ಕವಿ – ಕೋಗಿಲೆ
ಚಲುಕೋಗಿಲೆ
ಕೂಗಿತು ಬನದಿ,
ವನದಾಸಲೆ
ಮುದದಾನೆಲೆ
ತೂಗಿತು ನಭದಿ.
ಮುದುಮಂಜುಳ
ರವದಂಗಳು
ಮಿಲಿಸಿತು ಬನವ,
ಮಧುಮಾಸದ
ನವಲಾಸ್ಯದಿ
ತುಂಬಿತು ಮನವ.
ಮುಗಿಲಂಚಿನ
ಕೊನೆಮಿಂಚಿತು
ಝುಲ್ಲನೆ ಹೊಳೆಸಿ,
ತಟದಾನೆಲೆ
ಮುಗುಳಾಮೆಳೆ
ನಿಶಿಯಲಿ ಮೆರೆಸಿ.
ಸರುತೀರದ
ಮುದನೇರವ
ಹೊಳೆಸಿತು ಛಾಯೆ!
ಕಿರುತಾರೆಯ
ನೆರೆಪಾರವ
ಮೆರೆಸಿತು ಮಾಯೆ!
ಅತಿದೂರದ
ಮಲೆಮೇರುವ
ಒಮ್ಮೆಲೆ ತೋರಿ,
ಸರಿನೀರವ
ಪರಿಠಾವನು
ಏಕದಿಹಾರಿ.
ಪಡುನಾಡಿನ
ಎಳೆಗಾಳಿಯು
ಚಿಮ್ಮಿತು ಎಡೆಗೆ,
ಇಡಿಕಾವಳ
ಬಲೆಹಾಳೆಯ
ಮೀರಿತು ಕೊನೆಗೆ.
ಅಣುರೇಣಿನ
ರವದೇಳಿಗೆ
ಕೂಡಿತು ಬಾನು,
ಇಳೆಯಲ್ಲಿನ
ತರವೆಲ್ಲವ
ಬೆಳೆಗಿತು ತಾನು.
*****









