಯಿತು. ಅವರ ನಂಬಿಕೆ, ಅವರ ಪ್ರಾರ್ಥನೆ, ಅವರ ಸಂಪ್ರದಾಯ ಅವರ ಕೈಬಿಡಲಿಲ್ಲ. ಅದೇ ಸಮಯಕ್ಕೆ ಹವಾಮಾನದ ಇಲಾಖೆಯು “ಇನ್ನು ೪೮ ಗಂಟೆಗಳು ಸತತ ಮಳೆ ಸುರಿಯಲಿದೆ” ಎಂದು ಘೋಷಿಸಿದರು. ಅಂತೂ ವಟವಟವೆಂದು ನೆಮ್ಮದಿ ಕೆಡಿಸುವ ಕಪ್ಪೆಗಳು ಮುಂಗಾರು ಮಳೆಯನ್ನು ಸುರಿಸಿ ಎಲ್ಲರಿಗೂ ಹರ್‍ಷವನ್ನು ನೆಮ್ಮದಿಯನ್ನು ಕೊಟ್ಟಿದ್ದವು.

ಕಪ್ಪೆಗಳ ಮದುವೆ ಆದ ಎರಡು ದಿನಕ್ಕೆ ಮತ್ತೊಂದು ಮದುವೆ ಅದೇ ಹಳ್ಳಿಯಲ್ಲಿ ನಡೆಯಿತು. ಅದು ಹಳ್ಳಿಯ ರೈತನ ಮಗಳ ಮದುವೆ. ಪಕ್ಕದ ಹಳ್ಳಿಯಿಂದ ಮದುಮಗ ಅವನ ತಂದೆ ತಾಯಿ ಬಂಧು ಬಳಗ ಎಲ್ಲರೂ ಬಂದಿದ್ದರು. ಇಬ್ಬರದೂ ಪ್ರತಿಷ್ಠಿತ ಕುಟುಂಬಗಳು. ಹಳ್ಳಿಯಲ್ಲಿ ದೊಡ್ಡಮನೆ, ಹೊಲಗದ್ದೆ, ದನಕರುಗಳನ್ನು ಹೊಂದಿ ಆಸ್ತಿವಂತ ರೈತರು ಎಂದೆನಿಸಿಕೊಂಡವರು. ಮದುವೆಯ ಮಂಟಪ ಅತ್ಯಂತ ಸುಂದರವಾಗಿ ಅಲಂಕೃತವಾಗಿತ್ತು. ಹೆಣ್ಣು ಗಂಡಿನ ಕಡೆ ಅನೇಕ ಜನರು ಬಂಧುಬಳಗದವರು, ಸ್ನೇಹಿತರು ಸೇರಿದ್ದರು. ಎಲ್ಲವೂ ಸುಗಮವಾಗಿಯೇ ಸಾಗಿತ್ತು. ಮದುಮಗ ಮದುಮಗಳಿಗೆ ಸುಮುಹೂರ್ತದಲ್ಲಿ ತಾಳಿ ಕಟ್ಟಿಯೂ ಆಗಿತ್ತು. ಮದುಮಗನಿಗೆ ಕೊಡುವ ವರೋಪಚಾರ ಎಲ್ಲದರಲ್ಲೂ ತೃಪ್ತಿಯಾಗಿ ಎಲ್ಲರೂ ಸಂತಷವಾಗಿಯೇ ಇದ್ದರು. ಆರತಿ ಅಕ್ಷತೆಯೂ ಮುಗಿದಿತ್ತು, ಇನ್ನ ಸಾಯಂಕಾಲ ಎಲ್ಲ ಮುಗಿಸಿ ಹೆಣ್ಣು ಒಪ್ಪಿಸಿ ಎಲ್ಲರೂ ತೆರಳುವವರಿದ್ದರು. ಅಷ್ಟರಲ್ಲಿ ಒಂದು ಕಿಡಿ ಬಿದ್ದು ಬೆಂಕಿ ಹರಡುವಂತೆ ಒಂದು ಕ್ಷುಲ್ಲಕ ಕಾರಣಕ್ಕಾಗಿ, ವಾದ, ಜಗಳ ಕದನ ಶುರುವಾಯಿತು. “ಮದುಮಗಳ ಕಡೆಯವರು ನಮಗೆ ಸರಿಯಾದ ಗೌರವ
ತೋರಲಿಲ್ಲ. ನಾವು ಬೆಳಿಗ್ಗಿನಿಂದಲೂ ಸುಮ್ಮನಿದ್ದವು. ಅವರ ಒರಟು ಮಾತುಗಳು ನಮಗೆ ಬಹಳ ನೋವು ಉಂಟು ಮಾಡಿದೆ” ಎಂದು ಶುರುವಾದ ಜಗಳ ಲಟಾಪಟಿಯಾಗಿ ರಣರಂಗವಾದಾಗ ಪೋಲಿಸರು ಬಂದು ಮದುವೆಯ ಮನೆಯಲ್ಲಿ ಹೊಡೆದಾಟ ಮಾಡುತ್ತಿರುವವರನ್ನು ಹಿಡಿದುಕೊಂಡು ಹೋಗಬೇಕಾಯಿತು. ಈಗ ಮದುವೆಯ ಸಂಭ್ರಮವೆಲ್ಲಾ ಕಣ್ಣೀರಾಗಿ ಹರಿಯಿತು. ಎಲ್ಲರ ಜೋಲು ಮುಖಗಳಲ್ಲಿ ನೆಮ್ಮದಿ ಹಾರಿಹೋಗಿತ್ತು. ಎಲ್ಲರೂ ಬಾಯಲ್ಲಿ ಎರಡು ದಿನದ ಹಿಂದೆ ನಡೆದ ಕಪ್ಪೆಗಳ ಮದುವೆಯಲ್ಲಿ ಇದ್ದ ಸಂಭ್ರಮವು ಮನುಷ್ಯರ ಮದುವೆಯಲ್ಲಿಸಿಗಲಿಲ್ಲ ಎಂದು ಮಾತಾಡಿಕೊಂಡರು. ಕಪ್ಪೆಗಳ ಮದುವೆಯನ್ನು ಮಾಡಿದ ನಂತರ ನಿಂತ ಮುಂಗಾರು ಮಳೆ ಬಂದಿತ್ತು. ಜನರಿಗೆ ಹೊಸ ಹುರುಷ ಉತ್ಸಾಹ ತಂದಿತ್ತು, ಅವರ ಬಾಳಿಗೆ ನೆಮ್ಮದಿ ತಂದಿತ್ತು.

ಆದರೆ ಮನುಷ್ಯರ ಈ ಮದುವೆ ಮನಸ್ಸುಗಳನ್ನು ಮುರಿದಿತ್ತು. ಮುನಿಸಿನ ಹೊರೆ ಎಲ್ಲೆಲ್ಲೂ ಕವಿದಿತ್ತು. ಬುದ್ಧಿ, ಹೃದಯವಿರುವ ಮನುಷ್ಯ ಕ್ಷುಲ್ಲಕ ವಿಷಯಗಳಿಗೆ ನೆಮ್ಮದಿ ಕಳೆದುಕೊಂಡಿದ್ದ. ಮದುವೆಗಳಲ್ಲಿ ಮದು ಮಕ್ಕಳ ಹೃದಯಗಳು ಬೆಸುಗೆ ಆಗುವುದರ ಜೊತೆಗೆ ಎರಡು ಕುಟುಂಬಗಳು ಒಂದಾಗಬೇಕಿತ್ತು. ಅಲ್ಲಿ ಹೃದಯಗಳ ನಡುವೆ ಬೆಸುಗೆ ಯಾಗಬೇಕಿತ್ತು. ಸೇತುವೆಗಳು ಮೂಡಬೇಕಿತ್ತು. ಅಲ್ಲಿ ನಡೆದದ್ದು ಅದಕ್ಕೆ ವ್ಯತಿರಿಕ್ತ ಹೊಡೆದಾಟ, ಜಗಳ, ಕದನ. ಈಗ ಮ್ಲಾನ ಮೌನ ಆವರಿಸಿತ್ತು.

ಮದುವೆ ಮಾಡಿಕೊಂಡ ಕಪ್ಪೆಗಳು ಮದುವೆ ಹಂದರದಲ್ಲಿ ಆಹ್ವಾನಿಸಿದ ಅಥಿತಿಗಳಾಗಿ ಮೌನ ಮುರಿಯಲು ಜೋಡಿಯಾಗಿ ಬಂದು ವಟವಟ ಎಂದವು.

ಅವುಗಳ ವಟವಟದಲ್ಲಿ ಜನರು ಪ್ರೀತಿ ಸಹಬಾಳ್ವೆಯ ಮಂತ್ರವನ್ನು ಕೇಳಿಸಿಕೊಂಡರು. ‘ಕಪ್ಪೆಗಳ ಮದುವೆ ಉತ್ಸಾಹರಂಗವಾಗಿತ್ತು’ ಎಂದು ಎಲ್ಲರೂ ಮನಸ್ಸಿನಲ್ಲಿ ಸಂತಸಪಟ್ಟು ಕೊಂಡರು. ಆದರೆ “ಮನುಷ್ಯನ ಮದುವೆಯು ರಣರಂಗವಾಯಿತು, ಹೀಗಾಗಬಾರದಿತ್ತು” ಎಂದುಕೊಳ್ಳುತ್ತಾ ಎಲ್ಲರೂ ತಮ್ಮ ಗೃಹಗಳಿಗೆ ಹಿಂತಿರುಗಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದ್ದು ಕಾರು?
Next post ಹೇಗೆ ದಂಡಿಸಿದ್ದಾರೆ ನೋಡಿ…

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…