ಹೇ ದೇವ ಈ ಪರಿಯ ದುಃಖವನ್ನು ಕೊಡುವೇಕೆ
ಎದೆಯಲ್ಲಿ ಹುದಿಗಿದಾ ದುಃಖದುರಿ ಉರಿತಿಹದು
ಬದುಕಿನಾ ಸುಖಬಾಳು ಸುಡಲೆಂದು ಕಳುಹಿದೆಯಾ
ದುಃಖದುರಿ ತಿಳಿ ನೋಡಿ || ೧ ||
ಬಾನಿನಲ್ಲಿ ಮೂಡಿಹದು ಕಪ್ಪಿನಾ ಮೋಡಗಳು
ಮಿನುಗುವಾ ತಾರೆಗಳು ಅವುಗಳಾ ಸೆರೆಯಲ್ಲಿ
ಮನದೇಚ್ಛೆ ತೇಲಿಹವು ಮೂಡುವಾ ಆಶೆಗಳು
ಆಗಿಹವು ಅದರಂತೆ || ೨ ||
ಪ್ರಳಯದಾ ಅಗ್ನಿಯವು ಗಾಳಿಗೇ ಉರಿದಂತೆ
ತಳಮಳಸಿ ಈ ಎದೆಯು ಬೆಂದಿಹದು ಅದರಲ್ಲಿ
ತಿಳಿಯದಲೆ ಎದೆಉರಿಯು ಮೌನದಲಿ ಬೆರೆಯಿತೋ
ನಿರಾಶೆ ಕತ್ತಲಲೀ || ೩ ||
*****








