Home / ಕವನ / ಕವಿತೆ / ಸುಖವುಂಟು!

ಸುಖವುಂಟು!

(ಗಂಡನ ಉತ್ತರ)

“ಮುಗುದೆ! ಮೋಹನೆ! ನಲ್ಲೆ! ನಿನ್ನ ಮಾತನು ಕೇಳಿ
ನಗುವುಕ್ಕಿ, ತುಟಿ ಮಿಕ್ಕಿ, ಬರುತಿರುವುದು,
ನಸು ಮುನಿಸ ಹೊರ ಸೂಸಿ, ಕೊಂಕು ಹೂನುಡಿ ಚೆಲ್ಲಿ,
ಬಿಂಕವೆಸೆವುದಿದೆಷ್ಟೊ ಚೆನ್ನಿರುವುದು

ಬಣ್ಣ ಬೆಡಗಿನ ಜರಿಯ ಸೀರೆಯೇತಕೆ ನಿನಗೆ?
ಸರಳತೆಯ ಚೆಲು ಸೀರೆ ಸಾಲದೇನು?
ಆ ಶಕುಂತಲೆ ನಾರ ಬಟ್ಟೆಯನುಟ್ಟಿರಲು
ದುಷ್ಯಂತನಿಗೆ ಚೆಲುವನೀಯಳೇನು?

ಹೊನ್ನ ಭೂಷಣವೇಕೆ? ಲೋಹ ಹೊರೆಯಲ್ಲವೆ?
ಆಭರಣವಿಲ್ಲದರೆ ಚೆಲುವು ಕುಂದೇ?
ಸೀತೆ-ಪಾಂಚಾಲೆಯರಿಗಿದ್ದುವೇ ತೊಡವುಗಳು
ಕಾಡಿನಲೆದಾಟದಲಿ?- ಪತಿಯ ಜೊತೆಯೊಂದೇ

ನನ್ನ ತೋಟದೊಳಿಷ್ಟು ಹೂಗಳರಳುತ್ತಿರಲು
ಓರಣದಿ ತಲೆ ಬಾಚಿ, ಹೂ ಮುಡಿದರೇನು?
ದಿನದಿನಕೆ ನಿತ್ಯ-ನೂತನವಾದ ಹೂ ದಂಡೆ
ಹೊನ್ನಿಗಿಂತಲು ಚಂದವಲ್ಲವೇನು?

ಕುಸುಮಗಳ ಸೌಸವವು, ಚಲುವಿನಲಿ ವಿವಿಧತೆಯು,
ಮಾರ್ದವವು, ಹೊ೦ದೊಡವುಗಳಿಗಿರುವುದಿಲ್ಲ
ಕೃತ್ರಿಮತೆಯಲಿ ಚೆಲುವನಾನುವುದು ತರವಲ್ಲ;
ನೈಜತೆಯ ಸೌ೦ದರ್ಯ ಸಾಕು ನಮಗೆಲ್ಲ

ಬಾಹ್ಯ ವಸ್ತುಗಳಲ್ಲಿ ಸುಖ ಹುದುಗಿ ಕೊಂಡಿಲ್ಲ
ಮನದ ಮರೆಯಲಿ ಮನೆಯ ಮಾಡಿರುವುದು
ಆಸೆ ಮುಗಿಲುಗಳೋಳಿ ತಿಳವು ಗಾಳಿಗೆ ಚೆದರೆ,
ತೃಪ್ತಿ ನಭದಲಿ ಸೊಗದ ನೇಸರೆಸೆಯುವುದು

ಕವಿತೆಗಳ ಗಂಧರ್ವ ಲೋಕದ ವಿಹಾರದಲಿ,
ಕಥೆ ವಾಚನದ ಕಿನ್ನರರ ಕೂಟದಲ್ಲಿ,
ನಾಟಕಂಗಳ ನಾಕದಪ್ಸರೆಯ ಲಾಸ್ಯದಲಿ
ಸುಖವುಂಟು ಮನದನ್ನೆ! ಭಾವಲಹರಿಯಲಿ”
*****
೧೯೪೬

Tagged:

Leave a Reply

Your email address will not be published. Required fields are marked *

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...