ಒಮ್ಮೆ ಮುಳ್ಳು, ಹೂವು ನಡುವೆ ಹೀಗೆ ಮಾತುಕತೆ ನಡೆದಿತ್ತು.
ಹೂವೇ! “ನೋಡು ಅಲ್ಲಿ ಕಳ್ಳ ಬರುತಿದ್ದಾನೆ” ಎಂದು ಹೇಳಿದಾಗ ಹೂವು ನಗುತಲಿತ್ತು.
“ಈ ಬಾರಿ ನಿನ್ನ ಎದುರಿಗೆ ಸುಳ್ಳ ನಿಂತಿದ್ದಾನೆ” ಎಂದಾಗಲು ಹೂವು ನಗುತಲಿತ್ತು.
“ಅಯ್ಯೋ! ಹೂವೆ! ಈಗ ಕಟುಕ, ಮಳ್ಳ, ಮೋಸಗಾರ ಬರುತ್ತಿದ್ದಾರೆ ಎಂದಾಗಲು ನೀ ನಗುತ್ತಲಿರುವೆಯಲ್ಲ? ನನ್ನ ಅಸ್ತ್ರದಿಂದ ನಿನಗೆ ರಕ್ಷಣೆ ಕೊಡಲೆ?” ಎಂದಿತು ಮುಳ್ಳು.
ಹೂವು ಮುಗಳು ನಕ್ಕು ಹೇಳಿತು- “ನಿನ್ನದು ಚುಚ್ಚುವ ಧರ್ಮ, ನನ್ನದು ನಗುವ ಧರ್ಮ” ಎಂದಿತು.
ಅಷ್ಟರಲ್ಲಿ ಮಾಲಿಯ ಕೈಯಲ್ಲಿ ಹಿಡಿದ ಮಚ್ಚು ಮುಳ್ಳನ್ನು ಕೊಚ್ಚಿಹಾಕಿತು. ಅತ್ತ ಹಾದು ಬಂದ ಸಾಧು ನಗುವ ಹೂವನ್ನು ಕಿತ್ತಿ ಒಯ್ದು ದೈವ ಪಾದಕ್ಕೆ ಇಟ್ಟನು. ಹೂ ನಗುತ್ತಲೇ ಇತ್ತು ದೈವದ ಪಾದದಲ್ಲಿ.
*****