Home / ಕವನ / ಕವಿತೆ / ಮೃಗರಾಜ ಬೇಟೆ

ಮೃಗರಾಜ ಬೇಟೆ

ಚಂದ್ರಮನ ಉದಯವನು ನಿದ್ರಿಸುತ್ತ ಕುಳಿತಿದ್ದ
ಅಂದದಲಿ ಮೃಗರಾಜ ವನಗಿರಿಯ ಮಧ್ಯದಲಿ
ಬಂದಿಹಾ ಹಸಿವನ್ನು ನೀಗಿಸಲು ಮೃಗರಾಜ
ಚಂದ್ರಮನ ಬೆಳಕಕಂಡ || ೧ ||

ಹೊತ್ತಾಯ್ತು ಎಂದನೋ ಮನದಲ್ಲೀ ಮೃಗರಾಜ
ಸುತ್ತಲಿನ ಗಿರಿಗಳನ್ನು ಸುತ್ತುತಲಿ ಗರ್‍ಜನೆಯ
ಬಿತ್ತರಿಸಿ ಹೆದರಿಸಿ ವನಮೃಗವ ಕಾಡಿಸಲು
ದಿಶೆಗೆಟ್ಟು ಓಡಲನುವಾದ || ೨ ||

ಗಿರಿಗಳ, ಸರೋವರ, ಗಿಡಗಂಟಿ ತೆಗ್ಗುಗಳ
ಕೆರೆಭಾವಿ ಎಂದೆಂಬ ಅಂಜಿಕೇ ಈತನಲ್ಲಿಲ್ಲ
ಗುರಿ ಒಂದೇ ಮನಬಂದ ಹಾಗೆಯೇ ಮೃಗಗಳಾ
ಕತ್ತರಿಸಿ ತಿಂದು ಬಿಡುವಾ || ೩ ||

ಹಿಂಸದಾ ಕೃತಿಗಾಗಿ ಅಂಜಿದಾ ಪ್ರಾಣಿಗಳ
ಮಾಂಸದಾ ರುಂಡಗಳು ಮೃಗರಾಜ ಬಳಿ ಇಹವು
ಹಿಂಸದಾ ತನ್ನ ಕೃತಿಗಳಿಗೆ ನೋಡಿ ನಲಿವನು
ಮೃಗರಾಜ ಮನದಲ್ಲೇ || ೪ ||

ಮೃಗರಾಜನಿಗೆ ಮಾತ್ರ ವನಭೋಜನವಾಯ್ತು
ಮೃಗಗಳಿಗೇ ಮಾತ್ರ ಪ್ರಾಣ ಆಹುತಿ ಆಯ್ತೊ
ಜಗದಲ್ಲೀ ನಡೆವುದು ನಿತ್ಯ ಕೃತಿ ಮತ್ತೇಕೇ
ಮೃಗರಾಜ ಬೇಟೆಯಿಂ || ೫ ||
*****

Tagged:

Leave a Reply

Your email address will not be published. Required fields are marked *

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...