Home / ಕವನ / ಕವಿತೆ / ಕರುಣೆ

ಕರುಣೆ

೧

ದೇವ ನಿನ್ನಪಾರ ಕರುಣೆಗಾವ ನೆಲೆಯ ಕಾಣಲಿ!
ಈವ ಶಕ್ತಿ ಈಯುತಿರಲಿ ಭಕ್ತಿಭಾವ ಬೆಳೆಯಲಿ!
ಬೆಳಕು ಗಾಳಿ ನೀರು ನೆಲ ಇತ್ತುದೆಲ್ಲ ಸಾಲದೆ?
ಬೆಳೆವ ಬದುಕಿಗಿದುವೆ ಭಾರವೆಂದರೆಂತು ಹೇವವೆ?
ತಾಯಿ ಈದ ಮಗುವು ನೀನು ಬಂದೆ ಇತ್ತರಲ್ಲವೆ?
ಮಾಯ ಬಿಸುಟಿ ನಿನ್ನ ನೋಡು ಅದೇ ಶಕ್ತಿ ಅಂಶವೆ.
ಬೆಳೆವುದೊಂದೆ ಉಳಿದ ಕೆಲಸ ಇಲ್ಲವದಕೆ ಎಡೆ ತಡೆ;
ಇಳೆಯ ತುಂಬು ವಿಶ್ವ ವ್ಯಾಪಿ ನಿಲ್ಲಜೇಡ ನಡೆ ನಡೆ.

೨
ಜಗದ ಬೆಳಕಿಗುಗಮ ನಿನ್ನ ಹೊಳೆವ ಕಣ್ಣ ಕಾಂತಿಯು
ಗಂಧವೀನ ಗಂಧವತಿಯು ನಿನ್ನ ಮ್ಬೆ ಸುಗಂಧವು
ಉಸುರಿನೆಳೆತ ಎದೆಯ ಕುಣಿತ ಕಡಲಿನೇರು ಇಳಿತವು,
ಇದಕೆ ತಾಳ ಹಾಕುತಿಹವು ಚಿಕ್ಕೆ ಬೆರಗುಗೊಂಡವು.
ನೀನು ಸಾಗೆ ಅಮರನಾಗಿ ಹತ್ತು ದಿಕ್ಕು ತುಂಬುತ
ಗಾನ ಬಂತು ಗಗನದಿಂದ ನಿನ್ನ ಬೆನ್ನ ಹತ್ತುತ
ತುಂಬಿ ತುಳುಕಿತಿಳೆಯ ಕಲಶ ಕಾದಿಹ ಕದಲಾರತಿ
ಪ್ರಕೃತಿ ಪುರುಷಗೆತ್ತಿ ಹಿಡಿದ ಹೊನ್ನ ಮಂಗಲಾರತಿ

೩
ದೇಹವಿದ್ದರೇನು ಜೀವ ನಿನ್ನನೆ ನೀ ಮರೆವೆಯಾ?
ನೀನು ಹೊತ್ತ ಪರಿಗಳನ್ನೆ ನೀನೆ ಅರಿಯದಿರುವೆಯಾ?
ಹುಟ್ಟಿನಲ್ಲೆ ಹುದುಗಿ ಸಾವು ದೇಹರೂಪ ತಾಳಿತು
ಸೃಷ್ಟಿಯಲ್ಲಿ ತಾನು ತೋರಿ ನಿನ್ನನು ಮರೆ ಮಾಡಿತು
ನಿನ್ನ ಜರೆದು ತಾನು ಮರೆದು ಇದಕೆ ಬಾಳು ಎಂದಿತು
ದಣಿದು ಕೊನೆಗೆ ಮಣ್ಣುಗೂಡೆ ದೇಹವಳಿದು ಹೋಯಿತು
ತನ್ನ ಅರಿವು ತನಗೆ ಬರದೆ ಇದ್ದು ಇಲ್ಲದಾಯಿತು
ಅಳಿದ ದೇಹದಿಂದ ಉಳಿದ ನಿನಗೆ ವಿಜಯವಾಯಿತು
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...