ಪೂರ್‍ಣಿಮೆಯ ಚಂದಿರನು
ವರ್‍ಣದಲಿ ತೇಲಿಹನು
ಕರ್‍ಣನಯನದಿ ತೋರುವ ಸೌಂದರ್‍ಯದಿ || ೧ ||
ಅಡಗಿಹದು ಪೂರ್‍ಣೆಮೆಯು
ದಡದನದಿ ತೀರದಲ್ಲಿ
ಕಾಡಾಡಿ ಬೇಡುವದು ಶಾಂತಿ ಕನಸನ್ನು || ೨ ||
ಸೃಷ್ಟಿಕರ್‍ತನ ಸೃಷ್ಟಿ
ಶಿಷ್ಟದಿ ಒಡಮೂಡಿಹದು
ಕಷ್ಟ ತಾನೆ ಏನು ಪೂರ್‍ಣಿಮೆ ಬೆಳಕು || ೩ ||
ಕವಿ ಹೃದಯ ಓಟ
ಆವ ಹರುಷಲಿಹದು
ಕಾವನರನು ಹೇಳಲು ಸಾಧ್ಯ || ೪ ||
ನಿಜಶಾಂತಿ ನೆಲೆಸಿಹದು
ನಿಜ ಪೂರ್‍ಣಿಮೆ ಚಂದಿರನ
ಗಜದೂರ ವಿರುವ ಮೃಗಪಕ್ಷಿಗಳಿಗೆ || ೫ ||
ಕ್ರೂರ ಕರ್‍ಮವ ಮುಗಿಸಿ
ಮರೆತುನಿದ್ದಹ ಮೃಗ
ಕರೆದುಬಂದಂತೆ ಬಂತು ತಟಾಕಕೆ || ೬ ||
ಕಾನನಕೇ ರಮ್ಯ ಪಟ್ಟಣಕೇಭವ್ಯ
ಮನಕೇಶಾಂತಿ ಜನಕೆ ಆಶ್ಚರ್‍ಯ
ಕನಸಾಗಿ ನೆಲೆಸಿಹದು ಪೂರ್‍ಣಿಮೆ || ೭ ||
*****








