Home / ಕವನ / ಕವಿತೆ / ಮುಂಜಾನೆಯ ಮುನ್ನಿರುಳು

ಮುಂಜಾನೆಯ ಮುನ್ನಿರುಳು

ದೇವನಿಲ್ಲಿಗೆ ಬರುವ ಮುನ್ನವೆ ದೇವದೂತರು ಬರುವರು
ಎನ್ನುವೈತಿಹ್ಯವನು ನಿಜವೆನಿಸೆನಿತುದಾತ್ತಧ್ಯೇಯರು
ಬಾನವರಿಗಿಳೆ ಸುಪಥವಾಗಲು ಮುನ್ನ ಜನ್ಮವ ಪಡೆಯುತ
ನಡೆದರೈ ಪರದರ್ಪದುರ್ಗಮವಾದ ನಮ್ಮೀ ನಾಡೊಳು.

ರಾಮಮೋಹನ ರಾಮಕೃಷ್ಣರು ಯತಿ ವಿವೇಕಾನಂದರು
ಮೆಹತ ಬಂಕಿಮಚಂದ್ರ ಗೋಖಲೆ ದಾಸ ಶ್ರದ್ಧಾನಂದಜಿ
ಅನ್ಸಾರಿ ನವರೋಜಿ ಇಕ್ಬಲ ಮಾಲವೀಯರು ರಾನಡೆ
ಲಾಲಲಜಪತರಾಯ ಮೋತಿಲಾಲ ತಿಲಕ ರವೀಂದ್ರರು-

ಇಂತೆಣಿಸಿ ಮುಗಿಸುವೆನೆ ನಾನೀ ದಿವ್ಯತೇಜೋಮಹಿಮರ
ಭಾರತದೊಳಿಂಗ್ಲೆಂಡು ಚೆಲ್ಲಿದ ನೆರಳತಮದೊಳು ಹೊಳೆದರ
ಭೀತಿಮೋಹವಿಮಾನಮೂರ್ಛಿತರಾಗದುಳಿದರ ಧೀರರ
ಇರುಳ ಗರ್ವದ ಮೌನವಿಗಡಿಸೆ ಉಷಾಸ್ಫೂರ್ಜನ್ನಾದರ?

ನೆಲವ ತಬ್ಬಿರುವಂಧಕಾರವ ದೂರದುಡಗಣ ಹರಿಸದು
ನೆಲವ ತಬ್ಬುವ ಬೆಳಕೆ ಬೇಕಿದನೆಬ್ಬಿಸುತಲಸುವೆಗೆಯಲು
ಬುದ್ಧಿಯುಫ್ಪರಿಗೆಯಲಿ ನೆಲಸಿದ ವೀಥಿವೀಕ್ಷಣ ಚತುರರು
ತಲದಿ ನಡೆಯುವ ಪ್ರಾಣದಾಟಕೆ ಮೋಹಗೊಂಡರು ವಿಫಲರು.

ಅನ್ನಕೋಶದಿ ಬಂದಿ ಹಲವೆಡೆ ಪ್ರಾಣಕೋಶದಿ ಹಲವೆಡೆ
ಮನೋಜ್ಞಾನಾನಂದ ಕೋಶಗಳಲ್ಲಿಯಂತೆಯೆ ಕೆಲವೆಡೆ
ಭಾರತದ ಚೈತನ್ಯವಾಹಿನಿ ಸೇತು ಬಂಧಿತೆಯಾಗುತ
ಪರರ ಸಂಪತ್‌ ಸುರ್ಫಣೆಗಾದಳು ತನ್ನ ತಾನೇ ಮರೆಯುತ.

ಪಂಚಕೋಶಗಳಲ್ಲು ಎಡೆತಡೆಯಿಲ್ಲದಂದದಿ ಹರಿಯುತ
ಈ ಮಹಾನದಿ ವಿಶ್ವಜೀವನಶಿವಧಿಸಂಗಮೆಯಪ್ಪಳೆ?
ಪ್ರಕೃತಿತಾರಕೆಯಾಗದಂದದಿ ಕುಟಿಲ ರೌದ್ರವ ಮೆರೆಸುತ
ರುದ್ರಜಟೆಯೊಳು ಸಿಲುಕದೀ ಹರಿಪದೆಗೆ ಬಿಡುಗಡೆಯೆಂದಿಗೆ?
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...