ಉದಯದಲಿ ಸೋಬಗಿನಲಿ
ಶಾಂತತೆಯ ಚಲುವಿನಲಿ
ಕವಿಯೋರ್ವ ಕಂಡೆನಾ,-
ಕಾನನದ ಕವಲಬಳಿ.
ಕವಿ ಕಾವ್ಯ ಫಲಬಯಸಿ
ಕಾವ್ಯ ರಾಜ್ಯವ ನೆನೆಸಿ,
ಕವಿಯ ನಾ ಕಾಡಿದೆನು
ಕಾನನದ ಕವಲಬಳಿ,
ಕವಿಯೆನ್ನ ದೀರ್ಘನೋಡಿ
ಮೊಗದಗೀಳನು ನೋಡಿ,
ವನದ ಹಿರಿಮೆಗೆ ಒಯ್ದನು
ಕಾಂತಿಗಲ್ಲಿಗೆ ತಂದನು.
ಕಾಂತಿ ಜ್ಯೋತಿಯ ನೋಡಿ
ಕಲೆಯ ಬೀಡನು ಕೂಡಿ
ಸರುನೇರ ಸಾಗಿದೆವು-
ನಭದ ಹಕ್ಕಿಯ ನೋಡಿದೆವು
ಮೌನ ನಿಬಿಡದಿ ಸರಿದು
ಜೋಗುಳದ ನಿಧಿಯಲ್ಲಿ ಮೆರೆದು
ಕವಿಯೊಮ್ಮೆ-ಸೊಬಗನೊಮ್ಮೆಯೆ
ಹಾಡಿದನು, ಸೃಷ್ಟಿಮಿಲನದಿ
ಪಾಡಿದನು, ಜೀವಕುಲದಲಿ
ಮೆರೆದು, ನಾ-ಜಾಲನೋಡಿಯೆ ಸರಿದು;
ಕವಿಯ ನಾ ಹೊಗಳಿ, ಗೀಳಬಿಟ್ಟೋಡಿದೆನು.
*****









