ಬಾಳ್ವ ಬಯಕೆಯಿಲ್ಲದೆ
ಬಾಳಲೆಂದು ಬಂದೆಯಾ?
ಬಾಳುವದರ ಮರ್ಮವು
ಹೊಳೆಯದೆಂದು ನೊಂದೆಯಾ?
ಬಾಳಿದೆಲ್ಲ ವಿಷಮವೆಂಬ
ವಿಷವನುಂಡು ಬೆಂದೆಯಾ?
ಹುಟ್ಟಿದೊಡನೆ ಹುಟ್ಟಿಬಾರ-
ದೆಂಬ ನೋವ ತಂದೆಯಾ?
ಹೊಳೆಯಲಿನ್ನು ನಿನ್ನ ಮನಕೆ,-
ಕೊಚ್ಚುವಂಥ ಹೊಳೆಯಿದು,
ದಣಿದು ಸಾಗುಗೊಳಿಸಲಾಗ
ಬಾಗಿ ನಿಲ್ವ ಬೆಳೆಯಿದು:
ಕಣ್ಣೀರಿನ ಮಳೆ ತೋಯಿಸೆ
ಕಂಪು ಬೀರುವಿಳೆಯಿದು:
ನಮ್ಮ ಬಾಳ್ವೆಯೆಂಬುದು!
*****








