ನಿಬಿಡವನದಿ, ಹರಿವನದಿಯು
ಸೊಗವತೋರಿತು.
ಮುಗಿಲತಿಳಿವು, ಬಾನತಳುಕು
ದಾರಿತೋರಿತು.
ನದಿಯನೇರಿ, ನೀರಹಾಯ್ದು
ದೋಣಿಸಾಗಿತು.
ಪಡುವಬೆಳಕು, ಉದಯಭಾನು
ಮುಗಿಲನೇರಿತು.
ಬಾನಚಲುವು, ಬಯಲಬಣ್ಣ
ಮೆರುಗುತೋರಿತು.
ದಿಗಂತವೇರಿ, ಧಾಮತೋರಿ
ದೋಣಿಸಾಗಿತು.
ವನದನಡುವೆ, ಗೆಲುವತೋರಿ
ಹಕ್ಕಿ ಹಾಡಿತು.
ರವಿಯರೇಣು, ಕಾಂತಿಕಿರಣ
ಭುವಿಯಬೆಳಗಿತು.
ದೋಣಿಹಾಯ್ದು, ತೀವ್ರ ಸಾಗಿ
ದಡವಸೇರಿತು.
*****









