ಕುಲವೆಲ್ಲಿದೆಯೋ
ಕಲಿಯುಗ ಧರ್‍ಮದಲಿ
ಶಿಲೆಯಾಗಿ ಹೋಗಿದೆಯೆ ಮನುಜವಂಶದಲಿ || ೧ ||
ನೀತಿ ಬರಗೆಟ್ಟಿತಯ್ಯೋ
ರೀತಿ ಅಳಿಸಿತು ಧರ್‍ಮದಲಿ
ಯಾತಿಕೇನೆಲಿಸಿಹದು ನರಜನ್ಮವೋ || ೨ ||
ಬುದ್ಧಿ ಮತಿಗೆಟ್ಟು ಹೋಗಿ
ಇದ್ದ ಐಶ್ವರ್‍ಯವ ನುಂಗಿ
ಕದ್ದು ಬರುವ ಯೋಜನೆ ಕಲಿಸಿತೇ || ೩ ||
ಕುಲಭೇದ ಕಂಡು
ಕುಲಗೆಟ್ಟ ಕಲಿಗಳು
ಕುಲುಕುಲು ನಗುತಿಹರು ನಾಮದಲಿ || ೪ ||
ಜನಿಸಿದ ಮಹಾತ್ಮರು
ಮನಅಂಜದೆ ಬಂದು
ಕೊನೆಗೆ ಬಲಿಯಾಗುವರು ಹುತಾತ್ಮರಲಿ || ೫ ||
ನಾರಿಗಣ್ಣಿನಾ ಭಕ್ತಿಗೇ
ನರರ ನೋಯಿಸಲೇಕೆ
ಖರೆಯಾಗಿ ಶಿಲೆಯಾಗುವೆನೆಂದ ದೇವಾ || ೬ ||
ಕಲ್ಲು ಮೂರ್‍ತಿಗೆಂದು
ಹಲ್ಲನು ಕಡಿಯುತಲಿ
ಬೆಲ್ಲ ಭಾಗ್ಯವನು ಕಾಣ್ಬೇಕೆನ್ನುವರು. || ೭ ||
ಕ್ರೂರ ಕರ್‍ಮಗಳು ತುಂಬಿ
ಹೊರೆಯಾದ ಪಾಪಗಳನ್ನು
ಸುರಿಸುವದು ಕುಲವಿಲ್ಲದೇಶವು || ೮ ||
*****








