Home / ಕವನ / ಕವಿತೆ / ಇತಿಹಾಸಾವಲೋಕನ ನಿರ್ವೇದ

ಇತಿಹಾಸಾವಲೋಕನ ನಿರ್ವೇದ

ಪರಶಿವಗು ತಪದಿಚ್ಛೆಯೊಮ್ಮೆಗೆ ಹರಿಗು ಯೋಗದ ನಿದ್ದೆಯು
ಭಾರತಾತ್ಮವೆ, ನಿನಗು ಅಂತರ್ಮುಖತೆಯಾಯಿತೆ ಸಹಜದಿ?
ನೀನು ಸಾಸಿರವರುಷ ಜಡರೊಳೆಯಿದ್ದೆ ಹರಣವ ಹದುಗಿಸಿ
ತವರ ಸೇರಿದ ಮೇಲೆ ಜಾನಕಿ ರಾಮರಾಜ್ಯವಿದೋ ಎನೆ.

ಕೃಷಿಯುಪೇಕ್ಷಿತವಾಗಿ ಹುಲುಸದ ನೆಲಕೆ ಚಿಚ್ಚರದೊಕ್ಕಲು
ಗೊಬ್ಬರವನಿಕ್ಕೊವೊಲು ತಂದನು ಪರಜನವ ಪಶುಪತಿಯೆನೆ
ಶಕರು ಹೂಣರು ತುರುಕರಾಫ್ಘನರಂತೆ ಮುಘಲರು ತಮ್ಮಯ
ತನುಮನವ ಬೆರಸಿದರು ನಿನ್ನಯ ಮಣ್ಣಿನೊಳು ರಸವೂರಲು.

ಬೇಸಾಯ ಬೆಳೆಯಪ್ಪ ಕಾಲಕೆ ಕಳೆಗಳೇಳ್ವವು ಹುಳುಗಳೂ
ಹಾಲು ತೆನೆಗೂಡುತಿರೆ ಪೈರೊಳು ಬೆಳ್ಳಕ್ಕಿ ಸಾಲಿಡುವುವು
ಇಂತೆ ಆಯಿತೊ ಏನೊ ನಮ್ಮೀನಾಡಿನೈಸಿರಿ ಸುಗ್ಗಿಗೆ
ಈ ನೆಲದಿ ಹುಳು ಹುಪಟೆ ಹೆಚ್ಚಿತು, ಬಿಳಿಯ ಜನ ಕಾಲೂರಿತು.

ಮೇದನಿಯ ಬಲದಿಂದಲೊಯ್ಯುವ ಹಿರಣ್ಯಾಕ್ಷರೊ ಎಂಬೊಲು
ಆಸುರವ ಮೆರೆಸುತ್ತ ಸೆಳೆದರು ಭಾರತಾತ್ಮವನಾಂಗ್ಲರು
ವಿಜ್ಞಾನ ಪಾಶಗಳ ಬೀಸುತ ಬಂಧಿಸುತ ಕೊಂಡೊಯ್ದರು
ಸಪ್ತಸಾಗರದಾಚೆ ತಮ್ಮಯ ನಾಡ ಮಂಚಕೆ ಬಿಗಿದರು.

ಎಲೆ, ಹರಿಪ್ರಿಯೆ, ನಿನ್ನ ತನುಜರ ಭಂಗಕಾವನು ಮರುಗನು
ನಿನ್ನ ಋಷಿಕವಿದೇವಗಮನವ ಸೆಳೆದೆಯಾ ನಿಟ್ಟುಸಿರೊಳು?
ಮುಕ್ತರವರನುತಪಿಸಿ ಬಿದ್ದರೆ ಪುನರ್ಜನ್ಮದ ಬವಣೆಗೆ
ನಿನ್ನ ಮಣ್ಣೊಳೆ ತನುವನಾನುತ ನಿನ್ನ ನಿಭವವ ಮರಳಿಸೆ?
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...