Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ಮಾರ್ಚ ೧೦, ೧೯೪೩

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ಮಾರ್ಚ ೧೦, ೧೯೪೩

ಪ್ರಿಯ ಕಿಟಿ,

ನಿನ್ನೆ ಸಂಜೆ ನಮ್ಮ ಸುತ್ತಲೂ ಸ್ವಲ್ಪ ಹೊತ್ತಿನ ಪ್ರದಕ್ಷಿಣೆಯನ್ನು ವಿಮಾನಗಳು ನಡೆಸಿದ್ದವು, ಮೇಲಿಂದ ಆ ರಾತ್ರಿಯಿಡಿ ಬಂದೂಕುಗಳ ಗುಂಡಿನ ಸದ್ದು ಕೇಳುತ್ತಲೇ ಇತ್ತು. ಗೋಲಿಬಾರ ಮತ್ತು ವಿಮಾನಗಳ ಬಗ್ಗೆ ನನಗಿರುವ ಭೀತಿ ಇನ್ನು ಕಡಿಮೆಯಾಗಿಲ್ಲ. ಹಾಗಾಗಿ ಪ್ರತಿರಾತ್ರಿ ನಾನು ಮಲಗಿದ್ದಲ್ಲಿಂದ ನಿಧಾನಕ್ಕೆ ಡ್ಯಾಡಿಯ ಹಾಸಿಗೆಯ ಕಡೆ ತೆವಳುತ್ತೇನೆ. ನನಗೆ ಗೊತ್ತು ಇದು ತೀರಾ ಬಾಲವ್ಯಸನವೆಂದು. ಆದರೆ ಆ ಸಮಯದಲ್ಲಿ ನನಗೆಷ್ಟು ಹೆದರಿಕೆ ಆಗುತ್ತದೆಯೆಂದು ನಿನಗೆ ತಿಳಿಯದು.

ವಿರೋಧಿ ವಿಮಾನಗಳು ಎಷ್ಟು ಕರ್ಕಶವಾಗಿ ಸದ್ದು ಮಾಡುತ್ತವೆ ಎಂದರೆ ನೀನು ಮಾತನಾಡಿದ್ದೇ ನಿನಗೆ ಕೇಳಿಸದು.

ದೈವ ನಿಯಮ ನಂಬುವ ಶ್ರೀಮತಿ ವ್ಯಾನ್ಡ್ಯಾನ್ ಈ ಸದ್ದಿಗೆ ಆಗಾಗ ಹೆಚ್ಚು ಕಮ್ಮಿ ಹೆದರಿ ಅಳುತ್ತಿರುತ್ತಾರೆ. ಮತ್ತು ಹೆದರಿದ ಸಣ್ಣ ದನಿಯಲ್ಲಿ ಓ! ಇದು ತುಂಬಾ ದುರದೃಷ್ಟಕರ! ಓ! ಅವರು ಅದೆಷ್ಟು ಜೋರಾಗಿ ಗೋಲಿಬಾರ ಮಾಡುತ್ತಿದ್ದಾರೆ, ಎನ್ನುತ್ತಿದ್ದರೂ ಆ ಮಾತುಗಳ ಅರ್ಥ ನನಗೆ ಎಷ್ಟೊಂದು ಹೆದರಿಕೆಯಾಗಿದೆ ಎಂಬುದೇ ಆಗಿರುತ್ತದೆ.

ಕತ್ತಲೆಯಷ್ಟು ಕೆಟ್ಟದ್ದಾಗಿ ಕಾಣುವುದು ಯಾವುದೂ ಇಲ್ಲ. ಕ್ಯಾಂಡಲ್ ಬೆಳಕು ಕತ್ತಲೆಗಿಂತ ಕೊಂಚ ಉತ್ತಮ. ನಿನ್ನೆ ನಾನು ಕತ್ತಲೆಗೆ ಎಷ್ಟೊಂದು ನಡುಗುತ್ತಿದ್ದೆ, ಎಷ್ಟೆಂದರೆ ಜ್ವರ ಬಂದಾಗ ಹೇಗೋ ಹಾಗೆ. ಅದಕ್ಕಾಗಿ ಡ್ಯಾಡಿಯಲ್ಲಿ ಪುನಃ ಕ್ಯಾಂಡಲ್ ಉರಿಸಲು ಹೇಳಿದೆ. ಡ್ಯಾಡಿ ಅದಕ್ಕೆ ಲಕ್ಷ್ಯ ನೀಡಲಿಲ್ಲ. ಕ್ಯಾಂಡಲ್ ಹಚ್ಚಲೇ ಇಲ್ಲ. ಆನಂತರ ಒಂದೇ ಸಲ ಮಷಿನ್‌ಗನ್‌ಗಳು ಬೆಂಕಿಯುಗುಳಲಾರಂಭಿಸಿದ್ದವು. ಅವು ಬಂದೂಕುಗಳಿಗಿಂತ ಹತ್ತು ಪಟ್ಟು ಹೆಚ್ಚು ಭಯಂಕರವಾಗಿದ್ದವು. ಮಮ್ಮಿ ತಮ್ಮ ಹಾಸಿಗೆಯಿಂದ ಹಾರಿ ಎದ್ದರು, ಮತ್ತು ಪಿಮ್ [ ಡ್ಯಾಡಿ]ನ ಕಿರುಕುಳ ತಡಿಯದೇ ಕ್ಯಾಂಡಲ್ ಹಚ್ಚಿದರು. ಡ್ಯಾಡಿ ಅದಕ್ಕೆ ತಕರಾರು ಮಾಡುತ್ತಲೇ ಮಮ್ಮಿಯ ಕಡೆ ಸಿದ್ಧ ಉತ್ತರವಿತ್ತು, ಏನೇ ಅಂದರೂ ಆನ್ ಕೆಲವು ವಿಷಯದಲ್ಲಿ ಚಿಕ್ಕವಳು, ಮತ್ತು ಕೆಲವು ಸಂಗತಿಗಳಲ್ಲಿ ಅನುಭವಿ. ಆಕೆ ಪ್ರಸಿದ್ಧ ಸೈನಿಕಳೇನೂ ಅಲ್ಲ ಎಂದರು. ಇಲ್ಲಿಗೆ ವಿಷಯ ಮುಗಿಯಿತು.

ಶ್ರೀಮತಿ ವ್ಯಾನ್ಡ್ಯಾನ್‌ರ ಇನ್ನಿತರ ಪುಕ್ಕಲುತನಗಳ ಬಗ್ಗೆ ನಾನು ನಿನ್ನ ಹತ್ತಿರ ಈ ಮೊದಲು ಹೇಳಿದ್ದೆನಾ? ಬಹುಶಃ ಇರಲಿಕ್ಕಿಲ್ಲ.

ಗುಪ್ತಗೃಹದಲ್ಲಿ ಏನೇನೋ ಆಗುತ್ತದೆಯೋ ಅದನ್ನೆಲ್ಲಾ ತಿಳಿಸಲೆಂದೇ ನಿನ್ನನ್ನು ಇಟ್ಟುಕೊಂಡಿರುವಾಗ, ನೀನು ಇದನ್ನು ತಿಳಿಯಲೇಬೇಕು. ಒಂದು ದಿನ ರಾತ್ರಿ ಶ್ರೀಮತಿ ವ್ಯಾನ್ಡ್ಯಾನ್‌ರಿಗೆ ಅಟ್ಟದ ಮೇಲೆ ರಾತ್ರಿಗಳ್ಳರು ಬಂದ ಸದ್ದು ಕೇಳಿಸಿತು. ದೊಡ್ಡ ದೊಡ್ಡ ಹೆಜ್ಜೆಗಳು ನಡೆದಾಡಿದಂತೆ ಆಕೆಗೆ ಅನ್ನಿಸಿತು. ಆ ಕೂಡಲೇ ಶ್ರೀಮತಿ ವ್ಯಾನ್ಡ್ಯಾನ್ ಗಂಡನನ್ನು ಎಬ್ಬಿಸಿದರು. ಆ ಕ್ಷಣವೇ ಆ ಸದ್ದು ನಿಂತು ಹೋಯಿತಂತೆ. ಕಳ್ಳರು ಅದೃಶ್ಯರಾಗಿದ್ದರು. ಆದರೆ ವ್ಯಾನ್ಡ್ಯಾನ್‌ರಿಗೆ ಮಾತ್ರ ಹೆದರಿದ ಅದೃಷ್ಟವಾದಿಯ ಹೃದಯ ಬಡಿತದ ಸದ್ದು ಮತ್ತು ಅವರು ಹೇಳುತ್ತಿದ್ದ ಓ. ಪುಟಿ, [ವ್ಯಾನ್ಡ್ಯಾನ್‌ರ ನಿಕ್ ನೇಮ್] ಅವರು ನಮ್ಮ ಎಲ್ಲ ಸಾಸೇಜ್ ಮತ್ತು ಬೀನ್ಸ, ಬಟಾಣಿಗಳನ್ನು ಕೊಂಡೊಯ್ದರಿರಬೇಕು, ನನಗೆ ಹೆದರಿಕೆಯಾಗುತ್ತಿದೆ, ಪೀಟರ್, ಹಾಸಿಗೆಯಲ್ಲಿ ಸುರಕ್ಷಿತ ಇರಬಹುದೇ? ಈ ಸದ್ದುಗಳು ಮಾತ್ರ ಕೇಳುತ್ತಿದ್ದವು. ಅದಕ್ಕವರು “ಖಂಡಿತ ಅವರು ನಮ್ಮ ಪೀಟರ್‌ನನ್ನು ಕದ್ದೊಯ್ದಿರಲಾರರು. ಕೇಳಿಲ್ಲಿ, ನೀನು ಚಿಂತಿಸಬೇಡ. ಮತ್ತು ನನಗೆ ನಿದ್ರಿಸಲು ಬಿಡು” ಎಂದಿದ್ದಾರೆ. ಆದರೆ ಅದರಿಂದ ಎನೂ ಪ್ರಯೋಜನವಾಗಲಿಲ್ಲ. ಶ್ರೀಮತಿ ವ್ಯಾನ್ಡ್ಯಾನ್ ಎಷ್ಟು ನರ್ವಸ್ ಆಗಿದ್ದರೆಂದರೆ ಒಂದು ಸಣ್ಣನಿದ್ದೆ ಮಾಡಲು ಅವರಿಂದ ಆಗಲಿಲ್ಲ. ಆನಂತರ ಕೆಲವು ದಿನಗಳ ಮೇಲೆ ಒಂದು ರಾತ್ರಿ ಇಡೀ ವ್ಯಾನ್ಡ್ಯಾನ್ ಕುಟುಂಬ ಆ ಭಯಂಕರ ಸದ್ದಿಗೆ ತಟ್ಟನೇ ಎಚ್ಚರಗೊಂಡಿತು. ಪೀಟರ್ ಟಾರ್ಚ ಹಿಡಿದು ಮಾಳಿಗೆ ಹತ್ತಿ ನೋಡಿದ. ಅಲ್ಲಿ ನೋಡಿದರೆ ದಿಕ್ಕೆಟ್ಟ ಓಟ! ಒಂದೇ ಸಮ ನಾಗಾಲೋಟ! ಓಡಿ ಹೋದದ್ದು ಏನಿರಬಹುದು ಹೇಳು? ದೊಡ್ಡ ಹೆಗ್ಗಣಗಳ ದೊಡ್ಡ ಗುಂಪೇ ಅಲ್ಲಿತ್ತು. ಯಾವಾಗ ಅಲ್ಲಿದ್ದ ಕಳ್ಳರ ಸಂಗತಿ ತಿಳಿಯಿತೋ ನಾವು ಮೌಶಿಯನ್ನು [ಬೆಕ್ಕು] ಅಟ್ಟದ ಮೇಲೆಯೇ ಮಲಗಲು ಬಿಟ್ಟೆವು. ಆ ದಿನದಿಂದ ಕರೆಯದೇ ಬರುವ ಈ ಎಲ್ಲ ಅತಿಥಿಗಳು ಮತ್ತೆಂದೂ ಬರಲಿಲ್ಲ. ಕಡೇ ಪಕ್ಷ ರಾತ್ರಿಯ ಸಮಯದಲ್ಲೂ ಕಾಣಸಿಗಲಿಲ್ಲ.

ಆನಂತರ ಎರಡು ದಿನಗಳ ತರುವಾಯ ಪೀಟರ್ ಕೆಲವು ಹಳೆಯ ವೃತ್ತ ಪತ್ರಿಕೆಗಳನ್ನು ತರಲು ಮಾಳಿಗೆ ಹತ್ತಿದ. ಮಾಳಿಗೆಯಿಂದ ಇಳಿಯುವಾಗ ನೆಲಕ್ಕೆ ನೆಟ್ಟ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕಿತ್ತು. ಆದರೆ ನೋಡದೆ ಕೈಯನ್ನು ಕೆಳಗೆ ಇಟ್ಟಿದ್ದೆ ತಡ ಏಕಾ‌ಏಕಿ ಎರಗಿದ ಆಘಾತ ಮತ್ತು ನೋವಿನಿಂದ ಬೆದರಿ ಏಣಿಯಿಂದ ಉರುಳಿ ಕೆಳಗೆ ಬಿದ್ದ. ಗೊತ್ತಿಲ್ಲದೇ ಆತ ದೊಡ್ಡದೊಂದು ಹೆಗ್ಗಣದ ಮೇಲೆ ಕೈಯಿಟ್ಟು ಬಿಟ್ಟಿದ್ದ. ಅದು ಪೀಟರನನ್ನು ಸರಿಯಾಗಿ ಕಚ್ಚಿತ್ತು. ಆತ ನಮ್ಮಲ್ಲಿಗೆ ಬಂದು ತಲುಪುವಾಗ ಹೆದರಿಕೆಯಿಂದ ಬಿಳಿಹಾಳೆಯಂತೆ ಬಿಳಿಚಿಕೊಂಡಿದ್ದ. ಅದಲ್ಲದೇ ಅವನ ಪೈಜಾಮ ಪೂರ್ತಿ ರಕ್ತದಿಂದ ಒದ್ದೆಯಾಗಿತ್ತು. ಇದು ಆಶ್ಚರ್ಯಪಡುವ ಸಂಗತಿಯಲ್ಲ: ಹೆಗ್ಗಣವೊಂದನ್ನು ಮುಟ್ಟಿ ಬಂದಿದ್ದು ಆನಂದದ ವಿಚಾರಲ್ಲ.ಮತ್ತು ಅದರಿಂದ ಕಚ್ಚಿಸಿಕೊಂಡಿದ್ದು ತುಂಬಾ ನೋವಿನ ಸಂಗತಿಯೇ!

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...