“ನೀನು ದೂರದೊಳಿರಲು ನಿನ್ನ ಯೋಚನೆಯೊಂದೆ
ಅಗ್ನಿಯೊಲು ದಹಿಸುವುದು ದೇಹವನ್ನೆ
ನೀನು ಬಳಿಯಿರೆ ನನ್ನನಪ್ಪಿ ಮುತ್ತಿಟ್ಟರೂ
ಸುಡೆಯೆನ್ನ; ಅಚ್ಚರಿಯಿದೇನು ಚೆನ್ನೆ?”
“ಅಗಲಿಕೆಯ ಶೋಕಾಗ್ನಿ ಎದೆಯೊಳಿರೆ, ಯೋಚನೆಯ
ಗಾಳಿಯುರುಹುವುದನ್ನೆ ಮರೆಯಬೇಕೆ?
ನಾನು ಬಂದಿಹ ಸುಖದ ತಂಪು ಹೊತ್ತೊಳು ನಿಮಗೆ
ನನ್ನೊಲುಮೆ ಕಿಡಿಬೇಡ, ನಾನೆ ಸಾಕೆ?!”
*****

















