ಜೀವನ, ಸರಸವಿರಸದಲಿ ತಲೆಯೆತ್ತಿ ತೂರುವೆನು, ನನ್ನಾತ್ಮವನು ತೃಪ್ತಿಸುವ ವಾಣಿಯನು ಸ್ತುತಿಸುವೆನು; ಜಗಜಾಳಿನಾವರಣದಲಿ, ಸುಗಂಧಿಸುವ ಮಾರುತನ; ಮರೆಹೊಕ್ಕು, ಜೀವನಜಾಡನ್ನು ಜಾರಿ; ಮನದ ದುಗುಡವ ಕಳೆಯುವೆನು-ನಾನು. ಶಕ್ತಿಮಯ ಪ್ರಬಲದಲಿ ನಿಧಿನಿಕ್ಷೇಪ,...

ವಿಜಯಹಾದಿಯ ಸುತ್ತಲು ಎತ್ತಲು, ಮುಚ್ಚಿತು ಮುಬ್ಬು ಹೇರಳದಿ; ದೂರದ ಶಿಖರದಿ ಮಿನುಗಿತು ವಿದ್ಯುತ್, ಭೀಕರ ದಿನಗಳಲಿ. ಬಂಟನ ಭರವಸೆ ಸಾಗಿತು ಹಾರಿ, ಧರೆಯಲಿ ಮೆರೆಯುತ ನೆಟ್ಟನೆ ಸಾರಿ; ಕೊಂಬುತುತ್ತೂರಿ ತುಂಬಿತು ನೆರವಿ, ಸಮರವ ಇಮ್ಮಡಿಸಿ. ಸ್ವಚ್ಛ ಸ...

ರವಿಕಿರಣ ತಿಳಿಬೆಳಕು ಬಾನಿನಲಿ ಬೆಳಗುತಿರೆ, ಮೇಘಮಯ ಮುಗಿಲಲ್ಲಿ ಚಲುರಶ್ಮಿ ಬೆಳಗುತಿರೆ, ಮೂಡಲಿನ ನಾಡಿನಲಿ ವೈಭವವು ನಲಿಯುತಿರೆ, ಮುಂಜಾನೆ ಮೆರೆಯಿತು ನಿಶಿದೆಸೆಯ ನೆರೆದಾಟೆ. ತೆಂಕಲಿನ ತಂಗಾಳಿ ತೀಡುತಿರೆ ಇಂಪಾಗಿ, ಮೋದದಲಿ ಹಾಡುತಿರೆ ಹಕ್ಕಿಗಳು ...

ಇರುಳಿನಲಿ ದೀವಿಗೆ- ಸಿರಿನಾಡತೇರಿಗೆ ಮುದುಭಾವ ಹಿರಿಮೆಯನು ನಿಧಿಯಾಗಿ ಬೆಸೆಸಿತು. ಪ್ರಬುದ್ಧ ಮಾರ್ಗದಲಿ- ನಿಬ್ಬಣದ ಜತೆಯಾಗಿ ಉಜ್ವಲದ ಕಾಂತಿಯನು ಕೆಚ್ಚಿನಲಿ ತಂದಿತು. ದೀವಿಗೆಯ ಮೆರಗು- ಜೀವನದ ಅರಗು ಸುತ್ತುತಲಿ ಬಳಿಸುತಲಿ ಬಿತ್ತರದಿ ಮುಟ್ಟಿತು....

ಮಿಂಚಿನ ಗೊಂಚಲು ಸುತ್ತಲು ಎತ್ತಲಿ, ಸುಳಿಸುಳಿಗಾಳಿಯ ನಡುಎಡೆಪಥದಲಿ ಕಪ್ಪನೆಮೋಡದ ಮುಬ್ಬಿನದೆಸೆಯಲಿ ಮಿನಿಗಿತು, ಮೆರೆಗಿತು, ಕಿರುತಾರೆ! ಪಡುವಲನಾಡಿನ ಮಲೆಯಸ್ತೋಮದಿ, ಮೂಡಲತಗ್ಗಿನ ಹಚ್ಚನೆಹಳುವಲಿ ನಾಡಿನ ತೀರದ ಸುಳಿವಿನ ಗೆಲುವಲಿ ದೋರಿತು, ಮೆರೆಯ...

[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧ...

೧ ನಿಸರ್ಗವನದಲಿ, ಕಂಗೊಳಿವ ಕಾನನದಿ ಕುಳಿತು ಕೂಗುವ ನೀ! ಪುಟ್ಟಹಕ್ಕಿ! ಪ್ರೇಮಮಯ ಪತಿತಪಾವನವ ನೀ! ಹಾಡು ಓ! ಪುಟ್ಟ ಹಕ್ಕಿ! ಓ! ನಿನ್ನ ಉತ್ತೇಜ ಉತ್ಸಾಹವನು ಹಾಡಿ! ಓ! ನಿನ್ನ ಗಾನಚಿಲುಮೆಯನು ತೋಡಿ! ಪತಿತಪಾವನವ ನೀ! ಹಾಡು ಓ! ಪುಟ್ಟ ಹಕ್ಕಿ! ೨ ಸ...

ರಂಗಸ್ಥಳ, ತಾರಾಪಥ ಲೀಲಾಮಯ ಜಗವು ತೇಜೋಬಲ, ಸ್ಫುರಣದ್ರವ ಕವಿ ಕ್ರೀಡಾವನವು. ಗಾಯನ ವೀಣಾವಾತನ ಸಾಧನವಾದನೆಯು ಆರಾಧನೆ, ರಸಸ್ವಾದನೆ ವೈಣಿಕನಾದೋಪಾಸನವು. ಮೋಹಿನಿ, ನೃತ್ಯಪರಾಯಿಣಿ ಕಂಕಣ ಝಂಕೃತಿಯು ಮುಖಭಂಗಿಯ ಭಾವತರಂಗವು ರೂಪಾರಾಧನಚೇತನವು. ಬಾನ್‌ಬ...

ನಿಬಿಡವನದಲಿ ಪಟ್ಟಮುದ್ರೆಯನೊತ್ತಿ, ಮಿಳಿದಿರುವೆ ರಂಗದಲಿ ವನಜ್ಯೋತ್ಸ್ನೆ! ನಿಲುವಾಭರಣ ಚಲುವಸುಂದರಿಪಾರೆ! ಪ್ರಕೃತಿ ತೋರಣದಲ್ಲಿ ಕೂಡಿರುವೆ, ವೈಯ್ಯಾರವನಿತೆ! ಕಲಕಲನಿನಾದ ಚಲಚಲನೆ ವೈಖರಿಯ ತೋರಿರುವೆ, ಸೃಷ್ಟಿ ಚೇತನದಲ್ಲಿ; ಸಂಭೂತೆ! ನಸುಗೆಂಪುಬಣ...

ನಸುಗಾಳಿ ಸುಳಿದು ಗಗನದಲಿ ನೆಗೆದು, ಹೊಸ ನಗೆಯ ಸೆಳೆದಿತ್ತು ರಜನಿಯಲಿ ಮಿಂದು; ದೂರದಲಿ ತಟನಿಯಲಿ ಮೂಕದಲಿ ಹಾಯ್ದು, ಬೆರೆದಿತ್ತು ಇಳೆಯಲ್ಲಿ ಒಮ್ಮೆಯಲೆ ಉಳಿದು; ಯೋಜನದ ಗಗನದಲಿ ಕವಿದಿತ್ತು ಮುಸುಕು, ಮಂಡಲವನೆಲ್ಲವನು ಹುದುಗಿಟ್ಟು ನುಗಿದು; ಮಲೆಗಳ...