Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೨೪ ಜೂನ್, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೨೪ ಜೂನ್, ೧೯೪೨

ಪ್ರೀತಿಯ ಕಿಟಿ,

ಅಂದು ಕುದಿಯುತ್ತಿರುವ ಧಗೆ. ಆ ಸೆಖೆಗೆ ನಾವೇ ಕರಗುತ್ತಿದ್ದೆವು. ಅಂತಹ ಸೆಖೆಯಲ್ಲಿ ನನಗೆ ಎಲ್ಲ ಕಡೆ ಓಡಾಡುವ ಕೆಲಸ. ಟ್ರಾಮ ಗಾಡಿಯಲ್ಲಿನ ಪ್ರಯಾಣ ಎಷ್ಟು ಚೆನ್ನ ಎಂದು ನಾನೀಗ ಹೊಗಳಬಲ್ಲೆ. ಆದರೆ ಅದನ್ನು ಯಹೂದಿಗಳಿಗೆ ನಿಷೇಧಿಸಲಾಗಿತ್ತು. ಕನಸಿನ ಕುದುರೆಗೆ ನಾವು ತೃಪ್ತರಾಗಬೇಕಿದೆ. ನಿನ್ನೆ ಊಟದ ಸಮಯದಲ್ಲಿ ನನಗೆ ಜಾನ್ ಲೆಕೆನಸ್ಟ್ರಾಟ್‌ನಲ್ಲಿನ ಹಲ್ಲಿನ ವೈದ್ಯರ ಬಳಿ ಹೋಗಬೇಕಿತ್ತು.

ಅದು Stamïdsstimmertuinen[ಫ್ರಾಂಕಳ ಸ್ಕೂಲು ಇದ್ದ ಊರು] ನಲ್ಲಿಯ ನಮ್ಮ ಶಾಲೆಯಿಂದ ತುಂಬಾ ದೂರವಿದೆ. ಆ ದಿನ ಹೆಚ್ಚು ಕಮ್ಮಿ ಮಧ್ಯಾಹ್ನ ನಾನು ಪೂರ್ತಿ ಮಲಗಿಬಿಟ್ಟಿದ್ದೆ. ಆದರೆ ಪುಣ್ಯಕ್ಕೆ ಡೆಂಟಿಸ್ಟ್‌ನ ಸಹಾಯಕಳು ಒಳ್ಳೆಯವಳಾಗಿದ್ದಳು. ನನಗಾಕೆ ಕುಡಿಯಲು ಪಾನೀಯ ಕೊಟ್ಟಳು.

ನಮಗೆ ದೋಣಿ ಪ್ರಯಾಣಕ್ಕೆ ಅನುಮತಿ ಇತ್ತು ಅಷ್ಟೇ. ಒಮ್ಮೆ ಜೊಸೆಫ ಇಸ್ರೇಲ್ಸ್ಕೇಡ್ ಎಂಬಾತ ತನ್ನ ಚಿಕ್ಕ ದೋಣಿಯಲ್ಲಿ ನಾವೆಲ್ಲ ಕೇಳಿದ ಮೇಲೆ ನಮ್ಮನ್ನು ಕರೆದೊಯ್ದಿದ್ದ. ನಮಗೊದಗಿದ ದುಸ್ಥಿತಿಗೆ ಡಚ್ ಜನರದೇನೂ ತಪ್ಪಿರಲಿಲ್ಲ.

ಈಸ್ಟರ ಹಾಲಿಡೇ ದಿನಗಳಲ್ಲಿ ನಾನು ಶಾಲೆಗೆ ಹೋಗಬೇಕಾಗಿಲ್ಲ ಎಂದುಕೊಳ್ಳುವೆ. ಕಾರಣ ನನ್ನ ಬೈಸಿಕಲ್ಲು ಕಳುವಾಗಿತ್ತು. ಅದಕ್ಕಾಗಿ ಡ್ಯಾಡಿ ಜಾಗ್ರತೆಯಾಗಿ ಇಟ್ಟುಕೊಳ್ಳುವ ಸಲುವಾಗಿ ಮಮ್ಮಿಯ ಸೈಕಲ್ಲನ್ನು ಕೂಡಾ ಕ್ರೈಸ್ತ ಕುಟುಂಬವೊಂದಕ್ಕೆ ಕೊಟ್ಟಿದ್ದಾರೆ. ದೇವರೇ! ನಿನಗೆ ಥಾಂಕ್ಸ್! ರಜಾದಿನಗಳು ಹತ್ತಿರವೇ ಇವೆ. ಒಂದೇ ವಾರವಿದೆ. ಸಂಕಟವೆಂದರೆ ನಿನ್ನೆ ಅದೇನೋ ಮೋಜಿನ ಸಂಗತಿ ನಡೆಯಿತು. ನಾನು ಬೈಸಿಕಲ್ ಶೆಡ್‌ಗಳನ್ನು ದಾಟಿ ಹೋಗುತ್ತಿದ್ದಾಗ ಅದ್ಯಾರೋ ನನ್ನನ್ನು ಕರೆದರು. ಸುತ್ತಲೂ ನೋಡಿದೆ. ಅಲ್ಲೊಬ್ಬ ಸುಂದರ ಹುಡುಗ ನಿಂತಿದ್ದ, ಅದೇ ನಿನ್ನೆ ಸಂಜೆ ನನ್ನ ಗೆಳತಿ ಇವಾಳ ಮನೆಯಲ್ಲಿ ಭೇಟಿ ಮಾಡಿದವನಾಗಿದ್ದ. ನಾಚಿಕೆಯಿಂದಲೇ ನನ್ನತ್ತ ಬಂದು ತನ್ನನ್ನು ಹ್ಯಾರಿ ಗೋಲ್ಡಬರ್ಗ ಎಂದು ಪರಿಚಯಿಸಿಕೊಂಡ. ಆತನೇನು ಬಯಸುತಿದ್ದ ಎಂಬುದರ ಕುರಿತು ನನಗೆ ಕುತೂಹಲವಿರಲಿಲ್ಲ. ಹಾಗಾಗಿ ನಾನು ಆಶ್ಚರ್ಯಗೊಳ್ಳಲಿಲ್ಲ. ಆದರೆ ನನಗೆ ಬಹಳ ಹೊತ್ತು ಅಲ್ಲಿ ನಿಲ್ಲಲು ಸಾಧ್ಯವಿರಲಿಲ್ಲ. ನಾನು ಅತನಿಗೆ ಶಾಲೆವರೆಗೂ ಕಂಪನಿ ಕೊಡುವಂತೆ ಕೇಳಿದ. ನಾನು ಹೋಗುವ ದಾರಿಯಲ್ಲಿ ಬರುತ್ತಿಯಾದರೆ, ನಾನು ಬರುವೆ ನಾನು ಉತ್ತರಿಸಿದೆ. ಹಾಗೆ ನಾವಿಬ್ಬರೂ ಜೊತೆಯಾಗಿ ಹೊರೆಟೆವು. ಹ್ಯಾರಿ ಹದಿನಾರು ವರ್ಷದವ. ಮತ್ತು ಎಲ್ಲ ರೀತಿಯ ರಂಜನೀಯ ಕಥೆಗಳನ್ನು ಹೇಳಬಲ್ಲ. ಈ ದಿನ ಮುಂಜಾನೆ ಕೂಡಾ ಆತ ನನಗಾಗಿ ಕಾಯುತ್ತಿದ್ದ. ಇನ್ನು ಮುಂದೆ ಕೂಡಾ ಆತನನ್ನು ನಾನು ನಿರೀಕ್ಷಿಸುತ್ತೇನೆ.

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...