ಹೃದಯ ಮಂದಿರದಲಿ ಹುದಗಿದ ಆಶಾದೀಪ ಹೆದರಿತೋ ಬಿರುಗಾಳಿ ಘನ ಶಬ್ದಕೇ ||೧|| ಮಂದದಲಿ ಉರಿಯುವದು ಅಂದದಲಿ ಬೆಳೆಗುವದು ಚೆಂದಾಗಿ ತೋರುವದು ಜನರ ನಯನದಿ ||೨|| ಆಶಾದೀಪ ಕಂಡು ಆಶೆಯೇ ಹುಟ್ಟುವದು ನಿಶೆಯು ಏರುವದು ಘನ ಯೋಜನೆಯಲಿ ||೩|| ದೀಪ ಬೆಳಗಿದ ಮನೆ...