ಅಪ್ಪನ ಮಠ ನೋಡಿದೆ

ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ ಅಪ್ಪನಽ ಮಠ ನೋಡಿದೆ ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು ದಿಟಪುಟ ಮಠ ನೋಡಿದೆ ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ ಮಠಸಾಮಿ ನಾ ನೋಡಿದೆ...

ಓ ನಲ್ಲೆ-ಬಾ ಇಲ್ಲೆ

(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ...

ಕಂಡೆ ಕಂಡೆ ನಿನ್ನ ಕಂಡೆ

ಕಂಡೆ ಕಂಡೆ ನಿನ್ನ ಕಂಡೆ ಕಂಡುಕೊಂಡೆ ಮಧುವನಾ ನೀನೆ ರಥವು ಪ್ರೀತಿ ಪಥವು ಶಾಂತಿವನದ ಉಪವನಾ ಬೆಳಕು ಕಂಡೆ ಭಾಗ್ಯ ಕಂಡೆ ಕಳೆದ ಗಂಟು ದೊರಕಿದೆ ಶಿಖರದಿಂದ ಶಿಖರಕೇರಿ ಶಿವನ ಮುಕುರ ಸೇರಿದೆ ನನ್ನ...

ಬಡ ಸೂಳೆಗೆ ಅವಳ ಗೆಳತಿ

(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ್ಲೆಯ ಬೇಲಿಮರೆಗೆ. ಸೆಟ್ಟರ...

ಪಂಚಮಿಯ ಹೊಸಹುಡಿಗಿ

ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ ಪಂಚಮಿಯ ಹೊಸಹುಡಿಗಿ ಬಂದಳಲ್ಲೊ ಭರಭಽರ ಜೋಕಾಲಿ ಸರಭಽರ ಹೊಸಬಗರಿ ಪಾತಽರಗಿತ್ತೀಯ ತಂದಳಲ್ಲೊ ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ ನಾಗರಕ ಥೈಥಳಕು ಹೊಚ್ಚತಾಳೊ ಸೆರಗು...

ಸಿರಿವಂತ ಸೂಳೆಯರ ಹಾಡು

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು...

ಅಜ್ಜಪ್ಪ

ಆ ಊರು ಈ ಊರು ಯಾವೂರು ತಿರುಗಿದರು ಅಜ್ಜಪ್ಪ ಕುಲುಕುಲು ನಕ್ಕು ಬಂದಿ ಉಕ್ಕಡಗಾತ್ರ್ಯಾಗ ಉಕ್ಕಲಾಡಿದಿ ಅಜ್ಜ ಜ್ಞಾನ ಕಕ್ಕಡ ದೀಪ ಹಚ್ಚಿ ನಿಂದಿ ಮರುಳನೆಂದರು ಮರುಳ ನೀ ಭಾರಿ ಶಿವಶರಣ ಕೆಂಡ ಬೆಣ್ಣಿಯ...

ನರ್ತಕಿಯೊಬ್ಬಳ ನಾಟ್ಯವನ್ನು ನೆನೆದು

ಬಾ ಬಾ ಮೋಹನೆ-ಬೇಗ ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ ಹೆಜ್ಜೆಹೆಜ್ಜೆಗೂ ಹೃದಯವ ತುಳಿವ ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ ಬೇಗ ಬಾ . . . ನಮ್ಮಿರಮಿಂದಾವಮೃತವ ಪಡೆಯೆ, ಆರಾಡಿಪರೀ ಮಂತನು ಅರಿಯೆ....

ಚಿಂತೆ ಜಾರಲಿ

ಚಿಂತೆ ಜಾರಲಿ ಚಿತೆಯು ಹೋಗಲಿ ಒಲವು ಮಾತ್ರವೇ ಉಳಿಯಲಿ ಸುಖದ ಸಾಗರ ಶಿವನ ಮಿಲನಕೆ ಪ್ರೀತಿ ಮಾತ್ರವೆ ಬೆಳೆಯಲಿ ಪ್ರಭುವಿಗೆಲ್ಲವ ಕೊಟ್ಟ ಮೇಲಕೆ ಒಳಗೆ ಚಿಂತೆಯು ಯಾತಕೆ ಪ್ರೀತಿ ತಂದೆಗೆ ಸಕಲ ಅರ್‍ಪಿಸಿ ಮತ್ತೆ...

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದುಂಬಿಯೇಳೆ,...