ವಿದ್ವಾಂಸ

ಇವನು ವೈಯಾಕರಣಿ, ಷಟ್ಕಾಸ್ತ್ರಕೋವಿದನು, ವೇದಪಾರಂಗತನು ವಿದ್ಯೆ ಗಳಿಸಲು ಬುದ್ದಿ - ಯನು ಬೆಳೆಸಲೆಂದಿವನು ಪಟ್ಟ ಕಷ್ಟಸಮೃದ್ಧಿ - ಯನು ಬಣ್ಣಿಸಲು ಬೇಕು ಎಂಟೆದೆಯ ಬಂಟತನ. ಗ್ರಂಥಭಾರವ ಹೊತ್ತ ಶೀಷನಿವ. ಒಂಟಿಗನು ಹಿರಿಯ ಪಾಂಡಿತ್ಯದಲಿ ಇವನು...

ಗೆಳೆಯ

ಇರ್‍ವರಿದ್ದೆವು ಗೆಳೆಯರೊಮ್ಮೆ ಕದನವ ಮಾಡಿ ನೊಂದಿರಲು ನಾನತ್ತೆ; ಗೆಳೆಯ ನಕ್ಕನು. ನನ್ನ ಮೊಗವು ಕೆಂಪೇರುತಿರೆ ಬೈಗಂತ, ಬಾವನ್ನ- ದುಸಿರನನುಭವಿಸಿದೊಲು ತಣ್ಣಗಿದ್ದನು ನೋಡಿ. ಕಂಪಿಸಿತು ನನ್ನ ಮೈ, ಗೆಳೆಯ ಗಹಗಹಿಸಿದನು ಬಿಸುಸುಯ್ದೆ; ಉಕ್ಕಿ ಬರುತಿರುವ ಕಂಬನಿ...

ತಂದೆ

ಈಕೆ ನನ್ನ ಯಶೋದೆ, ಇವಳೆನ್ನ ಸಲಹುವಳೊ ನಾನಿವಳ ಸಲಹುವೆನೋ ನನಗರಿದು. ಕೈಯೆತ್ತಿ ರೆಕ್ಕೆಯೊಲು ಬಡಿವಾಗ, ಕಣ್ಣನರಳಿಸಹತ್ತಿ ಕುಲುಕುಲನೆ ನಗುವಾಗ,- ಇವಳೆ ಅನುಭವಿಸುವಳೊ ಹಿರಿದಾದ ಸಂತಸವ, ನಾನೊ? ಇದು ನನಗರಿದು. ಕೇಕಿಯನು ಹಾಕಿವಳು ಕುಣಿದು ಕಳೆಯೇರುತಿರೆ,-...

ಆದರ್‍ಶವಾದಿ

‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ. ‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು ಎಳೆಯರೆಲ್ಲರು ಕೂಡಿ, ‘ನೀನು ನೋಂಪಿಯನೋಂತು ನಡೆವ ಬಗೆಯನ್ನರುಹು. ತೊದಲು...

ಹುಟ್ಟುಗುರುಡ

‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ, ಆಳರಸುಮನೆತನಕೆ !...

ಕವಿ

ಸುಗ್ಗಿ ಬರುತಿರೆ ನಲಿದು ಶುಕಪಿಕಗಳುಲಿಯುವವು ತಮ್ಮರಸುವಾತಿನೊಳು - ತಂಗಾಳಿಯೂದುವವು. ಇಳೆಯನೆಲ್ಲವ ತುಂಬ ಕೊನೆಗೊಮ್ಮೆ ಮೋದವದು ಧ್ವನಿತವಾಗಿರೆ ಜೀವಕೋಟಿಗಳು ನಲಿಯುವವು ಎಳೆವಾತಿನಲಿ ನುಡಿದು ಹಸುಮಗಗಳೊಲಿಯುವವು ಅವರ ತೊದಲ್ನುಡಿಗಳಲಿ ವಳೆವಾತ ಕಾಣುವದು, ಮತ್ತೆ ಪರಮಾರ್‍ಥವನು, ತಾಯಂದಿರ ಪ್ರಾಣವದು!...

ಕಮ್ಮಟ

ಇದು ನನ್ನ ಕಮ್ಮಟವು. ರಾಜಮುದ್ರೆಯನೊತ್ತಿ ಹಣವನೋಡಾಡಿಸುವುದಲ್ಲ. ಆಡಳಿತಗಳ ವ್ಯವಹಾರವನ್ನು ನಿಯಂತ್ರಿಸುತ ದಿಗ್ದೇಶಗಳ- ನೊಲಿಸ ಬಯಸುವುದಿಲ್ಲ ಕಲ್ಲು ಬಂಡೆಯ ಕೆತ್ತಿ ಬೋಳಗುಮ್ಮಟಗಳನು ಬಾಳ ಬಯಲಿನಲೆತ್ತಿ ನಿಲ್ಲಿಸುವ ಸಾಮರ್‍ಥ್ಯವಿದಕಿಲ್ಲ ತಾರೆಗಳ ಕೋಟಿ ಹೊನ್ನನು ತಂದು ಆಗಸದ ಮೇರೆಗಳ...

ಕನ್ನಡಿಗನ ಹೃದಯರಾಗ

ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ- ನಿರುವಿಕೆಯು, ದಿವ್ಯಹರ್‍ಮ್ಯವನೊಮ್ಮೆ ಬೇಡುವುದು ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು. ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ. ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,- ಅವರ ಚಂಚಲ ದೃಷ್ಟಿಯಂತೆ ಹರಿದಾಡುವುದು ಪದಸಂಪದಕೆ...

ಸೌಂದರ್‍ಯಾರಾಧಕ

ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆಟ್ಟಿಹರು ಪಾಮರರು ಸಲ್ಲದಾಸೆಯ, ಬೀಡುಬಿಟ್ಟಹರು...

ಕಾದಲ

ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು! ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ, ದೇವನಿಂದವಳನ್ನು ವಡದ ನೇಹಿಗ ನಾನು! ನಲ್ಲೆಯಿವಳೆನ್ನ ಕಣ್ಮನವ ತುಂಬಿರುವ ಬೆಳಕು, ಅವಳ ಕಾಂತಿಯನಿಳೆಗೆ ಬಿಂಬಿಸುವ...