Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ಜನವರಿ ೩೦, ೧೯೪೩

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ಜನವರಿ ೩೦, ೧೯೪೩

ಪ್ರಿಯ ಕಿಟಿ,

ನಾನು ಸಿಟ್ಟಿನಿಂದ ಕುದಿಯುತ್ತಿದ್ದೇನೆ. ಅದನ್ನು ಹೊರಹಾಕಲೇಬೇಕು. ಅದಕ್ಕಾಗಿ ಪಾದಗಳಿಂದ ನೆಲಕ್ಕೆ ತುಳಿಯಬೇಕೆಂದು, ಜೋರಾಗಿ ಕಿರುಚಲು, ಇಲ್ಲ ಮಮ್ಮಿಯನ್ನು ಒಮ್ಮೆ ಜೋರಾಗಿ ದೂಡಬೇಕೆಂದು, ಇಲ್ಲ ಅತ್ತು ಕರೆದು ರಂಪ ಮಾಡಬೇಕೆಂದು ಅನಿಸುತ್ತಿದೆ. ಆದರೆ ನನಗೆ ಗೊತ್ತಿಲ್ಲ ಬೇರೇನನ್ನು ಮಾಡಬಹುದೆಂದು. ಇದೆಲ್ಲ ಯಾಕೆಂದರೆ ಪ್ರತಿದಿನವೂ ನನ್ನನ್ನೆ ಗುರಿಯಾಗಿಸಿಕೊಂಡು ಹೇಳುವ ಇವರೆಲ್ಲರ ಭಯಂಕರ ಮಾತುಗಳಿಗೆ, ಅಣಕಿಸುವ ನೋಟಕ್ಕೆ, ಆಪಾದನೆಗಳಿಗೆ, ಗಟ್ಟಿಯಾಗಿ ದಾರದಿಂದ ಬಿಗಿದ ಬಿಲ್ಲಿಂದ ಹೊರಟ ಬಾಣದಂತೆ ಎಲ್ಲವೂ ನನ್ನನ್ನೆ ಗುರಿಮಾಡುತ್ತದೆ. ಅದನ್ನು ನನ್ನ ದೇಹದಿಂದ ಹೊರಗೆಳೆದು ತೆಗೆಯುವುದು ಬಹಳ ಕಷ್ಟಕರ.

ಮಾರ್‍ಗೊಟ್, ವ್ಯಾನ್ಡ್ಯಾನ್, ಡಸೆಲ್ ಇವರಿಗೆಲ್ಲ ಒಮ್ಮೆ ಜೋರಾಗಿ ಬೈಯಬೇಕೆಂದು ನನಗನ್ನಿಸುತ್ತದೆ. ಮತ್ತು ಡ್ಯಾಡಿಗೆ ಕೂಡಾ. ನನ್ನನ್ನು ನನ್ನಷ್ಟಕ್ಕೆ ಶಾಂತಿಯಿಂದ ಇರಲು ಬಿಡಿ, ಒಂದು ರಾತ್ರಿಗಾದರೂ ನನ್ನ ತಲೆದಿಂಬು ನನ್ನ ಕಣ್ಣೀರಿನಿಂದ ಒದ್ದೆಯಾಗದಂತೆ ನಿದ್ರಿಸಲು ಬಿಡಿ, ನನ್ನ ಕಣ್ಣುಗಳು ಉರಿಯುತ್ತಿವೆ, ತಲೆ ಸಿಡಿಯುತ್ತಿದೆ. ನಾನು ಇವೆಲ್ಲದರಿಂದ ದೂರಹೋಗಲು ಬಿಡಿ, ಬಹುಮುಖ್ಯವಾಗಿ ಈ ಜಗತ್ತಿನಿಂದಲೇ ದೂರ ಹೋಗಲು ಬಿಡಿ! ಆದರೆ ನಾನು ಹಾಗೇ ಮಾಡಲಾರೆ, ಅವರಿಗೆ ನನ್ನ ಹತಾಶೆ ತಿಳಿಯಬಾರದು. ಅವರಿಂದ ನನಗೆ ಆದ ಗಾಯವನ್ನು ನೋಡಲು ಅರಿಗೆ ಬಿಡಲಾರೆ. ಅವರ ಕರುಣೆಯನ್ನಾಗಲಿ, ಕರುಣಪೂರಿತ ತಮಾಷೆಯನ್ನಾಗಲಿ ನಾನು ಸಹಿಸಲಾರೆ, ಅದು ನನಗೆ ಇನ್ನಷ್ಟು ಕಿರಿಕಿರಿ ಮಾಡಿ ಕಿರುಚುವಂತೆ ಮಾಡುವುದು. ಒಂದೊಮ್ಮೆ ನಾನು ಮಾತನಾಡಿದರೆ, ನಾನು ಹೆಚ್ಚೆ ತೋರಿಸಿಕೊಳ್ಳುತ್ತಿರುವೆ ಎಂದುಕೊಳ್ಳುವರು. ಮೌನವಾಗಿದ್ದರೆ ನನ್ನ ವರ್ತನೆ ಅವರಿಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಿಸಿದರೆ ನಾನು ಒರಟಳಾಗಿ, ಎಲ್ಲಾದರೂ ನನಗೆ ಒಳ್ಳೆಯ ಯೋಜನೆಗಳು ಹೊಳೆದು ಅದನ್ನು ಉಲ್ಲೇಖಿಸಿದರೆ ಕಪಟಿಯಂತೆ, ನನಗೆ ದಣಿವಾಗಿದ್ದರೆ ಆಲಸಿಯಂತೆ, ನನಗೆ ಇಷ್ಟವಾಗುವಷ್ಟು ಹೊಟ್ಟೆ ತುಂಬಾ ತಿಂದರೆ ಸ್ವಾರ್ಥಿಯಾಗಿ, ಮೂರ್ಖಳಂತೆ, ಹೇಡಿಯಂತೆ, ಚಾಲಾಕಿಯಂತೆ ಇತ್ಯಾದಿ ಇತ್ಯಾದಿಯಂತೆ ನಾನವರಿಗೆ ಕಾಣುತ್ತೇನೆ. ನಾನೊಂದು ಯಾರೂ ಸಹಿಸಿಕೊಳ್ಳಲಾಗದಂತಹ ಹುಡುಗಿ ಎಂಬ ಮಾತನ್ನೆ ದಿನವಿಡಿ ಕೇಳುತ್ತೇನೆ. ಹಾಗಿದ್ದೂ ನಾನು ನಕ್ಕಂತೆ, ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡಿಲ್ಲದಂತೆ ತೋರಿಸುತ್ತೇನೆ. ನನಗೆ ಬೇಸರವಾಗುತ್ತದೆ. ದೇವರಲ್ಲಿ ನನಗೆ ಒಳ್ಳೆಯ ಸ್ವಭಾವ ನೀಡೆಂದು ಕೇಳಬೇಕೆಂದುಕೊಳ್ಳುತ್ತೇನೆ. ಹಾಗಾದರೂ ಇತರರ ಸಹಾಯವನ್ನು ಇಟ್ಟುಕೊಳ್ಳದೇ ಇರಬಹುದು. ಆದರೆ ಅದು ಆಗದು. ನನಗೆ ದಕ್ಕಿದ ಸ್ವಭಾವ ನನ್ನದು. ಮತ್ತದು ಕೆಟ್ಟ ಸ್ವಭಾವವಲ್ಲ ಎಂದು ನನಗೆ ತಿಳಿದಿದೆ. ನನ್ನಿಂದ ಸಾಧ್ಯವಾದಷ್ಟು ಇತರರಿಗೆ ಸಂತೋಷ ಕೊಡಲು ಪ್ರಯತ್ನಿಸುವೆ. ಎಷ್ಟೆಂದರೆ ಅವರು ಎಂದೂ ಊಹಿಸಿರಲಾರದಷ್ಟು. ಎಲ್ಲದ್ದಕ್ಕೂ ನಗುವೆ. ಯಾಕೆಂದರೆ ಅವರಿಗೆ ನನ್ನ ಸಂಕಟ ತಿಳಿಯುವುದು ನನಗಿಷ್ಟವಿಲ್ಲ.

ಒಂದಕ್ಕಿಂತ ಹೆಚ್ಚು ಸಲ, ಯೋಗ್ಯವಲ್ಲದ ಇಂತಹ ಅವಹೇಳನಗಳ ಸರಮಾಲೆಗೆ ಸಿಟ್ಟಾಗಿ ಮಮ್ಮಿಯ ಮೇಲೆ ಉರಿದು ಬಿದ್ದಿದ್ದೇನೆ. ನೀನು ಏನೂ ಹೇಳಿದರೂ ನಾನು ಕೇರ್ ಮಾಡುವುದಿಲ್ಲ, ನನ್ನ ನನ್ನಷ್ಟಕ್ಕೆ ಬಿಟ್ಟು ಬಿಡು, ಹೇಗಿದ್ದರೂ ನಾನು ಎಲ್ಲ ಬಿಟ್ಟವಳು ಇದರಿಂದ ಸ್ವಾಭಾವಿಕವಾಗಿ ನನಗೆ ಒರಟು ಬುದ್ದಿಯವಳೆಂದು ಹೇಳಲಾಯಿತು. ಎರಡು ದಿನ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಅಷ್ಟೇ ಆನಂತರ ಒಂದೇ ಸಲ, ಅದೆಲ್ಲ ಎಲ್ಲರಿಗೂ ಮರೆತುಹೋಯಿತು. ಮತ್ತು ನನ್ನನ್ನು ಪುನಃ ಎಲ್ಲರಂತೆ ಪರಿಗಣಿಸಲಾಯಿತು. ಒಂದು ದಿನ ಸಿಹಿಸಿಹಿಯಾಗಿ ಮಾತನಾಡುತ್ತ ಇರಲು, ಮರುದಿನ ಹಾವು ವಿಷ ಉಗುಳುವಂತೆ ಕಠೋರವಾಗಿ ಇರುವ ಪ್ರವೃತ್ತಿ ನನ್ನಿಂದ ಅಸಾಧ್ಯ. ಬಹಳ ಸಲ ನಾನು ಸುವರ್ಣಮಾಧ್ಯಮ ಆಯ್ದುಕೊಳ್ಳಬೇಕೆಂದು ಬಯಸುತ್ತೇನೆ, [ ಆದರೆ ನಿಜಕ್ಕೂ ಅದು ಬಂಗಾರವಲ್ಲ], ನನ್ನ ಯೋಚನೆಗಳನ್ನು ನೋವುಗಳನ್ನು ನನ್ನಲ್ಲಿಯೇ ಇಟ್ಟುಕೊಳ್ಳುವೆ, ಮತ್ತು ಅವರೆಲ್ಲ ನನಗೆ ಮಾಡುವಂತೆ ನಾನೊಂದು ಬಾರಿ ಅವರತ್ತ ಇದೇ ತಿರಸ್ಕಾರದಿಂದ ವರ್ತಿಸುವೆ. ಓ.. ಅದು ನನಗೆ ಸಾಧ್ಯವಾದರೆ ಮಾತ್ರ!

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...